- ಐದು ವರ್ಷದವರೆಗೆ ತಿಂಗಳಿಗೆ 5 ಸಾವಿರ ರೂ. ಪಿಂಚಣಿ
- ವಿಧಾನಸಭೆಯಲ್ಲಿ ಅರಣ್ಯ ಸಚಿವ ಆನಂದ್‍ಸಿಂಗ್ ಮಾಹಿತಿ
ಬೆಂಗಳೂರು, ಮಾ.10(ಕೆಎಂಶಿ)- ಆನೆ ಇಲ್ಲವೆ ಕಾಡುಪ್ರಾಣಿಗಳ ದಾಳಿ ಯಿಂದ ಸತ್ತಲ್ಲಿ ಅವರ ಕುಟುಂಬದವರಿಗೆ ನೀಡಲಾಗುವ ಪರಿಹಾರದ ಮೊತ್ತ ಹತ್ತು ಲಕ್ಷ ರೂ. ಹಾಗೂ ಐದು ವರ್ಷಗಳವರೆಗೆ ಮಾಸಿಕ ಐದು ಸಾವಿರ ರೂ. ಪಿಂಚಣಿ ನೀಡಲು ಸರ್ಕಾರ ಯೋಚಿಸಿದೆ ಎಂದು ಅರಣ್ಯ ಸಚಿವ ಆನಂದ್‍ಸಿಂಗ್ ವಿಧಾನ ಸಭೆಯಲ್ಲಿಂದು ಪ್ರಕಟಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಸದಸ್ಯರಾದ ಎ.ಟಿ. ರಾಮಸ್ವಾಮಿ, ಅಪ್ಪಚ್ಚುರಂಜನ್, ಹೆಚ್.ಕೆ. ಕುಮಾರಸ್ವಾಮಿ, ಶ್ರೀನಿವಾಸಗೌಡ ಮತ್ತಿ ತರು ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು ಪ್ರಸ್ತುತ ಪರಿಹಾರದ ಮೊತ್ತ ಏಳೂವರೆ ಲಕ್ಷ ರೂ. ಇದ್ದು, ಅದನ್ನು ಹತ್ತು ಲಕ್ಷಕ್ಕೂ, ಮಾಸಿಕ ಪಿಂಚಣಿ, ಎರಡು ಸಾವಿರದಿಂದ ಐದು ಸಾವಿರಕ್ಕೆ ಹೆಚ್ಚಿಸಲು ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ಹವಾ ಮಾನ ವೈಪರೀತ್ಯದಿಂದ ಆನೆಗಳಿಗೆ ಕಾಡು ಗಳಲ್ಲಿ ಮೇವು ಸಿಗದೆ, ನಾಡಿನತ್ತ ದಾಪು ಗಾಲು ಹಾಕುತ್ತಿವೆ. ಇಲಾಖೆ ಎಷ್ಟೇ ಪ್ರಯತ್ನ ಮಾಡಿದರೂ, ಅರಣ್ಯದಲ್ಲಿ ಮೇವು ಬೆಳೆ ಸುವ ಯತ್ನ ವಿಫಲವಾಗಿದೆ. ಅವುಗಳಿಗೆ ನೀರು ಮತ್ತು ಮೇವು ದೊರೆಯದ ಕಾರಣ ಆಹಾರ ಹುಡಿಕಿಕೊಂಡು ಗ್ರಾಮಗಳತ್ತ ಧಾವಿಸುತ್ತಿವೆ. ಇದರಿಂದ ಅನೇಕ ಸಾವು ನೋವು ಉಂಟಾಗುವುದಲ್ಲದೆ, ರೈತರು ಬೆಳೆದ ಬೆಳೆಗೂ, ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಸತ್ತ ಕುಟುಂಬಕ್ಕೆ ಹೆಚ್ಚು ಪರಿಹಾರ ಕಲ್ಪಿಸುತ್ತಿರುವಂತೆ ಬೆಳೆ ಕಳೆದು ಕೊಂಡ ರೈತರಿಗೂ, ಹೆಚ್ಚಿನ ಪರಿಹಾರ ನೀಡಲಾಗುವುದು ಹಾಗೂ ಈಗಾಗಲೇ ಬೆಳೆ ಕಳೆದುಕೊಂಡಿರುವವರಿಗೆ ಪರಿಹಾರ ಧನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವು ದಾಗಿ ತಿಳಿಸಿದರು. ಆನೆಗಳು ಜನನಿಬಿಡ ಪ್ರದೇಶದತ್ತ ಬರುವುದನ್ನು ತಪ್ಪಿಸಲು ಕಾಡಿನ ಗಡಿಭಾಗದಲ್ಲಿ ಎಷ್ಟೋ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ ದ್ದರೂ, ಅವುಗಳೆಲ್ಲವೂ ವಿಫಲವಾಗಿವೆ.
ಅರಣ್ಯದ ಸುತ್ತ ರೈಲ್ವೆ ಕಂಬಿ ಅಳವಡಿ ಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ನೀಡಿ, ಹೊಸ ಯೋಜನೆ ಯನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದರು. ಇದಕ್ಕೂ ಮುನ್ನ ಮಾತನಾಡಿದ ಸದಸ್ಯರು, ಕಾಡಿನಲ್ಲಿ ನೀರು ಮೇವು ದೊರೆಯದೇ ಆನೆಗಳು ಜನನಿಬಿಡ ಪ್ರದೇಶಕ್ಕೆ ಬರುತ್ತಿವೆ. ಮೊದಲು ಅವುಗಳಿಗೆ ಆಹಾರ ಕಲ್ಪಿಸಲು ಕ್ರಮ ಕೈಗೊಳ್ಳಿ. ಅರಣ್ಯ ಅಂಚಿನಲ್ಲಿ ಬಲವಾದ ಬೇಲಿಗಳನ್ನು ಅಳವಡಿಸು ವಂತೆ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.