ಪಾಸ್‍ಗಾಗಿ ಬಂದ ವಲಸೆ ಕಾರ್ಮಿಕರ ಹಸಿವು ನೀಗಿಸಿದ ಪೊಲೀಸರು
ಮೈಸೂರು

ಪಾಸ್‍ಗಾಗಿ ಬಂದ ವಲಸೆ ಕಾರ್ಮಿಕರ ಹಸಿವು ನೀಗಿಸಿದ ಪೊಲೀಸರು

May 6, 2020

ಮೈಸೂರು, ಮೇ 5(ಆರ್‍ಕೆ)- ಪಾಸ್ ಕೇಳಲು ಬಂದ ವಲಸೆ ಕಾರ್ಮಿಕರಿಗೆ ಊಟದ ಪ್ಯಾಕೆಟ್ ನೀಡಿದ ಪೊಲೀಸರು ಹಸಿವು ನೀಗಿಸಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯ ಡಿಸಿಪಿ ಕಚೇರಿಗೆ ಪ್ರತಿದಿನ ಪಾಸ್ ಪಡೆಯಲು ನೂರಾರು ಮಂದಿ ವಲಸೆ ಕಾರ್ಮಿಕರು ಬಂದು ಕಾಯುತ್ತಿದ್ದು, ಅವರು ಹಸಿವಿನಿಂದಿದ್ದಾರೆ ಎಂಬುದನ್ನು ಅರಿತ ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡರು ಆಹಾರದ ಪ್ಯಾಕೆಟ್ ಗಳನ್ನು ತರಿಸಿ ಕೊಡುತ್ತಿದ್ದಾರೆ. ಅಂತರ ಜಿಲ್ಲೆ ಮತ್ತು ಅಂತರ ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಕೋವಿಡ್-19 ಲಾಕ್‍ಡೌನ್‍ನಿಂದ ಕೆಲಸವಿಲ್ಲದೇ, ತಮ್ಮ ಊರುಗಳಿಗೆ ಹಿಂದಿರುಗಲು ಪಾಸ್ ಪಡೆ ಯಲು ಬರುತ್ತಿದ್ದು, ಮಕ್ಕಳು, ಮಹಿಳೆಯರು ಊಟ- ತಿಂಡಿ ಇಲ್ಲದೇ ಪರದಾಡುತ್ತಿರುವುದನ್ನು ಕಂಡು ಅವರಿಗೆ ಆಹಾರ ನೀಡುತ್ತಿದ್ದೇವೆ ಎಂದು ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡ ತಿಳಿಸಿದ್ದಾರೆ. ಅವರ ಸಮಸ್ಯೆ ಆಲಿಸಿ, ಪಾಸ್‍ಗಳನ್ನೂ ನೀಡಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು, ಮಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ, ಧಾರವಾಡ, ರಾಜಾಸ್ತಾನ, ತಮಿಳುನಾಡು, ಕೇರಳ ರಾಜ್ಯಗಳ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಪಾಸ್‍ಗಾಗಿ ಬರುತ್ತಿದ್ದು, ಅವರು ಹಸಿವಿನಿಂದ ಬಳಲಬಾರದೆಂದು ದಾನಿಗಳ ನೆರವಿನಿಂದ ಅವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.

Translate »