ಆಡಳಿತಾರೂಢ ಬಿಜೆಪಿ, ಜೆಡಿಎಸ್‍ಗೆ ಜನ ಬೆಂಬಲವಿಲ್ಲ; ಕಾಂಗ್ರೆಸ್‍ಗೆ 144 ಸ್ಥಾನ: ಡಿಕೆಶಿ ಭವಿಷ್ಯ
ಮೈಸೂರು

ಆಡಳಿತಾರೂಢ ಬಿಜೆಪಿ, ಜೆಡಿಎಸ್‍ಗೆ ಜನ ಬೆಂಬಲವಿಲ್ಲ; ಕಾಂಗ್ರೆಸ್‍ಗೆ 144 ಸ್ಥಾನ: ಡಿಕೆಶಿ ಭವಿಷ್ಯ

February 16, 2023

ಹುಣಸೂರು, ಫೆ.15- ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ. ದಾನ ಧರ್ಮ ಮಾಡುವ `ಕೈ’ಯ್ಯಲ್ಲಿ ಅಧಿಕಾರವಿದ್ದರೆ ಚಂದ ಎಂದು ಅಮಾಯಕ ಬಾಲಕನೊಬ್ಬ ಹೇಳುವ ಮಾತಿನಂತೆ ಮುಂಬರುವ ಚುನಾ ವಣೆಯಲ್ಲಿ ಆಡಳಿತಾರೂಢ ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಜನ ಬೆಂಬಲವಿಲ್ಲ. ಕಾಂಗ್ರೆಸ್ 144 ಸ್ಥಾನದೊಂದಿಗೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು.

ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಕಾಂಗ್ರೆಸ್‍ನ ಪ್ರಜಾಧ್ವನಿ ಯಾತ್ರೆ ಸಮಾವೇಶಕ್ಕೆ ಚಾಲನೆ ನೀಡಿ ಮಾತ ನಾಡಿದ ಅವರು, ನಾನು ರಾಜ್ಯದ ಎಲ್ಲಾ ಕಡೆ ತಿರುಗಾಡು ತ್ತಿದ್ದೇನೆ. ಆಡಳಿತ ಪಕ್ಷದ ದುರಾಡಳಿತದ ಬಗ್ಗೆ ರಾಜ್ಯದ ಜನತೆಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರ ಆಶಯ ದಂತೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹು ಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದರು.

ಅರಸರ ಸಾಮಾಜಿಕ ನ್ಯಾಯ ಪಾಲನೆ: ಸಾಮಾಜಿಕ, ಅಭಿ ವೃದ್ಧಿಯ ಹರಿಕಾರ, ಭೂ ಸುಧಾರಣೆ ಚಿಂತಕ ದಿವಂಗತ ಡಿ. ದೇವರಾಜ ಅರಸರ ಮಾರ್ಗದಲ್ಲಿ ನಡೆಯುವ ಮೂಲಕ ರಾಜಕಾರಣ ಮಾಡುತ್ತಿದ್ದು, ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡುತ್ತಿದ್ದೇವೆ. ನಾನು ಹುಣಸೂರಿಗೆ ಉಪಚುನಾವಣೆ ವೇಳೆ ಬಂದಿದ್ದೆ. ಅಂದು ಹೆಚ್.ವಿಶ್ವನಾಥ್ ವಿರುದ್ಧ ಹೆಚ್.ಪಿ. ಮಂಜು ನಾಥ್‍ಗೆ ಆಶೀರ್ವಾದ ಮಾಡಿ ಕಾಂಗ್ರೆಸ್ ಬೆಂಬಲಿಸಿದ್ದೀರಿ. ಅದೇ ರೀತಿ ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿಸಿ, ಕಮಿಷನ್ ದಂಧೆ ಸರ್ಕಾರವನ್ನು ಕೊನೆಗಾಣಿಸಿ ಎಂದರು.

ವಿಶ್ವನಾಥ್ ಬಗ್ಗೆ ಮೆಚ್ಚುಗೆ: ಹೆಚ್.ವಿಶ್ವನಾಥ್ ಪ್ರಜ್ಞಾವಂತರು. ಆದರೆ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಹೋಗಿ ಅಲ್ಲಿನ ಅಂತರಂಗ ಅರಿತು ಬೇಸತ್ತು ಅಲ್ಲಿಂದ ಹೊರಬಂದು ಅಲ್ಲಿನ ನ್ಯೂನತೆಗಳನ್ನು ರಾಜಾರೋಷವಾಗಿ ಜನತೆ ಮುಂದಿಟ್ಟರು. ನನ್ನ ಝಂಡಾ ಬೇರೆ ಇರಬಹುದು. ಆದರೆ ಅಜೆಂಡಾ ಒಂದೇ ಎಂದು ಹೇಳುವ ಮೂಲಕ ದೂರಾ ಲೋಚನೆ ಮಾಡಿ ಮರಳಿ ಗೂಡಿಗೆ ಬರುವ ತವಕದಲ್ಲಿ ದ್ದಾರೆ. ಇತ್ತೀಚೆಗೆ ಅವರು ನನ್ನ ಬಳಿ ಬಂದು ನಾನು ಕೊನೆ ಯದಾಗಿ ಕಾಂಗ್ರೆಸ್ಸಿಗನಾಗಿ ಸಾಯುತ್ತೇನೆ ಎನ್ನುವ ಮೂಲಕ ಕೊನೆಗೆ ಕಾಂಗ್ರೆಸ್‍ನ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿರುವ ಅವರು ಉತ್ತಮ ವಾಗ್ಮಿ, ಚಿಂತಕರು, ಹಿರಿಯ ನಾಯಕರಾದ ಅವರ ಅನುಭವಗಳನ್ನು ನಾವು ಮೆಲುಕು ಹಾಕುವ ಮೂಲಕ ಮುನ್ನಡೆಯಬೇಕಾಗಿದೆ ಎಂದರು.

ಅಧಿಕಾರ ಶಾಶ್ವತವಲ್ಲ: ಇಲ್ಲಿ ಯಾರೂ ಶಾಶ್ವತರಲ್ಲ. ಅಧಿಕಾರ ಶಾಶ್ವತವಲ್ಲ. ಹೀಗಾಗಿ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದೇ ಮುಖ್ಯ. ಹೆಚ್.ಪಿ.ಮಂಜುನಾಥ್ ಹಾಗೂ ಅವರ ಕುಟುಂಬ ಸಾಯಿ ಮಂದಿರ ಸ್ಥಾಪಿಸಿದ್ದಾರೆ. ಅದು ಶಾಶ್ವತವಾಗಿ ನೂರಾರು ಕಾಲ ನೆನಪಾಗಿ ಉಳಿಯಲಿದೆ ಎಂದರು.
ಅನುದಾನದಲ್ಲಿ ತಾರತಮ್ಯ: ಶಾಸಕ ಹೆಚ್.ಪಿ.ಮಂಜು ನಾಥ್ ಮಾತನಾಡಿ, ಕ್ಷೇತ್ರಗಳಿಗೆ ನೀಡುವ ಅನುದಾನದಲ್ಲಿ ತಾರತಮ್ಯ, ಮಲತಾಯಿ ಧೋರಣೆ, ಜನಪರ ಕೆಲಸಗಳಿಗೆ ಅವಕಾಶವಿಲ್ಲದೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅನುದಾನವಿರುವ ಕೆಲಸಗಳನ್ನು ಕೆಲಸ ಮಾಡಲು ಬಿಡುತ್ತಿಲ್ಲ. ನಿನ್ನೆ ಸದನದಲ್ಲಿ ತಂಬಾಕು ರೈತರ ಮತ್ತು ಅನುದಾನ ತಾರತಮ್ಯದ ಬಗ್ಗೆ ಮಾತನಾಡಿ ದ್ದೇನೆ. ಆದರೂ ಬಿಜೆಪಿ ಸರ್ಕಾರ ಹಿಟ್ಲರ್‍ನಂತೆ ನಡೆದುಕೊಳ್ಳು ತ್ತಿದೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಅನುದಾನ ನೀಡು ವಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ಕಮಿಷನ್ ದಂಧೆಯಲ್ಲಿ ಮುಳುಗಿರುವ ಬಿಜೆಪಿಯನ್ನು ಕಿತ್ತೊಗೆಯಲು ರಾಜ್ಯದ ಜನತೆ ಚುನಾವಣೆ ಎದುರು ನೋಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ತಕ್ಕ ಶಾಸ್ತಿ ಮಾಡಲಿದ್ದಾರೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ರಾಜ್ಯದ ಜನರಿಗೆ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ತಿಳಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಹೆಚ್.ಸಿ.ಮಹ ದೇವಪ್ಪ, ವಿಧಾನಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಮಾಜಿ ಸಚಿವೆ ರಾಣಿ ಸತೀಶ್ ಮತ್ತಿತರರು ಮಾತನಾಡಿದರು.

ತಾಲೂಕಿನ ಚಿಕ್ಕಾಡನಹಳ್ಳಿಯಿಂದ ಹೊರಟ ಪ್ರಜಾಧ್ವನಿ ಯಾತ್ರೆ ಮನುಗನಹಳ್ಳಿ, ಬಿಳಿಕೆರೆ, ಕುಪ್ಪೆ, ಕೊಳಗಟ್ಟ, ಬನ್ನಿಕುಪ್ಪೆ, ಮೂಕನಹಳ್ಳಿ ಮಾರ್ಗವಾಗಿ ಹುಣಸೂರು ಹೆಬ್ಬಾಗಿಲಿಗೆ ಆಗಮಿಸಿತು. ಅಲ್ಲಿ ಡಿ.ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿ ನಂತರ 500ಕ್ಕೂ ಹೆಚ್ಚು ಕಳಸ ಹೊತ್ತ ಮಹಿಳೆಯರ ಪೂರ್ಣಕುಂಭ ಸಾರಥ್ಯದೊಂದಿಗೆ ಪ್ರಜಾಧ್ವನಿ ಯಾತ್ರೆ ನಗರ ಪ್ರವೇಶಿಸಿತು. ಈ ವೇಳೆ ಕಲ್ಪತರು ವೃತ್ತದಲ್ಲಿ ಕೇಸರಿ ಬಿಳಿ ಹಸಿರು ಬಣ್ಣವುಳ್ಳ ಕಿತ್ತಳೆ, ಮಲ್ಲಿಗೆ, ಸೇಬಿನ ಭಾರೀ ಗಾತ್ರದ ಹಾರವನ್ನು ಜೆಸಿಬಿ ಮೂಲಕ ಡಿ.ಕೆ.ಶಿವ ಕುಮಾರ್ ಮತ್ತು ಗಣ್ಯರಿಗೆ ಹಾಕಲಾಯಿತು. ಅಲ್ಲಿಂದ ಯಾತ್ರೆ ಮುನೇಶ್ವರ ಕಾವಲ್ ಮೈದಾನ ತಲುಪಿತು. ಅರಸು ಪ್ರತಿಮೆ ಯಿಂದ ಮುನೇಶ್ವರ ಕಾವಲ್ ಮೈದಾನದವರೆಗೆ ಸಾವಿರಾರು ಮಂದಿ ಕಾರ್ಯಕರ್ತರು ಬೈಕ್
ರ್ಯಾಲಿ ನಡೆಸಿದರು. ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು ಕಾರ್ಯಕ್ರಮದ ನಂತರ ಯಾತ್ರೆ ಹೆಚ್.ಡಿ.ಕೋಟೆ ಕಡೆಗೆ ಪ್ರಯಾಣ ತೆರಳಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಶಾಸಕ ಎಚ್.ಎಂ. ರೇವಣ್ಣ, ಜಿ.ಸಿ.ಚಂದ್ರಶೇಖರ್, ಧರ್ಮಸೇನಾ, ಸಚಿನ್, ಜಿûಯಾ, ಸೂರಜ್ ಹೆಗ್ಡೆ, ಲಕ್ಷ್ಮಣ್, ಸೋಮಣ್ಣ, ಮಂಜುಳ, ಜಿಪಂ ಮಾಜಿ ಅಧ್ಯಕ್ಷ ಮರಿಗೌಡ, ಹೆಚ್.ಎನ್.ಪ್ರೇಮ್ ಕುಮಾರ್, ರಾಮನಾಥ್, ಎಸ್.ಬಸವರಾಜ್, ನರೇಂದ್ರ, ಸೋಮಶೇಖರ್, ಶಿವನಾಗಪ್ಪ, ಬ್ಲಾಕ್ ಅಧ್ಯಕ್ಷರಾದ ಟಿ.ವಿ.ನಾರಾಯಣ್, ರಮೇಶ್, ದೇವರಾಜ್, ಪುಟ್ಟರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ಉದ್ಯಮಿ ಹೆಚ್.ಪಿ.ಅಮರ್‍ನಾಥ್ ಸೇರಿದಂತೆ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »