‘ಅನ್ನಭಾಗ್ಯ’ಕ್ಕಿಲ್ಲ ಕಣ್ಗಾವಲು! ಬಡವರ ಅಕ್ಕಿ ಅನ್ಯರ ಪಾಲು
ಚಾಮರಾಜನಗರ

‘ಅನ್ನಭಾಗ್ಯ’ಕ್ಕಿಲ್ಲ ಕಣ್ಗಾವಲು! ಬಡವರ ಅಕ್ಕಿ ಅನ್ಯರ ಪಾಲು

April 11, 2022

 ಕೊಳ್ಳೇಗಾಲ ತಾಲೂಕಿನಲ್ಲಿ ಅವಿರತವಾಗಿ ನಡೆಯುತ್ತಿದೆ ‘ಅನ್ನಭಾಗ್ಯ’ ಯೋಜನೆಯ ದುರ್ಬಳಕೆ
 ಮರಣ ಹೊಂದಿದವರ ಹೆಸರಿನ ಪಡಿತರ ದೋಖಾ: ಆಹಾರ ಇಲಾಖೆ ಅಧಿಕಾರಿಗಳಿಂದಲೇ ಅಕ್ರಮ

ವರದಿ: ನಾಗೇಂದ್ರಸ್ವಾಮಿ
ಕೊಳ್ಳೇಗಾಲ, ಏ.೧೦- ಹಸಿದವರಿಗೆ ಅನ್ನ ನೀಡುವ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದ್ದು, ಆಹಾರ ಇಲಾಖೆ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವುದು ವಿಪರ್ಯಾಸವಾಗಿದೆ.

ಮರಣ ಹೊಂದಿದAತಹ ಫಲಾನುಭವಿಯ ಪಡಿತರವನ್ನು ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಪಡೆದು ಅಕ್ರಮವೆಸಗುತ್ತಿರುವುದು ಬಯಲಾಗಿದೆ.

ಮೃತ ಶಿವನಂಜಯ್ಯ ಅಂತ್ಯೊದಯ ಕಾರ್ಡ್ ಫಲಾನುಭವಿ. ಹಾಗಾಗಿ ಅವರಿಗೆ ೪೦ಕೆ.ಜಿ. ಅಕ್ಕಿ ವಿತರಿಸಲಾಗಿದೆ. ಮೃತ ಮನಿಯಮ್ಮ ಅವರಿಗೂ ೧೦ಕೆ.ಜಿ. ಅಕ್ಕಿ, ೨ಕೆ.ಜಿ. ಗೋಧಿ ವಿತರಿಸಲಾಗಿದೆ. ಕೋವಿಡ್ ನಿಂದ ಸಾವಿಗೀಡಾದ ಸಬೀನಾ ಅವರಿಗೆ ೨೦ ಕೆ.ಜಿ. ಪಡಿತರ ಅಕ್ಕಿ ಹಾಗೂ ೨ ಕೆ.ಜಿ. ಗೋಧಿಯನ್ನು ವಿತರಿಸಲಾಗಿದೆ. ಹಾಗಾದರೇ, ಈ ಅಕ್ಕಿಯನ್ನು ಮೃತಪಟ್ಟ ಫಲಾನುಭವಿ ಕುಟುಂಬಕ್ಕೆ ನೀಡಿದರಾ ಎಂದು ಪರಿಶೀಲಿಸಿದರೇ ಅದು ಕೂಡ ಇಲ್ಲ. ಮೃತಪಟ್ಟಿದ್ದರಿಂದ ಇವರ ಹೆಸರಿನಲ್ಲಿ ಪಡಿತರ ನೀಡಲು ಸಾಧ್ಯವಿಲ್ಲವೆಂದು ಕುಟುಂ ಬದವರಿಗೆ ಜವಾಬೂ ಹೇಳಿ ಕಳುಹಿಸಿದ್ದಾರೆ.
ಆದರೆ, ಇಲಾಖೆ ವೆಬ್‌ಸೈಟ್‌ನಲ್ಲಿ ಮರಣ ಹೊಂದಿದ ಇವರೆಲ್ಲರಿಗೂ ಮಾರ್ಚ್ ೩೧ರಂದು ಬೆಳಗ್ಗೆ ೧೦ ಗಂಟೆಯಿAದ ೧೧.೦೫ ರತನಕ ಆಹಾರ ಇಲಾಖೆ ನಿರೀಕ್ಷಕರ ಲಾಗಿನ್‌ನಿಂದಲೇ ಪಡಿತರ ವಿತರಿಸಿದಂತೆ ತೋರಿಸಲಾಗಿದೆ. ಹೌದು ಇಂತಹ ಘಟನೆ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ನಡೆದಿದ್ದು, ೨-೩ ವರ್ಷದ ಹಿಂದೆ ಸಾವಿ ಗೀಡಾದವರು, ಗ್ರಾಮ ತೊರೆದವರು, ವೃದ್ಧಾಶ್ರಮದಲ್ಲಿರುವವರಿಗೂ ಸಹಾ ಆಹಾರ ಇಲಾಖೆಯ ಅಧಿಕಾರಿಗಳು ತಮ್ಮ ಲಾಗಿನ್ ಮೂಲಕ ಪಡಿತರ ಅಕ್ಕಿ ವಿತರಿಸುವ ಮೂಲಕ ವಿವಾದಕ್ಕೀಡಾಗಿದ್ದಾರೆ.

ಹೊಂಡರಬಾಳು ಗ್ರಾಮದ ನಿವಾಸಿ ಶಿವವಲಿಂಗಯ್ಯ ೩ ವರ್ಷದ ಹಿಂದೆಯೇ ನಿಧನರಾಗಿದ್ದಾರೆ, ಮನಿಯಮ್ಮ ೪ ತಿಂಗಳ ಹಿಂದೆ ನಿಧನರಾಗಿದ್ದಾರೆ, ವರ್ಷದ ಹಿಂದೆ ಕೋವಿಡ್‌ನಿಂದಾಗಿ ನೂರ್ ಅಹಮ್ಮದ್ ಅವರ ಪತ್ನಿ ಸಬೀನಾ ಅವರು ನಿಧನರಾಗಿದ್ದಾರೆ. ಇವರುಗಳೆಲ್ಲರಿಗೂ ಆಹಾರ ಇಲಾಖೆಯ ನಿರೀಕ್ಷಕರಾದ ಬಿಸಿಲಯ್ಯ ಅವರೇ ತಮ್ಮ ಲಾಗಿನ್ ಬಳಸುವ ಮೂಲಕ ಪಡಿತರ ದುರ್ಬಳಕೆಗೆ ಹಾಗೂ ಅಕ್ರಮಕ್ಕೆ ಸಾಥ್ ನೀಡಿದಂತಾಗಿದೆ.

ಕಾರ್ಡ್ ಸಂಖ್ಯೆ ೫೮೦೩೦೦೨೨೫೨೨೯ರ ಫಲಾನುಭವಿ ಸಿದ್ದಪ್ಪಸ್ವಾಮಿ ಅವರು ತುಮ ಕೂರಿನಲ್ಲಿ ಮಕ್ಕಳ ಜೊತೆ ವಾಸವಿದ್ದಾರೆ. ಅವರು ಸಹಾ ಪಡಿತರ ಪಡೆದಿಲ್ಲ. ಕಾರ್ಡ್ ಸಂಖ್ಯೆ ೫೮೦೩೦೦೨೩೫೦೨೪ರ ಫಲಾನುಭವಿ ಬೇಗಂ ಅವರು ತಮ್ಮ ಮಗನ ಮನೆ ಚೆನ್ನೆöÊಗೆ ತೆರಳಿ ೨ ತಿಂಗಳಾಗಿದೆ. ಅವರು ಸಹಾ ರೇಷನ್ ಪಡೆದಿಲ್ಲ. ಅದೇ ರೀತಿ ಯಲ್ಲಿ ವಿಜಯಾಂಬ ಕಾರ್ಡ್ ಸಂಖ್ಯೆ ೫೮೦೩೦೦೨೨೨೪೧೦ ಅವರು ಸಹಾ ರೇಷನ್ ಪಡೆದಿಲ್ಲ. ಕಾರ್ಡ್ ಸಂಖ್ಯೆ ೫೮೦೩೦೦೧೫೬೬೦೫ ಫಲಾನುಭವಿ ಲಲಿತಮ್ಮ ಇವರು ಹೊಂಡರಬಾಳು ಗ್ರಾಮದಲ್ಲಿಲ್ಲ, ಅವರು ಕೌದಳ್ಳಿಯ ವೃದ್ಧಾ ಶ್ರಮ ಸೇರಿ ೨ ವರ್ಷಗಳೇ ಕಳೆದಿದೆ.

ಆದರೆ, ಇವರೆಲ್ಲರಿಗೂ ಆಹಾರ ನಿರೀಕ್ಷಕರ ಲಾಗಿನ್ ಮೂಲಕ ಸಂಬA ಧಿಸಿದ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿ ತರ ವಿತರಿಸಿದಂತೆ ತೋರುವ ಮೂಲಕ ಆಹಾರ ನಿರೀಕ್ಷಕರೇ ಅಕ್ರಮಕ್ಕೆ ಸಹಕರಿಸಿ ರುವುದು ನಾನಾ ಸಂಶಯಗಳು ಉಂಟು ಮಾಡಿದ್ದು, ಬಡವರಿಗೆ ತಲುಪಬೇಕಾದ ಪಡಿತರ ದುರ್ಬಳಕೆಗೆ ಇಲ್ಲಿನ ಅಧಿಕಾರಿ ಗಳೇ ಸಾಥ್ ನೀಡುವ ಮೂಲಕ ಗೋಲ್ ಮಾಲ್ ನಡೆಸಿರುವುದಿಂದ ಸಂಬAಧಪಟ್ಟ ಅಧಿಕಾರಿಗಳ ಇವರು ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

Translate »