ಮುಡಾದಿಂದ ಸೈಕಲ್ ಜಾಥಾ ಮೂಲಕ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ
ಮೈಸೂರು

ಮುಡಾದಿಂದ ಸೈಕಲ್ ಜಾಥಾ ಮೂಲಕ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ

September 7, 2021

ಮೈಸೂರು,ಸೆ.6(ಆರ್‍ಕೆ)-ಅಜಾದಿ ಕ ಅಮೃತ್ ಮಹೋ ತ್ಸವದ ಅಂಗವಾಗಿ ಮುಡಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಂದು ಮೈಸೂರಲ್ಲಿ ಸೈಕಲ್ ಜಾಥಾ ನಡೆಸಿ ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣೆ ಮಾಡಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್, ಆಯುಕ್ತ ಡಾ.ಡಿ.ಬಿ.ನಟೇಶ್ ನೇತೃತ್ವದಲ್ಲಿ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭವಾದ ಜಾಥಾಗೆ ಟ್ರಿಣ್ ಟ್ರಿಣ್ ಸೈಕಲ್‍ಗಳನ್ನು ಬಳಸಿಕೊಳ್ಳಲಾಯಿತು.
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆ ಯಲ್ಲಿ ರಾಷ್ಟ್ರದಾದ್ಯಂತ ಅಜಾದಿ ಕ ಅಮೃತ್ ಮಹೋತ್ಸವ ಆಚರಿಸುತ್ತಿದ್ದು, ಭಾರತ ಬಿಟ್ಟು ತೊಲಗಿ ಎಂಬ ಸಂಕಲ್ಪದೊಂ ದಿಗೆ ನಡೆದಿದ್ದ ಕ್ವಿಟ್ ಇಂಡಿಯಾ ಚಳವಳಿಯನ್ನು ಸ್ಮರಿಸಿದ ಮುಡಾ ಅಧಿಕಾರಿಗಳು, ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಿಂದ ಹೊರಟ ಜಾಥಾವು, ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಗನ್‍ಹೌಸ್ ಸರ್ಕಲ್, ಚಾಮರಾಜ ಜೋಡಿ ರಸ್ತೆ, ಅಗ್ರಹಾರ ಸರ್ಕಲ್, ಮಹಾತ್ಮ ಗಾಂಧಿ ರಸ್ತೆ, ಸಿದ್ದಪ್ಪ ಸ್ಕ್ವೇರ್ ಮೂಲಕ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸಾಗಿ ಶಾಂತಲ ಟಾಕೀಸ್ ಎದುರಿನ ಸ್ವಾತಂತ್ರ್ಯ ಹೋರಾಟ ಗಾರರ ಉದ್ಯಾನವನದಲ್ಲಿ ಜಾಥಾ ಅಂತ್ಯಗೊಂಡಿತು.

ನಂತರ ಉದ್ಯಾನದ ದಂಡಿಯಾತ್ರೆಯನ್ನು ಬಿಂಬಿಸುವ ಮಹಾತ್ಮ ಗಾಂಧಿ ಸೇರಿ ಇತರ ಹೋರಾಟಗಾರರ ಪ್ರತಿಮೆ ಬಳಿ ಸೇರಿದ ಮುಡಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣೆ ಮಾಡಿದ ನಂತರ ಸೈಕಲ್ ಜಾಥಾವನ್ನು ಅಂತ್ಯಗೊಳಿಸಿದರು.
ಮುಡಾ ಸೂಪರಿಂಟೆಂಡಿಂಗ್ ಇಂಜಿನಿಯರ್ ಶಂಕರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಭಾಕರ್, ಕಾರ್ಯದರ್ಶಿ ವೆಂಕಟರಾಜು, ನಗರ ಯೋಜಕ ಸದಸ್ಯ ಜಯಸಿಂಹ, ಮುಖ್ಯ ಲೆಕ್ಕಾಧಿಕಾರಿ ಶ್ವೇತ, ಎಲ್ಲಾ ವಲಯಗಳ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿ ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

Translate »