ಹುಣಸೂರು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪಿಎಂಜಿಎಸ್‍ವೈ ಯೋಜನೆಯಡಿ 26.87 ಕೋಟಿ ರೂ.
ಮೈಸೂರು ಗ್ರಾಮಾಂತರ

ಹುಣಸೂರು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪಿಎಂಜಿಎಸ್‍ವೈ ಯೋಜನೆಯಡಿ 26.87 ಕೋಟಿ ರೂ.

May 6, 2020

ಹುಣಸೂರು, ಮೇ 5(ಕೆಕೆ)-ಸಂಸದ ಪ್ರತಾಪ್‍ಸಿಂಹ ಅವರ ಶ್ರಮದ ಫಲವಾಗಿ ಹುಣಸೂರು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದಿಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 26. 87 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಬಿಜೆಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಯೋಗಾನಂದ ತಿಳಿಸಿದರು.

ನಗರದ ಪತ್ರಿಕಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆದ ಅವರು, ಸಂಸದರು ತಾಲೂಕಿನಲ್ಲಿ ಪ್ರವಾಸ ಮಾಡಿ ಹದಗೆಟ್ಟಿದ್ದ ರಸ್ತೆಗಳನ್ನು ಗುರುತಿಸಿ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಸದ್ಯ ಇದಕ್ಕೆ ಅನುಮೋದನೆ ದೊರೆತು ಅನುದಾನ ಮಂಜುರಾಗಿದೆ. ತಾಲೂಕಿನ ಕಲ್ಲಹಳ್ಳಿ, ಬಿಳಿಗೆರೆ, ಮೈಲಾಂ ಬೂರು, ಉದ್ದೂರು ಹಾಗೂ ಹೊಸ ಕೊಪ್ಪಲು ಗ್ರಾಮಗಳ 30.35 ಕಿ.ಮೀ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ 2020ರ ಪಿಎಂ ಜಿಎಸ್‍ವೈ  ಯೋಜನೆಯಡಿ 26.87 ಕೋಟಿ ರೂ ಹಣ ದೊರಕಿದೆ. ಇದಕ್ಕೆ ಪ್ರತಾಪ್ ಸಿಂಹ ಅವರ ಶ್ರಮವೇ ಕಾರಣ ಎಂದರು.

ತಾಲೂಕಿನ ಕಲ್ಲಹಳ್ಳಿಯಿಂದ ತಮ್ಮಡ ಹಳ್ಳಿ ಮಾರ್ಗವಾಗಿ ಕೊತ್ತೆಗಾಲ ಗ್ರಾಮಕ್ಕೆ 6.77 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಗಾಗಿ 5.87 ಕೋಟಿ ರೂ., ಬಿಳಿಗೆರೆ ಮೈಲಾಂಬೂರಿನಿಂದ ಜಾಬಗೆರೆ-ಕಳ್ಳಿ ಕೊಪ್ಪಲು ಮಾರ್ಗವಾಗಿ ಮಂಚಬಾಯನ ಹಳ್ಳಿಯ 7.46 ಕಿ.ಮೀ ರಸ್ತೆಗೆ 7.36 ಕೋಟಿ ರೂ., ಉದ್ದೂರು ರಸ್ತೆಯಿಂದ ಉಯಿಗೌಡನಹಳ್ಳಿ-ಬನ್ನಿಕುಪ್ಪೆ ಮಾರ್ಗ ವಾಗಿ ದೊಡ್ಡೆಗೌಡನಕೊಪ್ಪಲು ಗ್ರಾಮದ 6.16 ಕಿ.ಮೀ ರಸ್ತೆಗೆ 5.56 ಕೋಟಿ ರೂ., ಹೊಸಕೊಪ್ಪಲು ಗ್ರಾಮದಿಂದ ಬಿ.ಎಂ. ಮುಖ್ಯರಸ್ತೆ-ಹಬ್ಬನಕುಪ್ಪೆ-ಕೊತ್ತೆಗಾಲ ಮಾರ್ಗವಾಗಿ ಯಮಗುಂಬದ 9.96 ಕಿ.ಮೀ ರಸ್ತೆ ಅಭಿವೃದ್ಧಿಗೆ 8.8 ಕೋಟಿ ರೂ. ಮಂಜೂರಾಗಿದೆ. ಕಾಮಗಾರಿಗೆ ಈಗಾ ಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸರ್ಕಾರದ ಅನುಮೋದನೆ ನಂತರ ಕಾಮಗಾರಿ ಪ್ರಾರಂಭಿ ಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿ ಯಲ್ಲಿ ಬಿಜೆಪಿ ತಾಲೂಕು ಅಧÀ್ಯಕ್ಷ ಹಳ್ಳದಕೊ ಪ್ಪಲು ನಾಗಣ್ಣ, ನಗರಾಧÀ್ಯಕ್ಷ ಗಣೇಶ್ ಕುಮಾರಸ್ವಾಮಿ, ರಮೇಶ್‍ಕುಮಾರ್ ಇದ್ದರು.

 

Translate »