ಚಾಮುಂಡಿಬೆಟ್ಟಕ್ಕೆ ರೋಪ್ ವೇ ಅನಗತ್ಯ
ಮೈಸೂರು

ಚಾಮುಂಡಿಬೆಟ್ಟಕ್ಕೆ ರೋಪ್ ವೇ ಅನಗತ್ಯ

April 11, 2022

ಚಾ.ನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಪುನರುಚ್ಛಾರ
ಯೋಜನೆ ಬೆಟ್ಟಕ್ಕೆ ಕಂಟಕ ಎಂಬುದನ್ನು ಸಿಎಂಗೆ ಪತ್ರ

ಕರ್ನಾಟಕದಲ್ಲಿ ಬಿಜೆಪಿ ಸಂಘ ಟನಾತ್ಮಕವಾಗಿ ಅತ್ಯಂತ ಶಕ್ತಿಯುತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಆಡಳಿತ ನಡೆಸು ತ್ತಿದ್ದಾರೆ. ಅವರಿಗೆ ವ್ಯವದಾನ, ಗಾಂಭೀ ರ್ಯತೆ ಇದೆ. ಯಾವ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ.
-ವಿ.ಶ್ರೀನಿವಾಸ ಪ್ರಸಾದ್

ಮೈಸೂರು,ಏ.೧೦(ಎಸ್‌ಬಿಡಿ)- ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಅನಗತ್ಯ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಗಳಿಗೆ ವಸ್ತುಸ್ಥಿತಿ ತಿಳಿಸಬೇಕೆಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಪುನರುಚ್ಛರಿಸಿದ್ದಾರೆ.

ಮೈಸೂರಿನ ತಮ್ಮ ನಿವಾದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂಪರ್ಕವಿಲ್ಲದ ಸ್ಥಳ ಗಳಲ್ಲಿ ಪ್ರವಾಸಿಗರು ಅಥವಾ ಭಕ್ತರ ಅನುಕೂಲ ಕ್ಕಾಗಿ ರೋಪ್ ವೇ ನಿರ್ಮಿಸುವುದು ಸರಿ. ಆದರೆ ಚಾಮುಂಡಿಬೆಟ್ಟಕ್ಕೆ ಮರ‍್ನಾಲ್ಕು ಸಂಪರ್ಕ ರಸ್ತೆಗಳಿವೆ. ಬೆಟ್ಟದಲ್ಲಿ ಉಳಿದುಕೊಳ್ಳುವ ಅವ ಶ್ಯತೆಯೂ ಇಲ್ಲ. ಕೇವಲ ಅರ್ಧ ಗಂಟೆಯಲ್ಲಿ ಮೈಸೂರು ನಗರಕ್ಕೆ ಬರಬಹುದು. ನಗರದ ಮಧ್ಯಭಾಗದಲ್ಲಿರುವ ಚಾಮುಂಡಿ ಬೆಟ್ಟ ಪ್ರಕೃತಿಯ ಸುಂದರವಾದ ಕೊಡುಗೆ. ಇಲ್ಲಿ ರೋಪ್ ವೇ ನಿರ್ಮಾಣ ಅನಗತ್ಯ ಎಂದು ಹೇಳಿದರು.

ನಾನು ಕಂದಾಯ ಸಚಿವನಾಗಿದ್ದಾಗ ದೇವಿಕೆರೆ ಭಾಗದ ೮ ಎಕರೆ ಪ್ರದೇಶದಲ್ಲಿ ಮೂಲಸೌಕರ್ಯ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲು ನಿರ್ಧ ರಿಸಲಾಗಿತ್ತು. ಕೆಲಸ ಪ್ರಾರಂಭವಾದಾಗ ಮರ‍್ನಾಲ್ಕು ಕಡೆಗಳಲ್ಲಿ ಭೂಕುಸಿತವಾಗಿದ್ದರಿಂದ ತಕ್ಷಣ ಕಾಮಗಾರಿ ಸ್ಥಗಿತಗೊಳಿ ಸಲು ಸೂಚಿಸಿದೆ. ಅಲ್ಲದೆ ಅರಣ್ಯ ಹಾಗೂ ಪರಿಸರ ಇಲಾಖೆ ಸೇರಿದಂತೆ ಸಂಬAಧಪಟ್ಟ ಅಧಿಕಾರಿ ಗಳ ಸಭೆ ಕರೆದು ಚರ್ಚಿ ಸಿದಾಗ ಪರಿಸರ ಇಲಾಖೆ ಅನುಮತಿ ಪಡೆಯದಿ ರುವುದು ತಿಳಿಯಿತು. ಹಾಗಾಗಿ ಕಾಮಗಾರಿ ಗಳಿಂದ ಚಾಮುಂಡಿಬೆಟ್ಟಕ್ಕೆ ಯಾವುದೇ ತೊಂದರೆ ಯಿಲ್ಲ ಎನ್ನುವುದನ್ನು ಪರಿಶೀಲನೆಯಲ್ಲಿ ಖಚಿತ ಪಡಿಸಿಕೊಂಡ ಪರಿಸರ ಇಲಾಖೆ ಅನುಮತಿ ನೀಡಿದ ಬಳಿಕವೇ ಮುಂದುವರೆಯಲು ನಿರ್ಧ ರಿಸಿದ್ದೆವು. ಹಾಗಾಗಿ ರೋಪ್ ವೇ ನಿರ್ಮಾಣ ಕ್ಕಾಗಿ ಪ್ರಕೃತಿದತ್ತ ಸುಂದರ ಬೆಟ್ಟಕ್ಕೆ ಹಾನಿ ಮಾಡು ವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.
ಯದುವಂಶದ ರಾಜರು ತಮ್ಮ ಕುಲದೇವತೆ ಚಾಮುಂಡೇಶ್ವರಿ ದೇವತೆಗೆ ದೇವಾಲಯ ಕಟ್ಟಿಸಿ ದ್ದಾರೆ. ವಿಜಯದಶಮಿ ಹಾಗೂ ವಿಶೇಷ ಸಂದರ್ಭ ಗಳಲ್ಲಿ ರಥೋತ್ಸವ ನಡೆಯುತ್ತದೆ. ಬೆಟ್ಟದಲ್ಲಿ ರುವ ರಾಜೇಂದ್ರ ವಿಲಾಸ ಅರಮನೆಯನ್ನು ಹೋಟೆಲ್ ಆಗಿ ಅಭಿವೃದ್ಧಿಪಡಿಸುವುದಾಗಿ ಪ್ರಮೋದಾದೇವಿ ಒಡೆಯರ್

ಅವರು ಹೇಳಿದ್ದು, ಅದೊಂದು ಅಂತಾರಾಷ್ಟಿçÃಯ ಮಟ್ಟದ ಒಳ್ಳೆಯ ಹೋಟೆಲ್ ಆಗಬಹುದು. ಇನ್ನು ದೇವಾಲಯದ ಬಳಿ ಭಕ್ತರಿಗೆ ಉತ್ತಮ ರೀತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರೆ ಸಾಕು. ಇನ್ಯಾವುದೇ ರೀತಿಯ ಕಟ್ಟಡಗಳು ಬರದಂತೆ ನಿಗಾ ವಹಿಸಿ ಬೆಟ್ಟವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಯಾವುದೇ ಅನಧಿಕೃತ ಕಟ್ಟಡಗಳಿಗೆ ಅವಕಾಶ ಕೊಡದೆ ಪರಿಸರ ಕಾಪಾಡಬೇಕು. ರೋಪ್ ವೇ ನಿರ್ಮಾಣದಿಂದ ಬೆಟ್ಟಕ್ಕೆ ಅಪಾಯ ವಾಗುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ಈ ನಿಟ್ಟಿನಲ್ಲಿ ನಾನೂ ಪತ್ರ ಬರೆದಿದ್ದೇನೆ ಎಂದರು ತಿಳಿಸಿದರು.

ಬಿಜೆಪಿ ಅತ್ಯಂತ ಪ್ರಬಲ ಪಕ್ಷ: ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ವಿಧಾನಸಭಾ ಚುನಾವಣೆ ಬರಲಿದ್ದು, ಕೆಲ ಆಯ್ದ ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ನೀಡಲಿದ್ದು, ಉಳಿದ ಕ್ಷೇತ್ರಗಳಲ್ಲೆಲ್ಲಾ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹೋರಾಟ ನಡೆಯುತ್ತದೆ. ಅಧಿಕಾರ ನಡೆಸುತ್ತಿರುವ ಬಿಜೆಪಿ ಸಂಘಟನೆ ದೃಷ್ಟಿಯಲ್ಲಿ ಬಹಳ ಮುಂದಿದೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ೨೫ ಸ್ಥಾನದಲ್ಲಿ ಗೆದ್ದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕಚ್ಚಾಟ, ಆಡಳಿತ ವೈಫಲ್ಯದಿಂದ ಬೇಸತ್ತು ಹಲವು ಶಾಸಕರು ಹೊರಬಂದು ಬಿಜೆಪಿಯೊಂದಿಗೆ ಸೇರಿದ್ದರಿಂದ ಸರ್ಕಾರ ರಚೆನಯಾಯಿತು. ಈಗ ಬಿಜೆಪಿ ಬಹಳ ಎತ್ತರಕ್ಕೆ ಬೆಳೆದಿದೆ. ವಿರೋಧ ಪಕ್ಷಗಳು ಬೆಲೆ ಏರಿಕೆ ಎಂದು ಕಿರುಚಾಡಿದರೂ ವಾಸ್ತವ ಅರಿತ ಜನ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದರು. ಕೋವಿಡ್ ನಿರ್ವಹಣೆ ಬಗ್ಗೆ ಜನರಲ್ಲಿ ಅರಿವಿತ್ತು. ಕರ್ನಾಟಕದಲ್ಲೂ ಬಿಜೆಪಿ ಉತ್ತಮ ರೀತಿಯಲ್ಲಿ ಪರಿಸ್ಥಿತಿ ನಿಬಾಯಿಸಿದೆ. ಮೇಕೆದಾಟು ವಿಚಾರವಾಗಿ ವಾಸ್ತವ ತಿಳಿದಿದ್ದರೂ ಅನಗತ್ಯ ವಿಪಕ್ಷಗಳಿಂದ ಗೊಂದಲ ಸೃಷ್ಟಿಸಲಾಗುತ್ತಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗ ಪ್ರಧಾನಿಯವರನ್ನು ಭೇಟಿಯಾಗಿ ಯೋಜನೆ ಅಗತ್ಯವನ್ನು ಮನದಟ್ಟು ಮಾಡಬೇಕೆಂದು ಹೇಳಿದರು.

ಬಿಜೆಪಿಗೆ ಮಾತ್ರ ಅವಕಾಶ: ರಾಷ್ಟçಮಟ್ಟದಲ್ಲಿ ಜನಾದೇಶ ಪಡೆದು ಸರ್ಕಾರ ರಚಿಸುವ ಅವಕಾಶವಿರುವುದು ಬಿಜೆಪಿಗೆ ಮಾತ್ರ. ಕಾಂಗ್ರೆಸ್‌ಗೆ ನಾಯಕತ್ವೇ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಆಯಾಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳೇ ಸೇರಿ ಹೋರಾಟ ನಡೆಸಬೇಕೇ ಹೊರತು ಬೇರೆ ಯಾವುದೇ ರಾಷ್ಟಿçÃಯ ಪಕ್ಷಕ್ಕೆ ಆ ಶಕ್ತಿ ಇಲ್ಲ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒರಿಸ್ಸಾ, ಪಂಜಾಬ್, ಮಹಾರಾಷ್ಟç, ದಕ್ಷಿಣದ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಹೀಗೆ ಯಾವ ರಾಜ್ಯಗಳಲ್ಲೂ ಕಾಂಗ್ರೆಸ್ ಶಕ್ತಿ ಕಳೆದುಕೊಂಡಿದೆ ಎಂದು ತಿಳಿಸಿದರು.

Translate »