ತವರಿಗೆ ತೆರಳಲು ನೆರವು ಕೋರಿ ತಾಲೂಕು ಆಡಳಿತಕ್ಕೆ ಕಟ್ಟಡ ಕಾರ್ಮಿಕರ ಮುತ್ತಿಗೆ
ಮೈಸೂರು ಗ್ರಾಮಾಂತರ

ತವರಿಗೆ ತೆರಳಲು ನೆರವು ಕೋರಿ ತಾಲೂಕು ಆಡಳಿತಕ್ಕೆ ಕಟ್ಟಡ ಕಾರ್ಮಿಕರ ಮುತ್ತಿಗೆ

May 6, 2020

ನಂಜನಗೂಡು, ಮೇ 5(ರವಿ)-ತಾಲೂಕಿನ ಅಳಗಂಚಿಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಕಟ್ಟಡ ಕಾಮಗಾರಿ ಗೆಂದು ಆಗಮಿಸಿದ್ದ ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದ 300ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ತವರಿಗೆ ತೆರಳುಲು ನೆರವು ನೀಡುವಂತೆ ಒತ್ತಾಯಿಸಿ ಮಂಗಳ ವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ತಹಸೀಲ್ದಾರ್‍ಗೆ ಮನವಿ ಮಾಡಿದರು.

ಅಳಗಂಚಿಯಿಂದ ಕಾಲ್ನಡಿಗೆ ಮೂಲಕ ನಂಜನಗೂಡಿಗೆ ಆಗಮಿಸಿದ್ದ ಕಾರ್ಮಿಕರು, ತಾಲೂಕು ಕಚೇರಿ ಮುಂಭಾಗ ಸಂಘ ಟಿತರಾಗಿ ತಹಸೀಲ್ದಾರ್ ಮುಂದೆ ತಮ್ಮ ಅಳಲು ತೋಡಿಕೊಂಡರು. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕಾಗಿ ಬಿಹಾರ ಹಾಗೂ ಉತ್ತರ ಪ್ರದೇಶದಿಂದ ಕೂಲಿ ಕಾರ್ಮಿಕರನ್ನು ಗುತ್ತಿಗೆದಾರರು ಕರೆ ತಂದಿ ದ್ದರು. ಕಾರ್ಮಿಕರೆಲ್ಲರಿಗೂ ಕಾರ್ಖಾನೆ ಆವರಣದಲ್ಲಿಯೇ ತಾತ್ಕಾಲಿಕ ಶೆಡ್‍ಗಳ ಮೂಲಕ ವಸತಿ ಕಲ್ಪಿಸಿಕೊಡಲಾಗಿದೆ. ಆದರೀಗ ಕೊರೊನಾ ಸಂಕಷ್ಟದಿಂದಾಗಿ ಊರಿಗೆ ಮರಳಲು ಇಚ್ಛಿಸಿರುವ ಬಹು ತೇಕರೂ ಸಾರಿಗೆ ಸೌಲಭ್ಯ ಇಲದೆ ಪರ ದಾಡುವಂತಾಗಿದ್ದು, ತಾಲೂಕು ಆಡಳಿತ ನೆರವಾವಂತೆ ಒತ್ತಾಯಿಸಿದರು.

ಅಹವಾಲು ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್, ಕೆ.ಎಂ.ಮಹೇಶ್‍ಕುಮಾರ್, ಕಾರ್ಮಿಕರ ಬೇಡಿಕೆ ಕುರಿತು ಜಿಲ್ಲಾಧಿಕಾರಿ ಗಳಿಗೆ ಮಾಹಿತಿ ನೀಡಲಾಗಿದೆ. ಅಂತಾ ರಾಜ್ಯಕ್ಕೆ ತೆರಳುವವರು ಕಡ್ಡಾಯವಾಗಿ ಸೇವಾ ಸಿಂಧು ಆಪ್ ಮೂಲಕ ತಮ್ಮ ವಿವರಗಳೊಂದಿಗೆ ಹೆಸರು ನೋಂದಾ ಯಿಸಿಕೊಳ್ಳಬೇಕಿದೆ. ಈ ಸಂಬಂಧÀ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ವಲಸೆ ಕಾರ್ಮಿಕರ ವಿವರವನ್ನು ಆನ್‍ಲೈನ್‍ನಲ್ಲಿ ನಮೂದಿಸಲು ಒಪ್ಪಿದ್ದಾರೆ. ಇನ್ನೆರಡು ದಿನಗಳಲ್ಲಿ ಎಲ್ಲರನ್ನೂ ಅವರ ರಾಜ್ಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಡಳಿತದ ಸಹಕಾರದೊಂದಿಗೆ ಪ್ರಯತ್ನಿಸಲಾಗು ವುದು ಎಂದು ಭರವಸೆ ನೀಡಿದರು. ತಹಸೀ ಲ್ದಾರ್ ಭರವಸೆ ಮೇರೆಗೆ ಕಾರ್ಮಿಕರು ತಾವು ವಾಸ್ತವ್ಯ ಹೂಡಿದ್ದ ಅಳಗಂಚಿಗೆ ಕಾಲ್ನಡಿಗೆಯಲ್ಲೇ ವಾಪಸ್ಸಾದರು.

Translate »