`ವಿಶ್ವ ಆಲ್‍ಝೈಮರ್ಸ್ ಮಾಸಾಚರಣೆ’ಗೆ ಚಾಲನೆ
ಮೈಸೂರು

`ವಿಶ್ವ ಆಲ್‍ಝೈಮರ್ಸ್ ಮಾಸಾಚರಣೆ’ಗೆ ಚಾಲನೆ

September 7, 2021

ಮೈಸೂರು,ಸೆ.6(ಪಿಎಂ)-ಆಲ್‍ಝೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ `ವಿಶ್ವ ಆಲ್‍ಝೈಮರ್ಸ್ ಮಾಸಾಚರಣೆ (ವಿಶ್ವ ಮರೆಗುಳಿತನ ಕಾಯಿಲೆ ಮಾಸಾ ಚರಣೆ) ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಅರಿವು ಕಾರ್ಯಕ್ರಮಗಳಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಹಾಗೂ ಕಾವೇರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಜಿ.ಆರ್.ಚಂದ್ರಶೇಖರ್ ಚಾಲನೆ ನೀಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ ಅವರು, ಮರೆಗುಳಿತನ ಕಾಯಿಲೆ (ಆಲ್‍ಝೈಮರ್ಸ್) ಹಿರಿ ಯರಲ್ಲಿ ಹೆಚ್ಚು ಕಂಡು ಬರುತ್ತದೆ. ಇದು ಗುಣಪಡಿಸ ಲಾಗದ ಕಾಯಿಲೆ ಎಂದು ಎದೆಗುಂದಬೇಕಿಲ್ಲ. ಆರೋಗ್ಯಕರ ಜೀವನ ಶೈಲಿಯಿಂದ ಈ ಕಾಯಿಲೆ ಬಾರ ದಂತೆ ನೋಡಿಕೊಳ್ಳಬಹುದು. ಅಲ್ಲದೆ, ಕಾಯಿಲೆಗೆ ತುತ್ತಾ ದವರೂ ವ್ಯಾಯಾಮ ಮತ್ತು ಆಹಾರ ಕ್ರಮದ ಮೂಲಕ ಚೇತರಿಸಿಕೊಳ್ಳಬಹುದು ಎಂದು ತಿಳಿಸಿದರು.

ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ಸ್ ಎನ್‍ಪವರ್‍ಮೆಂಟ್ ಮೈಸೂರು ಶಾಖೆ ಕಾರ್ಯದರ್ಶಿ ಡಾ.ಪ್ರತಿಭಾ ಪೆರೈರಾ ಮಾತನಾಡಿ, ಮರೆಗುಳಿತನ ಕಾಯಿಲೆ ಒಂದು ಗಂಭೀರ ಸಮಸ್ಯೆ. ಇದರಿಂದ ಪಾರಾಗಲು ನೆನಪಿನ ಜೀವಕೋಶಗಳನ್ನು ಹೆಚ್ಚು ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಮೆದುಳಿಗೆ ವ್ಯಾಯಾಮ ಮತ್ತು ಸೂಕ್ತ ಆಹಾರ ಸೇವನೆ ಅಗತ್ಯವಾಗುತ್ತದೆ ಎಂದು ಹೇಳಿದರು.

ಜಿಎಸ್‍ಎಸ್ ಯೋಗ ಫೌಂಡೇಷನ್ ಮುಖ್ಯಸ್ಥ ಡಿ. ಶ್ರೀಹರಿ ಮಾತನಾಡಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಕ್ಕಳು ಮತ್ತು ಮೊಮ್ಮಕ್ಕಳು ಮನೆಯ ಹಿರಿಯರಿಂದ ದೂರ ಉಳಿಯುತ್ತಿದ್ದಾರೆ. ಈ ಏಕಾಂತವು ಮರೆಗುಳಿತನ ಕಾಯಿಲೆಗೆ ಕಾರಣ ಇರಬಹುದು. ಮನೆಯಲ್ಲಿ ಕಿರಿಯರು ಹಿರಿಯ ರೊಂದಿಗೆ ಬೆರೆಯಬೇಕು. ಅವರೊಡನೆ ತುಸು ಸಮಯ ಕಳೆಯಬೇಕು. ಜೊತೆಗೆ ಪ್ರತಿಯೊಬ್ಬರು ಧ್ಯಾನ ಮತ್ತು ಯೋಗವನ್ನು ಜೀವನಶೈಲಿಯಲ್ಲಿ ರೂಢಿಸಿಕೊಳ್ಳುವುದ ರಿಂದ ರೋಗಗಳಿಂದ ದೂರವಿರಬಹುದು ಎಂದರು.

ವಿವೇಕ ಆಸ್ಪತ್ರೆ ವೈದ್ಯ ಡಾ.ಮುರಳಿಕೃಷ್ಣ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಆಲ್‍ಝೈಮರ್ಸ್ ಕಾಯಿಲೆಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಕಳೆದ ವರ್ಷದಿಂದ ಆರಂಭಿಸಲಾಗಿದ್ದು, 450 ಮಂದಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಆಲ್‍ಝೈಮರ್ಸ್ ಸೊಸೈಟಿ ಮೈಸೂರು ಘಟಕದ ಅಧ್ಯಕ್ಷ ಮತ್ತು ಶಾರದಾ ವಿಲಾಸ ಫಾರ್ಮಾಸಿ ಕಾಲೇಜು ಪ್ರಾಂಶು ಪಾಲ ಡಾ.ಹನುಮಂತಾಚಾರ್ ಜೋಶಿ ಮಾತನಾಡಿ, ಮರೆಗುಳಿತನ ಕಾಯಿಲೆ ಜೀವನವನ್ನೇ ಅಸ್ತವ್ಯಸ್ತಗೊಳಿಸ ಲಿದೆ. ಇದಕ್ಕೆ ನಾಲ್ಕು ಔಷಧಗಳು ಇವೆಯಾದರೂ ಪರಿ ಣಾಮ ಕಡಿಮೆ. ಜೊತೆಗೆ ಅಡ್ಡ ಪರಿಣಾಮಗಳು ಉಂಟು ಮಾಡಲಿವೆ. ಹೀಗಾಗಿ ರೋಗ ನಿಯಂತ್ರಣಕ್ಕೆ ಪೂರಕ ವಾಗಿ ರೋಗಿಗಳ ಜೀವನಶೈಲಿ ಬದಲಿಸುವುದು ಹಾಗೂ ಅವರನ್ನು ಆರೈಕೆ ಮಾಡುವುದಕ್ಕೆ ಕುಟುಂಬಸ್ಥರು ಹೆಚ್ಚು ಒತ್ತು ನೀಡಬೇಕಾಗುತ್ತದೆ ಎಂದರು. ಸೆ.6ರಿಂದ 30ರವರೆಗೆ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ.7ರಂದು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಈ ಕಾಯಿಲೆ ಸಂಬಂಧ ಪ್ರಬಂಧ ಸ್ಪರ್ಧೆ, ಸೆ.13, 14ರಂದು ವೆಬಿನಾರ್ ಮೂಲಕ ವಿಚಾರ ಸಂಕಿರಣ, ಸೆ.16ರಂದು ಸೆಲೆಬ್ರಿಟಿಗಳೊಂದಿಗೆ ಸಂವಾದ, ಸೆ.21ರಂದು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಿಂದ ಜಾಥಾ, ಸೆ.21ರಂದು ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಕಾರ್ಯಾಗಾರ ಹಾಗೂ ಸೆ.30ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

Translate »