ಹೊಸ ವರ್ಷಾಚರಣೆ ಡಿ.31ರ ರಾತ್ರಿ 11.30 ಗಂಟೆಗೆ ಬಾರ್, ಹೋಟೆಲ್, ರೆಸ್ಟೋರೆಂಟ್ ಬಂದ್ ಮಾಡಿ ಹೋಟೆಲ್ ಮಾಲೀಕರಿಗೆ ಡಿಸಿಪಿ ಡಾ.ಎ.ಎನ್.ಪ್ರಕಾಶ್‍ಗೌಡ ಸೂಚನೆ
ಮೈಸೂರು

ಹೊಸ ವರ್ಷಾಚರಣೆ ಡಿ.31ರ ರಾತ್ರಿ 11.30 ಗಂಟೆಗೆ ಬಾರ್, ಹೋಟೆಲ್, ರೆಸ್ಟೋರೆಂಟ್ ಬಂದ್ ಮಾಡಿ ಹೋಟೆಲ್ ಮಾಲೀಕರಿಗೆ ಡಿಸಿಪಿ ಡಾ.ಎ.ಎನ್.ಪ್ರಕಾಶ್‍ಗೌಡ ಸೂಚನೆ

December 29, 2020

ಮೈಸೂರು,ಡಿ.28(ಆರ್‍ಕೆ)-ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ರಾತ್ರಿ 11.30 ಗಂಟೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಬಾರ್‍ಗಳನ್ನು ಬಂದ್ ಮಾಡಬೇಕೆಂದು ಮೈಸೂರು ನಗರ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡ ಖಡಕ್ ಸೂಚನೆ ನೀಡಿದ್ದಾರೆ.

ಈ ಕುರಿತಂತೆ ನಜರ್‍ಬಾದ್‍ನಲ್ಲಿರುವ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಹೋಟೆಲ್, ಬಾರ್, ರೆಸ್ಟೋರೆಂಟ್ ಮಾಲೀಕರ ಸಭೆ ನಡೆಸಿದ ಅವರು, ಕೋವಿಡ್ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಹೊಸ ವರ್ಷಾಚರಣೆಗೆ ಸರ್ಕಾರ ಮಾರ್ಗಸೂಚಿಗಳನ್ನು ನೀಡಿದ್ದು, ಅದನ್ನು ಕಟ್ಟುನಿಟ್ಟಾಗಿ ಆಚರಿಸುವುದು ಅನಿವಾರ್ಯ ಎಂದರು.

ಎಂದಿನಂತೆ ಅಂದು ರಾತ್ರಿ 11.30 ಗಂಟೆಗೆ ಲೈಟ್ ಆಫ್ ಮಾಡಿ ಬಾಗಿಲು ಬಂದ್ ಮಾಡಬೇಕು, ಡಿಜೆ, ಡ್ಯಾನ್ಸ್, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಬಾರದು, ಸಾಮಥ್ರ್ಯದ ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಿ ದೂರ ದೂರ ಕೂರುವಂತೆ ವ್ಯವಸ್ಥೆ ಮಾಡಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಡಿಸಿಪಿ ಡಾ. ಪ್ರಕಾಶ್‍ಗೌಡ ತಿಳಿಸಿದರು.

ಮದ್ಯ, ಆಹಾರ ಪೂರೈಸುವುದನ್ನು ಅಂದು ರಾತ್ರಿ 11 ಗಂಟೆಗೇ ಸ್ಥಗಿತ ಗೊಳಿಸಬೇಕು, 11.30 ಗಂಟೆಗೆ ಎಲ್ಲಾ ಗ್ರಾಹಕರನ್ನು ಹೊರಗೆ ಕಳುಹಿಸಿ ಉದ್ದಿಮೆಯ ಬಾಗಿಲು ಬಂದ್ ಮಾಡಬೇಕು, ನಿಯಮ ಉಲ್ಲಂಘಿಸಿ ದಲ್ಲಿ ಪೊಲೀಸರು ಬಂದು ಅಗತ್ಯ ಕ್ರಮ ವಹಿಸುತ್ತಾರೆ. ಸಿಸಿಟಿವಿ ಕ್ಯಾಮರಾ ಫುಟೇಜಸ್ ಪಡೆದು ಅಂತಹವರ ವಿರುದ್ಧ ಪ್ರಕರಣ ದಾಖ ಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮೈಸೂರು ನಗರದಾ ದ್ಯಂತ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಕೋವಿಡ್ ಹರಡದಂತೆ ತಡೆದು ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಹೊಸ ವರ್ಷ ಆಚರಿಸಲು ಸಹಕರಿಸುವಂತೆಯೂ ತಿಳಿಸಿದರು.

Translate »