ಎನ್‍ಇಪಿಯಿಂದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ
ಮೈಸೂರು

ಎನ್‍ಇಪಿಯಿಂದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ

September 8, 2021

ಮೈಸೂರು, ಸೆ.7(ಎಂಟಿವೈ)- ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆÉ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ)ಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆವರಣದಲ್ಲಿ ಮಂಗಳ ವಾರ ಕಾಲೇಜು ಶಿಕ್ಷಣ ಇಲಾಖೆ, ಮಹಾ ರಾಣಿ ಮಹಿಳಾ ವಿಜ್ಞಾನ ಕಾಲೇಜು, ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಬಂಧಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಲಕಾಲಕ್ಕೆ ಶಿಕ್ಷಣ ನೀತಿಯಲ್ಲಿ ಮಾರ್ಪಾಡು ಮಾಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಕಲಿಸುವ ಹಾಗೂ ಕಲಿ ಯುವ ವಿಧಾನ ಬದಲಿಸುವುದು ಅನಿವಾರ್ಯ. ಕಲಿಸುವ ಮತ್ತು ಮೌಲ್ಯಮಾಪನದ ರೀತಿ ನೀತಿ ಬದಲಾವಣೆ ತರುವುದರೊಂದಿಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕಾಗಿದೆ. ಆಗ ಮಾತ್ರ ವಿಶ್ವದ ವಿವಿಧ ದೇಶಗಳೊ ಡನೆ ಸ್ಪರ್ಧೆ ಸಾಧ್ಯ. ಈ ನಿಟ್ಟಿನಲ್ಲಿ ಎನ್‍ಇಪಿ ಸಹಕಾರಿ. ಇದು ಜಾತಿ-ಧರ್ಮದ ನಡು ವಿನ ಸ್ಪರ್ಧೆಯಲ್ಲ. ಮುಂದುವರೆದ ರಾಷ್ಟ್ರ ಗಳ ನಡುವಿನ ಸ್ಪರ್ಧೆಯಾಗಿದೆ ಎಂದು ಅವರು ವಿಶ್ಲೇಷಿಸಿದರು.
ನಾವು ಪ್ರಪಂಚದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ, ಅವುಗಳಿ ಗಿಂತಲೂ ಉನ್ನತ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿ ವಿಶ್ವದಲ್ಲಿ ಬಲಿಷ್ಠರಾಗಬೇಕು. ಆಗ ಮಾತ್ರ ದೇಶದ ಭವಿಷ್ಯ ಉತ್ತಮಗೊಳ್ಳ ಲಿದೆ. ಇದಕ್ಕಾಗಿ ಶಾಲಾ-ಕಾಲೇಜಿನ ಶಿಕ್ಷಣ ಗುಣಮಟ್ಟ ಸುಧಾರಿಸಬೇಕು. ಹೊಸ ನೀತಿ ಜಾರಿಗೊಳಿಸುವುದರಿಂದ ಸÀರ್ಕಾರ ಯಾವು ದರ ಮೇಲೂ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿಲ್ಲ. ನಮ್ಮ ಆಡಳಿತಾ ವಧಿಯಲ್ಲಿ ಸುಧಾರಣೆ ತರುತ್ತೇವೆ. ಈಗ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ತರ ಲಾರಂಭಿಸಿದ್ದೇವೆ. ಬದಲಾವಣೆ ಪ್ರಾಥಮಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಬಹಳಷ್ಟು ವೇಗದಲ್ಲಿ ಸಾಗಲಿದೆ. ಎಲ್ಲಾ ಕ್ಷೇತ್ರದಲ್ಲೂ ಸಂಪೂರ್ಣ ಸುಧಾರಣೆ ತರುವ ಮಹತ್ವಾಕಾಂಕ್ಷೆ ಸರ್ಕಾರಕ್ಕಿದೆ. ವಿದ್ಯಾರ್ಥಿ ಗಳು ಮತ್ತು ಯುವ ಜನರಿಗೆ ಅನುಕೂಲ ಆಗುವಂತೆ ವಿದ್ಯಾರ್ಥಿ ಕೇಂದ್ರಿತ ಸುಧಾ ರಣೆಗೆ ಒತ್ತು ನೀಡಿದ್ದೇವೆ. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಮೂಲಕವೇ ಸುಧಾ ರಣೆ ತರುವ ಗುರಿ ನಮ್ಮದು. ಇದಕ್ಕಾಗಿ ಅಧಿಕಾರ, ಸ್ವಾತಂತ್ರ್ಯ ಹಾಗೂ ಸಂಪನ್ಮೂಲ ಒದಗಿಸಲು ಸರ್ಕಾರ ಬದ್ಧ ಎಂದÀರು.

ಎನ್‍ಇಪಿ ವಿದ್ಯಾರ್ಥಿ ಸ್ನೇಹಿಯಾಗಿದೆ. ಇದರ ಪಯಣ ಈಗ ಆರಂಭವಾಗಿದೆ. ಮುಂದಿನ 20 ತಿಂಗಳೊಳಗೆ ಸಾಧ್ಯವಾದಷ್ಟು ಸುಧಾರಣೆ ತರಲು ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸುತ್ತೇವೆ. ಈಗಾಗಲೇ ಸರಕಾರಿ ಕಾಲೇಜುಗಳಲ್ಲಿ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಲಾಗಿದೆ. ಶಿಕ್ಷಣ ಸಂಸ್ಥೆ ಆಡ ಳಿತವನ್ನು ಸರಳೀಕರಣಗೊಳಿಸಲಾಗು ವುದು. ಖಾಸಗಿ ಕಾಲೇಜುಗಳಿಗಿಂತಲೂ ಹೆಚ್ಚು ತಂತ್ರಜ್ಞಾನ ಸೌಲಭ್ಯಗಳನ್ನು ಸರಕಾರಿ ಕಾಲೇಜುಗಳಲ್ಲಿ ಕಲ್ಪಿಸಿದ್ದೇವೆ. ತಂತ್ರಜ್ಞಾನ ಸಾಧನಗಳು ಮತ್ತು ಇಂಟರ್‍ನೆಟ್ ಒದಗಿಸಿ ದ್ದೇವೆ. ಯಾವ ಖಾಸಗಿ ಕಾಲೇಜಿಗೂ ಕಮ್ಮಿ ಇಲ್ಲದ ಸ್ಮಾರ್ಟ್ ತರಗತಿ ವ್ಯವಸ್ಥೆ ಮಾಡಿದ್ದೇವೆ. ಈ ರೀತಿಯ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ದ ಯುನೈಟೆಡ್ ಯುನಿವರ್ಸಿಟಿ ಆ್ಯಂಡ್ ಕಾಲೇಜ್ ಮ್ಯಾನೇಜ್‍ಮೆಂಟ್) ಜಾರಿಗೊಳಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದಾಗಿ ತಿಳಿಸಿದರು.

ಕಾಲೇಜುಗಳು ಹೇಗಿರಬೇಕೆಂಬ ಕಲ್ಪನೆ ಯನ್ನು ‘ಇನ್ಸ್‍ಸ್ಟಿಟ್ಯೂಷನ್ ಡೆವಲಪ್‍ಮೆಂಟ್ ಪ್ಲಾನ್’ ಅನ್ನು ವಿದ್ಯಾರ್ಥಿಗಳೇ ನಿರ್ಧ ರಿಸಲು ಸ್ವಾತಂತ್ರ್ಯವಿದೆ. ಇದಕ್ಕೆ ಇರುವ ಅಡೆತಡೆಗಳನ್ನು ಶೀಘ್ರವೇ ನಿವಾರಿಸಲಾಗು ವುದು. ಎನ್‍ಇಪಿ ಮೂಲಕ ಸರ್ಕಾರಿ ಕಾಲೇಜು ಮತ್ತು ಇನ್ನಿತರೆ ಶಿಕ್ಷಣ ಸಂಸ್ಥೆ ಗಳು ಹೊಸ ಮೈಲುಗಲ್ಲು ಸ್ಥಾಪಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಕಾಲೇಜು ಗಳನ್ನು ಅನುಸರಿಸಬೇಕು. ಇದರ ಹೊಣೆ ವಿದ್ಯಾರ್ಥಿಗಳ ಮೇಲಿದೆ. ಇದಕ್ಕೆ ಬೇಕಾದ ಸಂಪನ್ಮೂಲ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ, ಕಾಡಾ ಅಧ್ಯಕ್ಷ ಶಿವ ನಂಜಯ್ಯ, ಕಾಲೇಜು ಶಿಕ್ಷಣ ಸಂಸ್ಥೆ ಜಂಟಿ ನಿರ್ದೇಶಕ ಪೆÇ್ರ.ಕೆ.ಸಿ.ವೀರಭದ್ರಯ್ಯ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಎಂ.ಬಾಲಕೃಷ್ಣ, ಕಲಾ ಕಾಲೇಜಿನ ಡಾ.ಬಿ.ಟಿ. ವಿಜಯ್, ವಾಣಿಜ್ಯ, ನಿರ್ವಹಣಾ ಕಾಲೇ ಜಿನ ಡಾ. ಜಿ.ಎಚ್.ಮಹದೇವಸ್ವಾಮಿ, ಡಾ.ರಾಘವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು

Translate »