ಚಿತ್ರೋದ್ಯಮದಲ್ಲಿ ಒಗ್ಗಟ್ಟಿನ ಮಂತ್ರ
ಮೈಸೂರು

ಚಿತ್ರೋದ್ಯಮದಲ್ಲಿ ಒಗ್ಗಟ್ಟಿನ ಮಂತ್ರ

July 31, 2020

ಕ್ರೇಜಿಸ್ಟಾರ್ ರವಿಚಂದ್ರನ್, ಉಪೇಂದ್ರ, ರಕ್ಷಿತ್ ಶೆಟ್ಟಿ, ಪುನೀತ್ ರಾಜ್‍ಕುಮಾರ್, ಯಶ್, ದುನಿಯಾ ವಿಜಯ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಾಯಕ ನಟರು ಶಿವರಾಜ್‍ಕುಮಾರ್ ಅವರ ಮನೆಯಲ್ಲಿ ಒಟ್ಟಾಗಿ ಸೇರಿ ಚಿತ್ರರಂಗದ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸುವ ಮೂಲಕ ನಾವೆಲ್ಲ ಎಂದಿಗೂ ಒಂದೇ ಎಂಬುದನ್ನು ತೋರಿಸಿಕೊಟ್ಟರು. ಕೆಲ ದಿನಗಳ ಹಿಂದಷ್ಟೆ ಶಿವರಾಜ್‍ಕುಮಾರ್ ಅವರ ಮನೆಯಲ್ಲಿ ಸಭೆ ನಡೆಸಿದ್ದ ನಿರ್ಮಾಪಕರು, ವಿತರಕರು, ಪ್ರದರ್ಶಕರುಗಳೆಲ್ಲ ಶಿವರಾಜ್‍ಕುಮಾರ್ ಅವರನ್ನು ಕನ್ನಡ ಚಿತ್ರರಂಗದ ಮುಂದಿನ ನಾಯಕ ಎಂದು ಒಮ್ಮತದಿಂದ ಆಯ್ಕೆ ಮಾಡಿ ಶಿವಣ್ಣ ಅವರಿಗೆ ಚಿತ್ರರಂಗದ ನಾಯಕತ್ವವನ್ನು ವಹಿಸಿಕೊಟ್ಟಿದ್ದರು. ಅದರ ಬೆನ್ನಲ್ಲೇ ಈಗ ಸ್ಯಾಂಡಲ್‍ವುಡ್‍ನ ನಾಯಕ ನಟರುಗಳೆಲ್ಲ ಶಿವಣ್ಣ ಮನೆಗೆ ಆಗಮಿಸಿ ಮಾತುಕತೆ ನಡೆಸುವ ಮೂಲಕ ನಾವೆಲ್ಲರೂ ಶಿವಣ್ಣ ಅವರ ಜೊತೆಗಿz್ದÉೀವೆ, ಯಾವುದೇ ಸಮಸ್ಯೆ ಬಂದರೂ ಒಟ್ಟಾಗಿ ಎದುರಿಸುತ್ತೇವೆ ಎಂದು ಮತ್ತೊಮ್ಮೆ ಹೇಳಿz್ದÁರೆ. ಶಿವರಾಜ್‍ಕುಮಾರ್ ಸ್ವಗೃಹದಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ. ರವಿ ಅವರನ್ನು ಆಹ್ವಾನಿಸಿ ಚಿತ್ರರಂಗದ ಪ್ರಸ್ತುತ ಸಮಸ್ಯೆಗಳು ಹಾಗೂ ಮುಂದೆ ಎದುರಿಸಬೇಕಾಗಿರುವ ಸವಾಲುಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ರಮೇಶ್ ಅರವಿಂದ್, ಶ್ರೀಮುರಳಿ, ಗಣೇಶ್, ಅಲ್ಲದೆ ನಿರ್ಮಾಪಕರಾದ ಸೂರಪ್ಪಬಾಬು, ಹೊಂಬಾಳೆ ವಿಜಯಕುಮಾರ್, ಕಾರ್ತೀಕ್‍ಗೌಡ, ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿದಂತೆ ಇನ್ನೂ ಹಲವಾರು ನಿರ್ಮಾಪಕರುಗಳು ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಚಿವ ಸಿ.ಟಿ. ರವಿ ಅವರೊಂದಿಗೆ ಕಲಾವಿದರು ನಡೆಸಿದ ಮಾತುಕತೆಯಲ್ಲಿ ಕಿರುತೆರೆ ಮತ್ತು ಚಲನಚಿತ್ರ ಉದ್ಯಮವನ್ನೇ ನಂಬಿಕೊಂಡಿರುವ ಸಹಸ್ರಾರು ಕಾರ್ಮಿಕರಿಗೆ ಪ್ಯಾಕೇಜ್ ಹಾಗೂ ಚಲನಚಿತ್ರರಂಗದ ಪುನಶ್ಚೇತನಕ್ಕೆ ನೆರವಾಗುವಂತೆ ಒಂದಷ್ಟು ರಿಯಾಯಿತಿಗಳನ್ನು ಘೋಷಣೆ ಮಾಡುವಂತೆ ಮನವಿ ಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಚಿತ್ರಮಂದಿರಗಳನ್ನು ತೆರೆಯುವ ವಿಷಯ ಹಾಗೂ ದರ ನಿಗದಿ, ತೆರಿಗೆ ವಿನಾಯಿತಿಯಂಥ ವಿಷಯದ ಬಗ್ಗೆಯೂ ಸಹ ಇಲ್ಲಿ ಚರ್ಚೆ ನಡೆಸಲಾಯಿತು. ಈ ಮಹತ್ವದ ಸಭೆಯಲ್ಲಿ ಸಾಕಷ್ಟು ಪ್ರಮುಖ ವಿಷಯಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಚಿತ್ರರಂಗ ಇಟ್ಟಿರುವ ಈ ಬೇಡಿಕೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದು, ಅವರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಸಿ.ಟಿ. ರವಿ ಅವರು ಚಿತ್ರರಂಗದ ಗಣ್ಯರಿಗೆ ಭರವಸೆ ನೀಡಿz್ದÁರೆ. ಈ ಸಭೆಯಲ್ಲಿ ನಟ ದರ್ಶನ್ ಮತ್ತು ಸುದೀಪ್ ಸೇರಿದಂತೆ ಇನ್ನೂ ಕೆಲ ಪ್ರಮುಖರು ಭಾಗವಹಿಸಿರಲಿಲ್ಲ. ಸುದೀಪ್ ಹೈದ್ರಾಬಾದ್‍ನಲ್ಲಿ ಫ್ಯಾಂಟಮ್ ಚಿತ್ರದ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದರಿಂದ ಬಂದಿರಲಿಲ್ಲ.

Translate »