ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಗ್ರಾಮೀಣ ಜನರಿಗೆ ಸುರಕ್ಷಿತ ಸರ್ವಿಸ್ ರಸ್ತೆ
ಮೈಸೂರು

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಗ್ರಾಮೀಣ ಜನರಿಗೆ ಸುರಕ್ಷಿತ ಸರ್ವಿಸ್ ರಸ್ತೆ

December 17, 2020

ಮೈಸೂರು,ಡಿ.16-ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿ -275 ಅಗಲೀಕರಣ ಹಾಗೂ 6 ಪಥಗಳ ಸೇರ್ಪಡೆ ವೇಳೆ ಆ ಭಾಗದ ಗ್ರಾಮೀಣ ಜನರ ಸುರಕ್ಷಿತ ಸಂಚಾರಕ್ಕಾಗಿ ಸರ್ವಿಸ್ ರಸ್ತೆಗಳನ್ನು ನಿರ್ಮಿಸುವಾಗ ಸುರಕ್ಷತೆಗೆ ಹೆಚ್ಚು ಗಮನ ಹರಿಸಬೇ ಕಿದೆ. ಅದರಲ್ಲೂ ಅಂಡರ್‍ಪಾಸ್‍ಗಳಲ್ಲಿ ಸರಾಗ ಪ್ರವೇಶ-ನಿರ್ಗ ಮನಕ್ಕೆ ಅಗತ್ಯವಾದ ಕಾಮಗಾರಿ ಕೈಗೊಳ್ಳಬೇಕಿದೆ. ಒಟ್ಟಿನಲ್ಲಿ ಆ ಭಾಗದ ಹಳ್ಳಿಗಾಡಿನ ಜನರ ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಿದೆ ಎಂದು ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹ ಅವರು, ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದಾರೆ.

ಅಲ್ಲದೇ, ದಶಪಥ ಹೆದ್ದಾರಿಯು ಬೈಪಾಸ್‍ಗಳನ್ನು ಮತ್ತು ಕೈಗಾ ರಿಕಾ ಪ್ರದೇಶಗಳನ್ನು ಸಂಪರ್ಕಿಸುವ ಜಾಗಗಳಲ್ಲಿಯೂ ಸುರಕ್ಷಿತ ವಾಗಿ ಪ್ರವೇಶಿಸಲು ಮತ್ತು ನಿರ್ಗಮಿಸಲು ವಾಹನಗಳಿಗೆ ಅನುಕೂಲ ವಾಗುವಂತೆ ಕಾಮಗಾರಿ ಕೈಗೊಳ್ಳಬೇಕಿದೆ. ಆ ಮೂಲಕ ಸಂಭಾವ್ಯ ಅಪಘಾತಗಳನ್ನು ತಪ್ಪಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.

ಈ ದಿಶೆಯಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ಆ ಭಾಗದ ಗ್ರಾಮೀಣ ಜನರು ಮತ್ತು ರಸ್ತೆ ಸಂಚಾರಿಗಳಿಗೆ ಮನದಟ್ಟು ಮಾಡಿಕೊಡಲು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ `ಅನುಷ್ಠಾನ ವರದಿ’ ಪ್ರಕಟಿಸುವ ಅಗತ್ಯವಿದೆ ಎಂದೂ ಗಮನ ಸೆಳೆದಿದ್ದಾರೆ.

ನಾಗನಹಳ್ಳಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬರುವ ನಾಗನಹಳ್ಳಿಯಲ್ಲಿ 400 ಎಕರೆಗಳಲ್ಲಿ ನಾಗನಹಳ್ಳಿ ಗೂಡ್ಸ್ ಟರ್ಮಿನಲ್ ರೈಲ್ವೆ ಸ್ವೇಷನ್ ಮತ್ತು ಕೃಷಿ ವಿಶ್ವವಿದ್ಯಾಲಯ ನಿರ್ಮಾ ಣದ ಪ್ರಸ್ತಾವನೆ ಇದೆ. ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಪರಿ ಶೀಲಿಸುವಾಗ ಈ ಜಾಗದಲ್ಲಿ ಅಂಡರ್‍ಪಾಸ್ ಪ್ರಸ್ತಾವವಿದೆ. ಸ್ಥಳ ಪರಿಶೀಲನೆ ವೇಳೆ, ಇದರಿಂದ ಅನಾನುಕೂಲವಾಗಲಿದೆ ಎಂದೆನಿಸಿದೆ. ಹಾಗಾಗಿ, ಈ ಅಂಡರ್‍ಪಾಸ್ ಅನ್ನು ಸಿದ್ದಲಿಂಗ ಪುರ ಬಳಿ ನಿರ್ಮಿಸಬೇಕಿದೆ ಎಂದೂ ಸಂಸದರು ಮನವಿ ಮಾಡಿದ್ದಾರೆ. ಇದರಿಂದ ಸಿದ್ದಲಿಂಗಪುರದ ಜನರಿಗೆ ತಮ್ಮ ಗ್ರಾಮದ ಇನ್ನೊಂದು ಪಾಶ್ರ್ವದ ಸಂಪರ್ಕವೂ ಸುಲಭವಾಗ ಲಿದೆ. 2-3 ಕಿಮೀಗಳಷ್ಟು ದೂರವನ್ನು ಸುತ್ತು ಹಾಕುವುದೂ ತಪ್ಪಲಿದೆ. ಈ ವಿಚಾರದಲ್ಲಿ ಎನ್‍ಹೆಚ್‍ಎಐ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ.

Translate »