ರಾಕ್‍ಸ್ಟಾರ್ ಅವತಾರದಲ್ಲಿ ರಾಬರ್ಟ್
ಸಿನಿಮಾ

ರಾಕ್‍ಸ್ಟಾರ್ ಅವತಾರದಲ್ಲಿ ರಾಬರ್ಟ್

July 31, 2020

ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದಲ್ಲಿ ತಯಾರಾಗಿರುವ ಚಿತ್ರ ರಾಬರ್ಟ್ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ತರುಣ್ ಸುಧೀರ್ ಅವರ ನಿರ್ದೇಶನವಿ4ರುವ ಈ ಚಿತ್ರದ ಹೊಸ ಪೆÇೀಸ್ಟರನ್ನು ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿದೆ. ಇದರಲ್ಲಿ ನಟ ದರ್ಶನ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿz್ದÁರೆ. ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಈ ಹೊಸ ಪೆÇೀಸ್ಟರನ್ನು ಬಿಡುಗಡೆ ಮಾಡಲಾಗಿದ್ದು, ಇದರ ವಿಶೇಷತೆ ಏನೆಂದರೆ ಕೈನಲ್ಲಿ ಸಿಗಾರ್ ಹಿಡಿದಿರುವ ದರ್ಶನ್ ಚಿನ್ನದ ಹೊಳಪಿನಲ್ಲಿ ಮಿಂಚುತ್ತಿz್ದÁರೆ. ಅವರ ಈ ಹೊಸ ಲುಕ್ಕೇ ಹೆಚ್ಚು ಸ್ಟೈಲಿಶ್ ಆಗಿದೆ.

ಈ ವಿಶೇಷ ಪೆÇೀಸ್ಟರ್‍ನಲ್ಲಿ ರಾಬರ್ಟ್ ಪಾತ್ರದಾರಿ ದರ್ಶನ್ ಅವರು ರಾಕ್‍ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿz್ದÁರೆ. ನಾಯಕನ ಮುಂದೆ ಒಂದು ಮೈಕ್, ಹಿಂದೆ ಒಂದು ಸ್ಟಾರ್ ಇದೆ. ಪಕ್ಕದಲ್ಲಿ ಸೈಕಲ್ ಚೈನ್ ಬೇರಿಂಗ್‍ಗಳಿಂದ ಮಾಡಿದ ಗಿಟಾರ್ ಕೂಡ ಇದೆ. ಇದೆಲ್ಲ ಸೆಟಪ್‍ಗಳು ದರ್ಶನ್ ಅವರಿಗೆ ರಾಕ್‍ಸ್ಟಾರ್ ಲುಕ್ ನೀಡಿದೆ. ಈ ಹೊಸ ಪೆÇೀಸ್ಟರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೂಸ್ ಪಡೆದುಕೊಳ್ಳುವ ಮೂಲಕ ಎಲ್ಲಾಕಡೆ ವೈರಲ್ ಆಗಿದೆ. ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಗೆ ರಾಬರ್ಟ್‍ನ ಹೊಸ ಪೆÇೀಸ್ಟರನ್ನೇ ಡಿಪಿ ಮಾಡಿಕೊಂಡಿz್ದÁರೆ. ಪೆÇೀಸ್ಟರ್ ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಸಹ ಮಾಡಿz್ದÁರೆ. ಈ ಹಿಂದಿನ ಪ್ಲಾನ್‍ನಂತೆ ಆಗಿದ್ದರೆ ರಾಬರ್ಟ್ ಚಿತ್ರ ಕಳೆದ ಏಪ್ರಿಲ್ ತಿಂಗಳಲ್ಲೇ ಬಿಡುಗಡೆಯಾಗಿರಬೇಕಿತ್ತು. ಆದರೆ ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ಬಹುತೇಕ ಮುಂದಿನ ತಿಂಗಳು ಚಿತ್ರಮಂದಿರಗಳು ಓಪನ್ ಆಗುತ್ತಿದ್ದು, ಆಗ ಥಿಯೇಟರ್‍ಗಳಲ್ಲಿ ರಾಬರ್ಟ್‍ನ ಅಬ್ಬರ ಜೋರಾಗಲಿದೆ.

ಈ ಹಿಂದೆ ರಾಬರ್ಟ್ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿ ಎಂದು ನಿರ್ಮಾಪಕ ಉಮಾಪತಿ ಗೌಡ ಅವರನ್ನು ಒಟಿಟಿ ತಂಡ ಸಂಪರ್ಕಸಿ ಬಿಗ್ ಆಫರ್ ನೀಡಿತ್ತು. ಆದರೆ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸಗೌಡ ಅವರು, ನಾನು ರಾಜ್ಯದ ಕೋಟ್ಯಾಂತರ ದರ್ಶನ್ ಅಭಿಮಾನಿಗಳಿಗಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಎಷ್ಟೇ ತಡವಾದರೂ ಕೂಡ ತಮ್ಮ ಚಿತ್ರವನ್ನು ಚಿತ್ರಮಂದಿರಗಳ¯್ಲÉೀ ಬಿಡುಗಡೆ ಮಾಡುವುದಾಗಿ ಹೇಳುವ ಮೂಲಕ ಕೋಟ್ಯಂತರ ರೂಪಾಯಿಗಳ ಆಫರನ್ನು ಕೈಬಿಟ್ಟಿದ್ದರು.