ಆಡಳಿತ ಮಂಡಳಿ ಪರಿಶ್ರಮದಲ್ಲೇ ಸಹಕಾರ ಸಂಘದ ಪ್ರಗತಿ; ಜಿಟಿಡಿ
ಮೈಸೂರು

ಆಡಳಿತ ಮಂಡಳಿ ಪರಿಶ್ರಮದಲ್ಲೇ ಸಹಕಾರ ಸಂಘದ ಪ್ರಗತಿ; ಜಿಟಿಡಿ

September 7, 2021

ಮೈಸೂರು,ಸೆ.6(ಎಸ್‍ಬಿಡಿ)- ಸಹಕಾರ ಸಂಘಗಳ ಬೆಳವಣಿಗೆ ಆಡಳಿತ ಮಂಡಳಿ ಪರಿಶ್ರಮವನ್ನು ಅವಲಂಬಿಸಿರುತ್ತದೆ ಎಂದು ಹಿರಿಯ ಸಹಕಾರಿಯೂ ಆದ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಮೈಸೂರಿನ ರಾಮಕೃಷ್ಣನಗರ `ಐ’ ಬ್ಲಾಕ್‍ನ `ಆದ್ಯ ಸೌಹಾರ್ದ ಸಹಕಾರಿ ಸಂಘ’ದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿದ ಅವರು, ಸಹಕಾರ ಸಂಘ ಗಳ ಬೆಳವಣಿಗೆಗೆ ಆಡಳಿತ ಮಂಡಳಿ ಪ್ರಾಮಾಣಿಕ ವಾಗಿ ದುಡಿಯಬೇಕು. ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಸಮನ್ವಯದಿಂದ ಕೆಲಸ ಮಾಡಬೇಕು. ಸಿಬ್ಬಂದಿಯೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಸದಸ್ಯರ ನಂಬಿಕೆಯನ್ನು ಹುಸಿಗೊಳಿಸದಂತೆ ಸಂಘ ಮುನ್ನಡೆಯಬೇಕು ಎಂದು ಮಾರ್ಗದರ್ಶನ ಮಾಡಿದರು.

ಸಂಘದ ವತಿಯಿಂದ ಈ ಭಾಗದ ಜನತೆಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಸಂಘದ ಬೆಳವಣಿಗೆ ಜೊತೆಗೆ ಜನರ ವಿಶ್ವಾಸವನ್ನೂ ಗಳಿಸಿಕೊಳ್ಳಬೇಕು. ಹಲವಾರು ಸೌಹಾರ್ದ ಸಹಕಾರ ಸಂಘಗಳಲ್ಲಿ ಕೋಟ್ಯಾಂತರ ರೂ. ಠೇವಣಿ ಇಡಲಾಗಿದೆ. ಆದ್ಯ ಸೌಹಾರ್ದ ಸಹಕಾರಿ ಸಂಘವೂ ಯಶಸ್ಸಿನ ಹಾದಿ ಯಲ್ಲಿ ಸಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ರಾಜ್ಯ ಸೌಹಾರ್ದ ಸಹಕಾರಿ ಮೈಸೂರು ವಿಭಾಗೀಯ ವ್ಯವಸ್ಥಾಪಕ ಶಿವಕುಮಾರ್ ಬಿರಾದರ್, ಪಾರ್ಥ ಸಾರಥಿ, ಮುಖ್ಯ ಪ್ರವರ್ತಕ ಡಾ.ಜೆ.ಜಿ.ವಿಶ್ವನಾಥಯ್ಯ, ಪ್ರವರ್ತಕರಾದ ಕೆ.ಎ.ನಾಣಯ್ಯ, ಎಂ.ಬಸವಣ್ಣ, ಸುಧೀರ್, ಸಿ.ಶೇಖರ್, ಮಂಜುಳಾ ಬಸವರಾಜು, ಹೆಚ್.ಎಸ್.ಶರ್ಮ, ವೆಂಕಟೇಶ ಕಾರಂತ, ಕೃಷ್ಣ, ಹರೀಶ್ ಕುಮಾರ್, ಕೆ.ನಂಜಯ್ಯ, ಚೂಡಾಮಣಿ, ಕೆ.ಎನ್.ಕುಮಾರ್, ನಂದೀಶ್, ಪದ್ಮಾವತಿ, ಎಸ್.ಸಿ. ಭಗೀರಥ ಮತ್ತಿತರರು ಉಪಸ್ಥಿತರಿದ್ದರು.

Translate »