ಆರ್‍ಎಸ್‍ಎಸ್ ನಾಯಕರು ಸ್ವಾತಂತ್ರ್ಯ   ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ
ಮೈಸೂರು

ಆರ್‍ಎಸ್‍ಎಸ್ ನಾಯಕರು ಸ್ವಾತಂತ್ರ್ಯ  ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ

December 29, 2020

ಮೈಸೂರು,ಡಿ.28(ಎಂಟಿವೈ)- ಪ್ರಸ್ತುತ ಸಂದರ್ಭ ದಲ್ಲಿ ದೇಶಭಕ್ತರೆಂದು ಬಿಂಬಿಸಿಕೊಳ್ಳುತ್ತಿರುವ ಆರ್‍ಎಸ್‍ಎಸ್ ನಾಯಕರು ಸ್ವಾತಂತ್ರ್ಯ ಹೋರಾಟ ದಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಬೆಳಗ್ಗೆ ನಗರ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ 136ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾ ಪನಾ ದಿನದ ಅಂಗವಾಗಿ ನಡೆದ ‘ಸಮರ್ಪಣಾ ದಿವಸ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆರ್‍ಎಸ್‍ಎಸ್ ನಾಯಕರು ಮತ್ತು ಕಾರ್ಯಕರ್ತರು ನಾವೇ ನಿಜ ವಾದ ಭಾರತೀಯ ಮಕ್ಕಳು ಎಂದು ಬೊಬ್ಬೆ ಹೊಡೆ ಯುತ್ತಿದ್ದಾರೆ. 1925 ರಲ್ಲೇ ಆರ್‍ಎಸ್‍ಎಸ್ ಸಂಸ್ಥೆ ಸ್ಥಾಪಿತಗೊಂಡಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಏಕೆ ಪಾಲ್ಗೊಳ್ಳಲಿಲ್ಲ. ಇದರಿಂದ ಅವರ ನೈಜ ಬಣ್ಣ ತಿಳಿಯುತ್ತದೆ. ಕಾಂಗ್ರೆಸ್ ಪಕ್ಷ 136 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಟ ರೂಪಿಸುವುದಕ್ಕಾಗಿಯೇ ರೂಪುಗೊಂಡ ಪಕ್ಷ ಕಾಂಗ್ರೆಸ್. ಅದರಂತೆ ಬ್ರಿಟಿಷರ ವಿರುದ್ಧ ಹೋರಾಡಿ ಅಂದು ಕಾಂಗ್ರೆಸ್‍ನ ಅನೇಕ ನಾಯಕರು ತಮ್ಮ ಜೀವತೆತ್ತು ಸ್ವಾತಂತ್ರ್ಯ ತಂದು ಕೊಟ್ಟರು. ಆದರೆ ಸ್ವಾತಂತ್ರ್ಯ ಹೋರಾಟಕ್ಕೂ ಮುನ್ನವೇ ಅಸ್ತಿತ್ವದಲ್ಲಿದ್ದ ಆರ್‍ಎಸ್‍ಎಸ್ ಮುಖಂ ಡರು ಒಬ್ಬರೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳಲಿಲ್ಲ. ಇದರ ಹಿಂದೆ ಇದ್ದ ಕಾರಣವೇನು? ಎಂಬುದು ಇಂದಿಗೂ ತಿಳಿದಿಲ್ಲ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಾ ನಂತರ ಇದುವರೆಗೂ ದೇಶದಲ್ಲಿ ಗಟ್ಟಿ ಯಾಗಿ ಏಕತೆ ನೆಲೆಸಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ಆಡಳಿತ ಕಾರಣ. ಬಿಜೆಪಿ ಪಕ್ಷಕ್ಕೆ ಯಾವುದೇ ಇತಿ ಹಾಸವಿಲ್ಲ, ಇವರು ಆರ್‍ಎಸ್‍ಎಸ್‍ನಿಂದ ಬಂದು ತಮಗೆ ಉಪಯೋಗವಾಗುವಂತಹ ಕಾಂಗ್ರೆಸ್ ನಾಯಕರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ, ಇದಕ್ಕಾ ಗಿಯೇ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ನಿರ್ಮಿಸಿದರು. ಇದು ಕೇವಲ ರಾಜಕೀಯಕ್ಕಾಗಿ ಮಾತ್ರ. ಏಕೆಂದರೆ ಇದೇ ಪಟೇಲರು 1948ರಲ್ಲಿ ಆರ್‍ಎಸ್‍ಎಸ್ ಸಂಸ್ಥೆಯನ್ನು ಬ್ಯಾನ್ ಮಾಡಿದ್ದರು. ಇಂದು ಅವರ ಪ್ರತಿಮೆಯನ್ನೇ ಬಿಜೆಪಿ ನಾಯಕರು ನಿರ್ಮಿಸಿದ್ದಾರೆಂದರೇ ಅವರ ಒಳಸಂಚು ಅರ್ಥವಾಗಬೇಕು ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಖಚಿತ: ಇಂದು ಕಾಂಗ್ರೆಸ್ ಪಕ್ಷ ವರ್ಚಸ್ಸು ಕಳೆದುಕೊಂಡಿರಬಹುದು, ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ನೂರಕ್ಕೆ ನೂರು ಸತ್ಯ, ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.

ಅಧಿಕಾರ, ಹಣಕ್ಕಾಗಿ ಬಲಿ: ಇದಕ್ಕೂ ಮುನ್ನ ಶಾಸಕ ತನ್ವೀರ್ ಸೇಠ್ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ರಾಜಕೀಯ ವ್ಯವಸ್ಥೆಯೇ ಬದಲಾಗಿದೆ. ಹಣ, ಅಧಿಕಾರಕ್ಕಾಗಿ ರಾಜಕಾರಣಿಗಳು ಬಲಿಯಾಗುತ್ತಿ ದ್ದಾರೆ. ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ವಾದ ಬೆಳವಣಿಗೆ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯಕ್ಕೆ ಧಕ್ಕೆಯಾಗುತ್ತಿದೆ ಎಂದರು.

ಕೇಂದ್ರದ ಕೃಷಿ ಮಸೂದೆ ಕಾಯ್ದೆ ತಿದ್ದುಪಡಿ ವಿರೋ ಧಿಸಿ ತಿಂಗಳಿಂದ ಕೊರೆವ ಚಳಿಯಲ್ಲಿ ಲಕ್ಷಾಂತರ ರೈತರು ದೆಹಲಿಯಲ್ಲಿ ಪ್ರತಿಭಟಿಸುತ್ತಿದ್ದರೂ ಸಹಾ ಪ್ರಧಾನಿಯಾ ದವರು ಅವರ ಬಳಿ ಹೋಗಿ ಮಾತನಾಡದೇ ಇರು ವುದನ್ನು ನೋಡುತ್ತಿದ್ದರೆ, ಇಲ್ಲಿ ಧ್ವನಿ ಇಲ್ಲದವರಿಗೆ ಧ್ವನಿ ನೀಡದ ಸರ್ಕಾರ ಆಳುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.

ಯುವಕರಿಗೆ ಅವಕಾಶ ಅಗತ್ಯ: ಮಾಜಿ ಶಾಸಕ ವಾಸು ಮಾತನಾಡಿ, ಕಾಂಗ್ರೆಸ್ ಪಕ್ಷ ಸುದೀರ್ಘ ಇತಿ ಹಾಸ ಹೊಂದಿರುವ ಪಕ್ಷ. ದೇಶವನ್ನು ಕಟ್ಟಿದ ಶಿಸ್ತಿನ ಪಕ್ಷ, ಆದರೆ ಇಂದು ಆಳುವವರು ಹೆಚ್ಚುತ್ತಿದ್ದು, ಕಟ್ಟುವವರು ಕ್ಷೀಣಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕಟ್ಟಲು, ಪಕ್ಷ ಅಧಿಕಾರಕ್ಕೆ ತರಲು ಮೊದಲು ಯುವಕರಿಗೆ ಹೆಚ್ಚಿನ ಅವಕಾಶ ನೀಡಬೇಕು, ಹೊಸಬರನ್ನು ಪಕ್ಷಕ್ಕೆ ಬರಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಮಾತನಾಡಿ, ದೇಶದ ಎಲ್ಲಾ ಸಮು ದಾಯಗಳ ಜನರಿಗೆ ಕಾಂಗ್ರೆಸ್ ನೆರವಾಗುವ ಕಾರ್ಯ ಕ್ರಮ ರೂಪಿಸಿದೆ. ಮೂಲ ಸೌಲಭ್ಯ ಕಲ್ಪಿಸಿ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ. ಶೋಷಿತ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಮೂಲಕ ಮುನ್ನಲೆಗೆ ತರುವಲ್ಲಿ ಕಾಂಗ್ರೆಸ್ ಅವಿಸ್ಮರ ಣೀಯ ಕೊಡುಗೆ ನೀಡಿದೆ ಎಂದರು. ಕಾರ್ಯಕ್ರಮ ದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಉಪಮೇಯರ್ ಶ್ರೀಧರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕಾರ್ಯ ದರ್ಶಿ ಶಿವಣ್ಣ ಮುಂತಾದವರು ಇದ್ದರು.

 

 

 

 

 

 

Translate »