ಇಂದಿನಿಂದ ಬೆಳಗಲಿವೆ ರಿಂಗ್ ರೋಡ್ ಎಲ್‍ಇಡಿ ದೀಪಗಳು
ಮೈಸೂರು

ಇಂದಿನಿಂದ ಬೆಳಗಲಿವೆ ರಿಂಗ್ ರೋಡ್ ಎಲ್‍ಇಡಿ ದೀಪಗಳು

December 1, 2022

ಮೈಸೂರು, ನ.30(ಆರ್‍ಕೆ)-ಮೈಸೂರಿನ ರಿಂಗ್ ರಸ್ತೆ ದೀಪಗಳು ನಾಳೆ(ಡಿ.1) ಯಿಂದ ಬೆಳಗಲಿವೆ. ಇಂದು ಮೈಸೂರು-ಬೆಂಗಳೂರು ರಸ್ತೆಯ, ಮಣಿಪಾಲ್ ಆಸ್ಪತ್ರೆ ಜಂಕ್ಷನ್‍ನಿಂದ ನಂಜನಗೂಡು ರಸ್ತೆ ಜಂಕ್ಷನ್‍ವರೆಗೆ ಪ್ರಾಯೋಗಿಕವಾಗಿ ರಿಂಗ್ ರಸ್ತೆಯಲ್ಲಿ ಎಲ್‍ಇಡಿ ದೀಪಗಳನ್ನು ಬೆಳಗಿಸಲಾಯಿತು. ಅಂಡರ್‍ಗ್ರೌಂಡ್ ಕೇಬಲ್ ಮತ್ತು ಎಲ್‍ಇಡಿ ಬಲ್ಬ್ ಅಳವಡಿ ಸುವ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದ್ದು, ನಾಳೆ(ಡಿ.1) ಸಂಜೆ ಮೈಸೂರು ಹೊರವರ್ತುಲ ರಸ್ತೆಯ ಎಲ್‍ಇಡಿ ದೀಪಗಳಿಗೆ ಚಾಲನೆ ನೀಡಲಾ ಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. 42.5 ಕಿ.ಮೀ. ಉದ್ದದ ರಿಂಗ್ ರಸ್ತೆಯ ಎರಡೂ ಬದಿಯಲ್ಲಿರುವ 2,135 ಎಲೆಕ್ಟ್ರಿಕ್ ಕಂಬಗಳಿಗೆ ತಲಾ ಎರಡರಂತೆ 4,818 ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಲಾ ಗಿದೆ. ಭೂಗತ ಕೇಬಲ್ ಅಳವಡಿಸಿ, ಬಲ್ಬ್ ಅಳವಡಿಕೆ ತೀವ್ರ ಗತಿಯಲ್ಲಿ ನಡೆಯುತ್ತಿತ್ತು. ನವೆಂಬರ್ 19ರವರೆಗೆ ಗರಿಷ್ಠ ಅಂತರದಲ್ಲಿ ಕೇಬಲಿಂಗ್ ಕೆಲಸ ಪೂರ್ಣಗೊಂಡಿದ್ದರಿಂದ ನವೆಂಬರ್ 30ರವರೆಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ನೀಡಿದ ವಾಗ್ದಾನದಂತೆ ಡಿಸೆಂಬರ್ 1ರಂದು ರಿಂಗ್ ರಸ್ತೆ ದೀಪಗಳಿಗೆ ಚಾಲನೆ ನೀಡುತ್ತೇವೆ ಎಂದು ಸಂಸದರು ತಿಳಿಸಿದ್ದಾರೆ.

ಕಂಟ್ರೋಲ್ ಯೂನಿಟ್‍ಗಳು ಪೂನಾದಿಂದ ಬರಬೇಕಾಗಿ ರುವ ಕಾರಣ, ಬೆಸ್ಕಾಂನಿಂದ ತಾತ್ಕಾಲಿಕವಾಗಿ ಕಂಟ್ರೋಲ್ ಯೂನಿಟ್ ತರಿಸುವ ವ್ಯವಸ್ಥೆ ಮಾಡಿದ್ದೇವೆ. ರಿಂಗ್ ರಸ್ತೆ ದೀಪಗಳನ್ನು ಆನ್ ಮಾಡುವ ಸಂಬಂಧ ನಾಳೆ(ಡಿ.1) ಬೆಳಗ್ಗೆ 11 ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆ ಬಗ್ಗೆ ಚರ್ಚಿಸುತ್ತೇವೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ರಿಂಗ್ ರಸ್ತೆ ದೀಪಗಳನ್ನು ಬೆಳಗಿಸಲು ಪೂರ್ವ ತಯಾರಿ ಭರದಿಂದ ಸಾಗಿದ್ದು, ಸರ್ಕಲ್‍ಗಳಲ್ಲಿ ರಸ್ತೆ ಕೊರೆದು ವಯರ್‍ಗಳ ಅಳವಡಿಸಬೇಕಿರುವುದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಯಿತು. ಸಂಸದ ಪ್ರತಾಪ್ ಸಿಂಹ ಅವರ ಆಸ್ಥೆಯಂತೆ ತ್ವರಿತವಾಗಿ ಕೆಲಸ ಮಾಡಲಾಯಿತು. ಡಿಸೆಂಬರ್ 1 ರಿಂದ ರಿಂಗ್ ರಸ್ತೆ ದೀಪಗಳು ಬೆಳಗಲಿವೆ ಎಂದು ಮೈಸೂರು ಮಹಾನಗರ ಪಾಲಿಕೆ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಹೇಶ್ ತಿಳಿಸಿದ್ದಾರೆ.

42.5 ಕಿ.ಮೀ. ಉದ್ದದ ಮೈಸೂರು ರಿಂಗ್ ರಸ್ತೆಯ ದೀಪಗಳಿಗೆ ಯುಜಿ ಕೇಬಲ್ ಅಳವಡಿಸಿ ಬಲ್ಬ್ ಅಳವಡಿಸುವ ಕಾಮಗಾರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) 12 ಕೋಟಿ ರೂ. ಅನುದಾನ ನೀಡಿದೆ. ದೀಪಗಳ ನಿರ್ವಹಣೆ, ಮಾಸಿಕ ವಿದ್ಯುತ್ ಬಿಲ್ ಪಾವತಿಸುವ ಜವಾಬ್ದಾರಿಯನ್ನು ಮೈಸೂರು ಮಹಾನಗರ ಪಾಲಿಕೆ ವಹಿಸಿಕೊಂಡಿದೆ. ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಓಊಂI)ದ ವ್ಯಾಪ್ತಿಯಲ್ಲಿರುವ ರಿಂಗ್ ರಸ್ತೆಯ ಡಾಂಬರೀಕರಣ, ಸಿವಿಲ್ ಕಾಮಗಾರಿ ನಿರ್ವಹಣೆ ಮಾತ್ರ ಪ್ರಾಧಿಕಾರದ ಜವಾಬ್ದಾರಿಯಾಗಿದೆ

Translate »