ಮೈಸೂರಲಿ ್ಲ`ಡೆಂಗ್ಯೂ’ ರುದ್ರ ನರ್ತನ
ಮೈಸೂರು

ಮೈಸೂರಲಿ ್ಲ`ಡೆಂಗ್ಯೂ’ ರುದ್ರ ನರ್ತನ

August 12, 2022

ಮೈಸೂರು, ಆ.11-ಸದ್ದಿಲ್ಲದೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನ ಜೊತೆಗೆ ಮನೆ ಮನೆಯಲ್ಲೂ ಶೀತ, ನೆಗಡಿ, ಕೆಮ್ಮು, ಜ್ವರ, ಮೈ-ಕೈ ನೋವು, ತಲೆ ನೋವಿ ನಿಂದ ಬಳಲು ವವರ ಸಂಖ್ಯೆ ಹೆಚ್ಚಾಗಿದೆ. ಹವಾಮಾನ ಬದಲಾವಣೆ ಹಿನ್ನೆಲೆ ಯಲ್ಲಿ ಮಕ್ಕಳು, ವಯಸ್ಕರು ಸೇರಿದಂತೆ ಎಲ್ಲರಿಗೂ ಸಾಂಕ್ರಾ ಮಿಕ ರೋಗ ವ್ಯಾಪಿಸಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೂಕು-ನುಗ್ಗಲು ಉಂಟಾಗಿದೆ. ನಿರಂತರ ಮಳೆ, ಶೀತಗಾಳಿ, ಕೆಲವೊಮ್ಮೆ ಬಿಸಿಲು, ಮೋಡ ಕವಿದ ವಾತಾ ವರಣದಿಂದಾಗಿ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ.

ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಶೀತ, ಕೆಮ್ಮು, ಜ್ವರ ಸಾಮಾನ್ಯವಾದರೂ ಬಳಲುವವರ ಪ್ರಮಾಣ ಹೆಚ್ಚಾ ಗಿದೆ. ಡೆಂಗ್ಯೂ ಜ್ವರ ಹೆಚ್ಚಾಗಿ ಕಂಡು ಬರುತ್ತಿರುವುದರ ಜೊತೆಗೆ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಪ್ರತಿನಿತ್ಯ 300-400 ಮಂದಿ ಜ್ವರ, ಶೀತ, ನೆಗಡಿ, ಗಂಟಲು ನೋವು ಎಂದೇ ಭೇಟಿ ನೀಡು ತ್ತಿದ್ದಾರೆ. ಕೆ.ಆರ್.ಆಸ್ಪತ್ರೆ ಸೇರಿದಂತೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೂಕು-ನುಗ್ಗಲು ಉಂಟಾಗಿದ್ದು, ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಕೆಲವರು ಮೆಡಿಕಲ್‍ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ತಮಗೆ ತಿಳಿದಿರುವ ಔಷಧಿ-ಮಾತ್ರೆಗಳನ್ನು ಪಡೆದುಕೊಂಡು ಸೇವಿಸುವುದು ಸಾಮಾನ್ಯವಾಗಿದೆ. ಕಳೆದ ಜುಲೈ ತಿಂಗಳಿನಲ್ಲಿ ಕೆ.ಆರ್.ಆಸ್ಪತ್ರೆಗೆ 3620 ಮಂದಿ ಹೊರರೋಗಿಗಳು ಭೇಟಿ ನೀಡಿದ್ದು, ಅವರ ಬಹುತೇಕ ಮಂದಿ ಜ್ವರ, ನೆಗಡಿ, ಶೀತ, ಕೆಮ್ಮು ಎಂದು ಚಿಕಿತ್ಸೆ ಪಡೆದವರಾಗಿದ್ದಾರೆ. ಹಾಗೆಯೇ ಜೆಎಸ್‍ಎಸ್, ಅಪೋಲೋ ಸೇರಿದಂತೆ ನಗರದ ಪ್ರಮುಖ ಆಸ್ಪತ್ರೆಗಳು ಹಾಗೂ ಸರ್ಕಾರಿ ಪ್ರಾಥಮಿಕ ಕೇಂದ್ರಗಳಿಗೆ ಸಾಕಷ್ಟು ಜನರು ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಡೆಂಗ್ಯೂ ಜ್ವರ: ಮಕ್ಕಳು, ವಯೋವೃದ್ಧರಲ್ಲಿ ಹೆಚ್ಚಾಗಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಜನವರಿ ತಿಂಗಳಿನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 450ಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ಕಾಣಿಸಿಕೊಂಡಿದೆ. ಅವರಲ್ಲಿ ಹೆಚ್ಚಾಗಿ ಮಕ್ಕಳು ಡೆಂಗ್ಯೂ ಜ್ವರದಿಂದ ಬಳಲಿದ್ದಾರೆ. ಅಲ್ಲದೆ ಸುಮಾರು 50ಕ್ಕೂ ಹೆಚ್ಚು ಮಂದಿಗೆ ಚಿಕುನ್ ಗುನ್ಯಾ ಹಾಗೂ ಹೆಚ್1ಎನ್1 ಸೋಂಕಿನ ಲಕ್ಷಣಗಳು ಕಂಡು ಬಂದಿವೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಚಿದಂಬರ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು. ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆ, ಶೀತ ಗಾಳಿ ಹಾಗೂ ಮೊಡ ಕವಿದ ವಾತಾವರಣ ದಿಂದಾಗಿ ಸೊಳ್ಳೆಗಳ ಪ್ರಮಾಣ ಹೆಚ್ಚಾಗಲಿದೆ. ಮುಖ್ಯವಾಗಿ ಆಗಾಗ ಮಳೆ ಸುರಿಯುವು ದರಿಂದ ಗುಂಡಿಗಳಲ್ಲಿ, ಹಳ್ಳ-ಕೊಳ್ಳಗಳಲ್ಲಿ ನೀರು ನಿಂತು ಡೆಂಗ್ಯೂ ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಬಿಸಿಲು ಬಂದರಷ್ಟೇ ಸೊಳ್ಳೆಗಳ ಕಾಟ ಕಡಿಮೆಯಾಗುವುದು. ಜಿಲ್ಲೆಯ ಪ್ರಮುಖ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ರಕ್ತ ಪರೀಕ್ಷೆ ಮಾಡಿಸಿಕೊಂಡವರ ಶೇ.80 ರಷ್ಟು ಮಾಹಿತಿ ದೊರೆಯಲಿದ್ದು, ಕಳೆದ 7 ತಿಂಗಳಲ್ಲಿ 2389 ಮಂದಿಗೆ ಡೆಂಗ್ಯೂ ರಕ್ತ ಪರೀಕ್ಷೆಯಾಗಿದೆ ಎಂದು ತಿಳಿಸಿದರು.

ಹರಡುವಿಕೆ ಜಾಸ್ತಿ: ಮನೆಯಲ್ಲಿ ಒಬ್ಬರಿಗೆ ಜ್ವರ, ನೆಗಡಿ, ಕೆಮ್ಮು ಬಂದರೆ ಮನೆ ಮಂದಿಗೆಲ್ಲಾ ಹರಡುವ ಸಾಧ್ಯತೆ ಹೆಚ್ಚು. ಅವರಲ್ಲಿ 10 ಮಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಿದರೆ ಒಬ್ಬರು ಅಥವಾ ಇಬ್ಬರಿಗೆ ಪಾಸಿಟಿವ್ ಬರುವ ಸಾಧ್ಯತೆಯೂ ಇದೆ. ಕೊರೊನಾ ಸೋಂಕಿನ ಹಾಗೂ ಹೆಚ್1ಎನ್1 ಗುಣಲಕ್ಷಣಗಳು ಒಂದೇ ರೀತಿಯದ್ದಾಗಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ಜೊತೆಗೆ ಮುಂಜಾಗ್ರತೆ ಕ್ರಮ ವಹಿಸುವುದು ಅತ್ಯಂತ ಅವಶ್ಯವಾಗಿದೆ ಎಂದರು.

ಮಾಸ್ಕ್, ಸಾಮಾಜಿಕ ಅಂತರ ಮುಖ್ಯ: ಜ್ವರ, ಶೀತ, ಕೆಮ್ಮಿಗೆ ಸಾಮಾನ್ಯವಾಗಿ ನೀಡುವ ಚಿಕಿತ್ಸೆಯನ್ನೇ ನೀಡಲಾಗುತ್ತದೆ. ಚಿಕಿತ್ಸೆ ಜೊತೆಗೆ ಜ್ವರ, ಶೀತ ಇದ್ದವರು ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಕೋಲ್ಡ್(ಶೀತ) ಪದಾರ್ಥ ಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಶಾಲೆ ಯಾವುದಾದರೂ ಮಗುವಿಗೆ ಆನಾರೋಗ್ಯವಿದ್ದರೆ ಮೂರ್ನಾಲ್ಕು ದಿನಗಳ ಕಾಲ ರಜೆ ನೀಡುವುದು ಉತ್ತಮ, ಇಲ್ಲವಾ ದರೆ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೂ ಹರಡುವ ಸಾಧ್ಯತೆ ಹೆಚ್ಚು ಎಂದು ಕೆ.ಆರ್.ಆಸ್ಪತ್ರೆ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಲಕ್ಷ್ಮೇಗೌಡ ಎಚ್ಚರಿಸಿದರು. ದೇಹದಲ್ಲಿ ಬಿಳಿರಕ್ತ ಪ್ರಮಾಣ ಕಡಿಮೆಯಾದಷ್ಟು ಜ್ವರ ಜಾಸ್ತಿಯಾಗುತ್ತದೆ. ಒಂದು ವಾರಕ್ಕಿಂತ ಹೆಚ್ಚಿನ ದಿನಗಳು ಜ್ವರ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಡೆಂಗ್ಯೂ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಕಳೆದ ಎರಡು ತಿಂಗಳಿಂದ ಜ್ವರ, ನೆಗಡಿ ಇನ್ನಿತರೆ ಸಮಸ್ಯೆಗಳನ್ನು ಹೇಳಿಕೊಂಡು ಬರುವವರ ಸಂಖ್ಯೆ ಬಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಬಿಸಿ ಪದಾರ್ಥ: ಮಳೆಗಾಲದಲ್ಲಿ ಬಿಸಿಯಾಗಿರುವ ಆಹಾರ ಪದಾರ್ಥ ಸೇವಿಸುವುದು ಒಳ್ಳೆಯದಾಗಿದ್ದು, ಫ್ರೀಡ್ಜ್ ನಲ್ಲಿಟ್ಟು ಬಳಸುವುದು ಸರಿಯಲ್ಲ. ಐಸ್ ಕ್ರೀಂನಿಂದ ಕೆಲ ದಿನಗಳು ದೂರವಿದ್ದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಕಿವಿಮಾತು ಹೇಳಿದರು.

Translate »