ನಿರಂತರ ನಾಟಕೋತ್ಸವಕ್ಕೆ ಚಾಲನೆ
ಮೈಸೂರು

ನಿರಂತರ ನಾಟಕೋತ್ಸವಕ್ಕೆ ಚಾಲನೆ

March 25, 2021

ಮೈಸೂರು, ಮಾ.24(ಎಸ್‍ಪಿಎನ್)- ಆಧುನಿಕ ರಂಗಭೂಮಿ ನಾಟಕಗಳನ್ನು ಗ್ರಾಮೀಣ ಪ್ರದೇಶದ ಜನರಿಗೂ ಪರಿಚಯಿಸಬೇಕು. ಇದಕ್ಕೆ ನಗರ ಪ್ರದೇಶದ ಸಂಘ-ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆಯಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಪ.ಮಲ್ಲೇಶ್ ಸಲಹೆ ನೀಡಿದರು.

ಮೈಸೂರಿನ ರಮಾಗೋವಿಂದÀ ರಂಗಮಂದಿರ ದಲ್ಲಿ `ನಿರಂತರ ಫೌಂಡೇಶನ್’ ಆಯೋಜಿಸಿದ್ದ 5 ದಿನಗಳ `ನಿರಂತರ ನಾಟಕೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಿರಂತರ ಸಾಂಸ್ಕøತಿಕ ತಂಡದ ಸದಸ್ಯರು 30 ವರ್ಷಗಳಿಂದ ಹಲವು ಸಾಮಾ ಜಿಕ ಬದಲಾವಣೆ ತರುವ ನಾಟಕಗಳನ್ನು ಪ್ರದರ್ಶಿಸುತ್ತಿ ದ್ದಾರೆ. ವಿದ್ಯಾರ್ಥಿಗಳು ರಂಗಭೂಮಿಯಲ್ಲಿ ತೊಡಗಿಸಿ ಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಸಮಾಜದಲ್ಲಿರುವ ಸಮಸ್ಯೆಗಳೇ ಹಾಗೂ ನಾವು-ನೀವು ಸಮಾಜದಲ್ಲಿ ಕಂಡ ಘಟನೆಗಳೇ ನಾಟಕದ ಕಥಾ ವಸ್ತುವಾಗಿರುತ್ತದೆ. ಇದನ್ನೇ ಕಲಾವಿದರು ರಂಗದ ಮೇಲೆ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಹಾಗಾಗಿ ನಾಟಕಗಳು ನಮ್ಮ-ನಿಮ್ಮ ನಡುವೆ ಸಂಭವಿಸುವ ಘಟನೆಗಳು ಕನ್ನಡಿಯಲ್ಲಿನ ಪ್ರತಿಬಿಂಬದಂತೆ ಇರುತ್ತವೆ ಎಂದರು.

ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಪುರಾಣ ಕಥೆಗಳು ನಾಟಕದ ರೂಪದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಆದರೆ, ನಗರ ಪ್ರದೇಶದಲ್ಲಿ ಪ್ರದರ್ಶನಗೊಳ್ಳುವ ಆಧುನಿಕ ರಂಗಭೂಮಿ ನಾಟಕಗಳು ಪ್ರದರ್ಶನಗೊಳ್ಳುವು ದಿಲ್ಲ. ಈ ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಪ್ರದರ್ಶನಗೊಳ್ಳಲು ನಿರಂತರ ತಂಡದ ಸದಸ್ಯರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಮುಡಾ ಆಯುಕ್ತ ಡಿ.ಬಿ.ನಟೇಶ್ ಮಾತನಾಡಿ, ಒಂದು ನಗರದಲ್ಲಿ ರಂಗ ಚಟುವಟಿಕೆ ನಿರಂತರ ನಡೆಯುತ್ತಿ ದ್ದರೆ ಆ ನಗರದ ಸಾಂಸ್ಕøತಿಕ ಕ್ಷೇತ್ರ ಸಾಕಷ್ಟು ಶ್ರೀಮಂತ ವಾಗುತ್ತದೆ. ನಾಟಕದ ಪಾತ್ರಗಳು ಪ್ರೇಕ್ಷಕರ ಮನಃಪರಿ ವರ್ತನೆಗೆ ಸಾಕ್ಷಿಯಾಗಬೇಕು ಎಂದು ಸಣ್ಣ ಘಟನಾವಳಿ ಮೂಲಕ ವಿವರಿಸಿದರು. ವೇದಿಕೆ ಕಾರ್ಯಕ್ರಮ ನಂತರ ಪ್ರಸಾದ್ ಕುಂದೂರು ಹಾಗೂ ಸುಗುಣ ನಿರ್ದೇಶನದ `ಕೂಡಲ ಸಂಗಮ’ ನಾಟಕ ಪ್ರದರ್ಶನಗೊಂಡಿತು.

Translate »