‘ರೋಟರಿ ಸಿಲಿಕಾನ್ ಪತ್ರಿಕೋದ್ಯಮ’ ಪ್ರಶಸ್ತಿ ಪ್ರದಾನ
ಮೈಸೂರು

‘ರೋಟರಿ ಸಿಲಿಕಾನ್ ಪತ್ರಿಕೋದ್ಯಮ’ ಪ್ರಶಸ್ತಿ ಪ್ರದಾನ

April 8, 2021

ಮೈಸೂರು, ಏ.7(ಎಸ್‍ಪಿಎನ್)- ಮಾಧ್ಯಮ ಕ್ಷೇತ್ರದ ಮೂವರು ಸಾಧಕ ರಿಗೆ ಈ ಸಾಲಿನ `ರೋಟರಿ ಸಿಲಿಕಾನ್ ಪತ್ರಿಕೋದ್ಯಮ’ ಪ್ರಶಸ್ತಿಯನ್ನು ವಿಜಯ ವಿಠ್ಹಲ ವಿದ್ಯಾಸಂಸ್ಥೆ ಗೌರವ ಕಾರ್ಯ ದರ್ಶಿ ರೋ. ಆರ್.ವಾಸುದೇವ ಭಟ್ ಮೈಸೂರಿನ ಜೆಎಲ್‍ಬಿ ರಸ್ತೆಯ ಐಡಿ ಯಲ್ ಜಾವಾ ರೋಟರಿ ಸಭಾಂಗಣ ದಲ್ಲಿ ಬುಧವಾರ ಪ್ರದಾನ ಮಾಡಿದರು.

`ಸುಧರ್ಮ’ ಸಂಸ್ಕøತ ಪತ್ರಿಕೆ ಸಂಪಾದಕ, ಪದ್ಮಶ್ರೀ ಪುರಸ್ಕøತ ಕೆ.ವಿ.ಸಂಪತ್‍ಕುಮಾರ್ ಮತ್ತು ಕೆ.ಎಸ್.ಜಯಲಕ್ಷ್ಮಿ ದಂಪತಿ ಹಾಗೂ ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲ ಕೃಷ್ಣ ಅವರಿಗೆ `ಸಿಲಿಕಾನ್ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ನಂತರ ಮಾತನಾಡಿದ ಅವರು, ಸಾಧಕ ರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ. ಸಮಾಜ ಸಾಧಕ ರನ್ನು ಪ್ರೋತ್ಸಾಹಿಸಿದರೆ, ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಪತ್ರಿಕೋದ್ಯಮವನ್ನು ಸಮಾಜ ಅನು ಮಾನದ ಓರೆಗಣ್ಣಿನಿಂದ ನೋಡಿದರೂ ಮಾಧ್ಯಮ ಕ್ಷೇತ್ರ ಮಾತ್ರ ಸಮಾಜದ ಒಳಿತಿಗಾಗಿಯೇ ಕೆಲಸ ಮಾಡುತ್ತಿದೆ. ಈ ದಿಸೆಯಲ್ಲಿ ರೋಟರಿ ಮೈಸೂರು ಮಿಡ್ ಟೌನ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಈ ವೇಳೆ ರೋಟರಿ ಮೈಸೂರು ಮಿಡ್‍ಟೌನ್ ಅಧ್ಯಕ್ಷ ರೋ. ಎ.ಎನ್. ಅಯ್ಯಣ್ಣ, ಕಾರ್ಯದರ್ಶಿ ಹೆಚ್.ಎಸ್. ವೀರೇಶ್, ಸಿಲಿಕಾನ್ ಕಂಟ್ರೋಲ್ಸ್ ನಿರ್ದೇ ಶಕ ರೋ.ಎಸ್.ರಾಘವೇಂದ್ರ, ರೋ. ಎಂ.ಎಸ್.ರಾಘವೇಂದ್ರ ಉಪಸ್ಥಿತರಿದ್ದರು.

Translate »