ಪುತ್ರ ಪ್ರಜ್ವಲ್ ಗೆಲುವಿಗಾಗಿ ಹಾಸನದಲ್ಲಿ ರೇವಣ್ಣ-ಭವಾನಿ ಪ್ರಚಾರ
ಹಾಸನ

ಪುತ್ರ ಪ್ರಜ್ವಲ್ ಗೆಲುವಿಗಾಗಿ ಹಾಸನದಲ್ಲಿ ರೇವಣ್ಣ-ಭವಾನಿ ಪ್ರಚಾರ

March 21, 2019

ಹಾಸನ: ಜಿಲ್ಲೆಯ ಅಭಿವೃದ್ಧಿ ದೃಷ್ಟಿ ಯಿಂದ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನನ್ನ ಮಗ ಪ್ರಜ್ವಲ್‍ನನ್ನು ಗೆಲ್ಲಿಸಿ ಎಂದು ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ಮನವಿ ಮಾಡಿದರು.

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧ ವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತ ನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು? ಕುಮಾರಸ್ವಾಮಿ ಮುಖ್ಯ ಮಂತ್ರಿಯಾದ ಮೇಲೆ ರೈತರ 47 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ, ರೈತರ ಬ್ಯಾಂಕ್ ಖಾತೆಗೆ 6 ಸಾವಿರ ರೂ. ಹಾಕುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ, ಈಗ ಮೀನಾ-ಮೇಷ ಎಣಿಸು ತ್ತಿದೆ. ಬಿಜೆಪಿಯವರು ಎಷ್ಟು ಸುಳ್ಳು ಹೇಳುತ್ತಿದ್ದಾರೆ ಎಂಬುದು ಜನತೆಗೆ ತಿಳಿದಿದೆ ಎಂದು ಟೀಕಿಸಿದರು.

ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯ ಬೇಕೆಂಬುದೇ ದೇವೇಗೌಡರ ಉದ್ದೇಶ. ಇಂಜಿನಿಯ ರಿಂಗ್ ಕಾಲೇಜಿಗಾಗಿ ಕುಮಾರಸ್ವಾಮಿ 50 ಕೋಟಿ ರೂ. ಕೊಟ್ಟಿದ್ದಾರೆ. ನಗರದ ಸರಕಾರಿ ಆಸ್ಪತ್ರೆಗಾಗಿ 400 ಕೋಟಿ ರೂ. ಕೊಡಲಾಗಿದೆ. 2 ಪಿಯು ಕಾಲೇಜುಗಳಿಗೆ 15 ಕೋಟಿ ರೂ, ಹೊಸ ಬಸ್ ನಿಲ್ದಾಣ ರಸ್ತೆಗೆ 140 ಕೋಟಿ ರೂ. ಮಂಜೂರಾಗಿದೆ. ಕುಡಿಯುವ ನೀರಿಗಾಗಿ ಜಿಲ್ಲೆಗೆ 300 ಕೋಟಿ ರೂ, ಹಾಸನ ನಾಲ್ಕು ಬೈಪಾಸ್ ರಸ್ತೆಗಳಿಗೆ ಕೋಟ್ಯಾತರ ರೂ, ಹಾಸನದಿಂದ ದೊಡ್ಡಪುರದವರೆಗೂ 40 ಕೋಟಿ ರೂಗಳಲ್ಲಿ ದ್ವಿಪಥಕ್ಕೆ ಟೆಂಡರ್ ಕರೆದು ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕೋಮುವಾದಿ ಶಕ್ತಿಗಳನ್ನು ದೂರವಿಡಬೇಕೆಂದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ, ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ. ಕುಮಾರ ಸ್ವಾಮಿ ಜತೆಗೂಡಿ ಹೋರಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬದಲಾವಣೆ ಬರಲಿದೆ. ಈ ಚುನಾವಣೆ ಯಲ್ಲಿ ರಾಜ್ಯದಲ್ಲಿ ಮೈತ್ರಿಪಕ್ಷ ಕನಿಷ್ಠ 25 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಮಾತನಾಡಿ, ನನ್ನ ಮಗ ಪ್ರಜ್ವಲ್‍ನನ್ನು ಈ ಚುನಾವಣೆಯಲ್ಲಿ 3 ಲಕ್ಷಕ್ಕೂ ಹೆಚ್ಚಿನ ಅಧಿಕ ಮತ ಗಳಿಂದ ಗೆಲ್ಲಿಸಿಕೊಡಿ. ದೇವೇಗೌಡರ ಕುಟುಂಬ ನಮ ಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಕುಟುಂಬ ಆಗಿದೆ. ನೀವೆಲ್ಲರೂ ಭವಾನಿಯ ಸೋದರರು ಎಂದರು.

ಈ ಸಂದÀರ್ಭ ರಾಜೇಶ್, ನಗರಸಭೆ ಸದಸ್ಯ ಮಂಜು ನಾಥ್, ಬಿಟ್ಟಗೌಡನಹಳ್ಳಿ ಪರಮೇಶ್, ಮಂಜುನಾಥ ಶರ್ಮ, ಮಣಚನಹಳ್ಳಿ ರವಿ ಮತ್ತಿತರರಿಗೆ ಜೆಡಿಎಸ್ ಶಾಲು ಹೊದಿಸಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪಕ್ಷಕ್ಕೆ ಬರಮಾಡಿಕೊಂಡರು.
ಆಲೂರು-ಸಕಲೇಶಪುರ ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಹುಡಾ ಅಧ್ಯಕ್ಷ ಕೆ.ಎಂ.ರಾಜೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಸಿ.ಆರ್. ಶಂಕರ್, ಜಿಪಂ ಮಾಜಿ ಅಧ್ಯಕ್ಷ ಬಿ.ಆರ್.ಸತ್ಯನಾರಾ ಯಣ್, ಜೆಡಿಎಸ್ ತಾಲೂಕು ಅಧ್ಯಕ್ಷ ದ್ಯಾವೇಗೌಡ, ಜಿಪಂ ಸದಸ್ಯ ಸ್ವರೂಪ್, ಎಪಿಎಂಸಿ ಜಯರಾಂ, ನಗರಸಭೆ ಸದಸ್ಯ ಅಮೀರ್ ಜಾನ್ ಉಪಸ್ಥಿತರಿದ್ದರು.

Translate »