ಕಂದಾಯ, ಸರ್ವೆ ಇಲಾಖೆಯಲ್ಲಿ 2 ತಿಂಗಳಿಂದ ರೈತರ 6 ಲಕ್ಷ ಅರ್ಜಿ ಬಾಕಿ
ಮೈಸೂರು

ಕಂದಾಯ, ಸರ್ವೆ ಇಲಾಖೆಯಲ್ಲಿ 2 ತಿಂಗಳಿಂದ ರೈತರ 6 ಲಕ್ಷ ಅರ್ಜಿ ಬಾಕಿ

March 15, 2021
  • ಮೈಸೂರಿನ ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ನೇರ ಆರೋಪ
  • 75 ಕೋಟಿ ರೂ. ಶುಲ್ಕ ಪಾವತಿಸಿದ್ದರೂ ದಾಖಲೆ ಒದಗಿಸದ ಇಲಾಖೆಗಳು

ಮೈಸೂರು, ಮಾ.14(ಎಂಟಿವೈ)- ಭೂಮಿಗೆ ಸಂಬಂಧಿಸಿ ವಿವಿಧ ದಾಖಲೆಗಳಿ ಗಾಗಿ ರಾಜ್ಯದಲ್ಲಿ 6 ಲಕ್ಷ ಮಂದಿ ಒಟ್ಟು 75 ಕೋಟಿ ರೂ. ಶುಲ್ಕ ಪಾವತಿಸಿದ್ದರೂ ಯಾವುದೇ ದಾಖಲೆ ಮಾಡಿಕೊಡದೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ರೈತರು ತಮ್ಮ ಒಡೆತನದ ಭೂಮಿಗೆ 11ಇ ನಕ್ಷೆ, ತತ್ಕಾಲ್ ಪೆÇೀಡಿ, ಅನ್ಯಕ್ರಾಂತ, ಹದ್ದುಬಸ್ತು, ಇ-ಸ್ವತ್ತು ಅಳತೆ ಸೇರಿದಂತೆ ವಿವಿಧ ದಾಖಲೆಗಾಗಿ ಅರ್ಜಿ ಸಲ್ಲಿಸಿ ದ್ದಾರೆ. ಈ ದಾಖಲೆಗಳಿಗಾಗಿ ರಾಜ್ಯದಲ್ಲಿ ಒಟ್ಟು 6 ಲಕ್ಷ ಮಂದಿ 75 ಕೋಟಿ ರೂ. ಶುಲ್ಕ ಪಾವತಿಸಿ 2 ತಿಂಗಳಿಂದ ಕಾದು ಕುಳಿತಿದ್ದಾರೆ. ನಿಯಮಾನುಸಾರ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ 30 ದಿನದೊಳಗೆ ಅರ್ಜಿದಾರರಿಗೆ ದಾಖಲೆ ಒದಗಿಸಬೇಕಿದೆ. ಆದರೆ ಕಂದಾಯ ಹಾಗೂ ಸರ್ವೆ ಇಲಾಖೆಗಳು ನಿಯಮ ಮೀರಿ 2 ತಿಂಗಳಿಂದ 6 ಲಕ್ಷ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿವೆ. ಇದರಿಂದಾಗಿ ರೈತರು ಮತ್ತು ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ದೂರಿದರು.

30 ದಿನದೊಳಗೆ ಕೆಲಸ ಮಾಡಿಕೊಡದಿದ್ದರೆ ಭೂಮಾಪಕರಿಂದ ತಲಾ 30 ರೂ., ಎಡಿಎಲ್‍ಆರ್‍ನಿಂದ 50 ರೂ. ಕಡಿತಗೊಳಿಸಿ ರೈತರಿಗೆ ನೀಡಬೇಕು. ಆದರೆ ಈ ನಿಯಮವನ್ನು ಯಾಕೆ ಅನುಷ್ಠಾನಗೊಳಿಸಿಲ್ಲ. 30 ದಿನಗಳ ಹಿಂಬಾಕಿಯಿಂದ ರೈತರಿಗೆ ಎಷ್ಟು ಹಣ ವಾಪಸ್ ನೀಡಿದ್ದೀರಿ? ಎಂದು ಸತ್ಯಪ್ಪ ಸರ್ಕಾರವನ್ನು ಪ್ರಶ್ನಿಸಿದರು.

ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಸರ್ವೆ ಇಲಾಖೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಭೂಮಾಪಕರಿಗೆ ವೇತನ-ಭತ್ಯೆ ನೀಡುತ್ತಿದ್ದರೂ, ಸರ್ಕಾರ ಶುಲ್ಕದ ರೂಪದಲ್ಲಿ ರೈತರಿಂದ ಹೆಚ್ಚುವರಿ ಹಣ ಪಡೆದು ಭೂ ಮಾಪಕರಿಗೆ ನೀಡುತ್ತಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಇ-ಸ್ವತ್ತು ಅಳತೆಗೆ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶ್ರೀಸಾಯಿ ವನಸಿರಿ ಸೇವಾ ಸಮಿತಿ ಅಧ್ಯಕ್ಷ ರವಿ, ಹುಣಸೂರು ತಾ. ಶ್ರವಣನಹಳ್ಳಿ ಗ್ರಾಪಂ ಸದಸ್ಯ ಕುಮಾರ್, ರಂಗಯ್ಯನಕೊಪ್ಪಲು ಸದಸ್ಯ ಬಸವರಾಜು ಸುದ್ದಿಗೋಷ್ಠಿಯಲ್ಲಿದ್ದರು.

 

Translate »