ಸಬ್‌ಇನ್ಸ್ಪೆಕ್ಟರ್ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಸಿಐಡಿ ತನಿಖೆಗೆ
ಮೈಸೂರು

ಸಬ್‌ಇನ್ಸ್ಪೆಕ್ಟರ್ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಸಿಐಡಿ ತನಿಖೆಗೆ

April 11, 2022

ಬೆಂಗಳೂರು: ಇತ್ತೀಚಿಗೆ ನಡೆದ ೫೪೫ ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿನ ಅಕ್ರಮ ಕುರಿತಂತೆ, ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.

ಈ ಕುರಿತಂತೆ ಮಾಹಿತಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಪೊಲೀಸ್ ಇಲಾಖೆಗೆ ೫೪೫ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ನಡೆದಿತ್ತು, ತಾತ್ಕಾಲಿಕ ನೇರ ನೇಮಕಾತಿ ಪಟ್ಟಿ ಬಿಡುಗಡೆ ಆಗಿದೆ. ಇದರ ಬಗ್ಗೆ ಸಾರ್ವ ಜನಿಕರಲ್ಲಿ ಬಹಳಷ್ಟು ಅನುಮಾನ ಇತ್ತು. ಇದರಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ಇತ್ತೀಚೆಗೆ ಸಾರ್ವಜನಿಕರಿಂದ ದಾಖಲೆ, ಮಾಹಿತಿ ಸಿಕ್ಕಿದೆ. ಈ ಹಿನ್ನಲೆ ಯಲ್ಲಿ ಸಿಐಡಿ ತನಿಖೆಗೆ ವಹಿಸಿದ್ದೇವೆ ಎಂದು ತಿಳಿಸಿದರು. ಈ ಸಂಬAಧ ಕಲಬುರಗಿಯ ಚೌಕ್ ಠಾಣೆಯಲ್ಲಿ ಏ.೯ರಂದು ಎಫ್‌ಐಆರ್ ದಾಖ ಲಾಗಿದೆ. ನ್ಯಾಯಯುತವಾಗಿ ಪರೀಕ್ಷೆ ಬರೆದವರು ಇದ್ದಾರೆ. ಕಷ್ಟಪಟ್ಟು ಪರೀಕ್ಷೆ ಬರೆದವರು ಇದ್ದಾರೆ. ಏ.೭ರಂದು ನಮ್ಮ ಕೈಗೆ ಸಿಕ್ಕಿದ ಓಎಂಆರ್ ಶೀಟ್‌ಗೂ ಅಸಲಿ ಶೀಟ್‌ಗೂ ಟ್ಯಾಲಿ ಆಗುತ್ತಿಲ್ಲ. ವಿರೇಶ್ ಎಂಬ ಅಭ್ಯರ್ಥಿಯನ್ನು ಈಗಾಗಲೇ ವಿಚಾರಣೆಗೆ ವಶಕ್ಕೆ ಪಡೆಯ ಲಾಗಿದೆ. ಸತ್ಯಾಸತ್ಯತೆ ಹೊರತರಲು ವಿಚಾರಣೆ ನಡೆಯುತ್ತಿದೆ. ೨೧ ಮಾರ್ಕ್್ಸಗೆ ಉತ್ತರ ಬರೆಯ ದವನಿಗೆ ೧೦೦ ಮಾರ್ಕ್್ಸ ಬಂದಿದೆ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.

Translate »