ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ
ಮೈಸೂರು

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ

December 17, 2020

ನವದೆಹಲಿ: ಗೃಹ ಬಳಕೆ ಸಬ್ಸಿಡಿ ರಹಿತ ಎಲ್‍ಪಿಜಿ ದರವನ್ನು ಪ್ರತಿ ಸಿಲಿಂಡರ್‍ಗೆ 50 ರೂ. ಹೆಚ್ಚಿಸಲಾಗಿದ್ದು ಕೇಂದ್ರ ಮತ್ತೆ ಗ್ರಾಹಕ ರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಇದು ಅಂತಾ ರಾಷ್ಟ್ರೀಯ ದರ ದೃಢೀಕರಣದ ನಂತರ ಡಿಸೆಂಬರ್ ನಲ್ಲೇ 2ನೇ ಬಾರಿ ಬೆಲೆ ಏರಿಕೆಯಾಗಿರುವುದು. ಅಲ್ಲದೆ, ವಾಯುಯಾನ ಟರ್ಬೈನ್ ಇಂಧನ (ಎಟಿಎಫ್) ಬೆಲೆಯನ್ನು ಶೇ.6.3ರಷ್ಟು ಏರಿಸಲಾಗಿದೆ. ರಾಜ್ಯ ಇಂಧನ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಸಬ್ಸಿಡಿ ರಹಿತ ಗೃಹ ಬಳಕೆ 14.2 ಕೆಜಿ ಸಿಲಿಂಡರ್ ಬೆಲೆಯನ್ನು ಹಿಂದಿನ 644 ರೂ.ಗಳಿಂದ 694 ರೂ.ಗೆ ಹೆಚ್ಚಿಸಲಾಗಿದೆ. ಈ ತಿಂಗಳ ದರದಲ್ಲಿ ಇದು 2ನೇ ಬಾರಿಗೆ ಹೆಚ್ಚಳವಾಗಿದೆ. ಡಿ.1ರಂದು ಸಿಲಿಂಡರ್‍ಗೆ 50 ರೂ. ಹೆಚ್ಚಿಸಲಾಗಿತ್ತು. ಇದಕ್ಕೂ ಮುನ್ನ ಜುಲೈನಿಂದ ಸಿಲಿಂಡರ್ ಬೆಲೆ 594 ರೂ. ಇತ್ತು. ದೆಹಲಿಯಲ್ಲಿ ಜೂನ್ 2019ಕ್ಕೆ 497 ರು. ಇದ್ದ ಸಬ್ಸಿಡಿ ಎಲ್ ಪಿಜಿ ಬೆಲೆಯನ್ನು ಇಲ್ಲಿವರೆಗೂ ಕ್ರಮವಾಗಿ 147 ರೂ. ಹೆಚ್ಚಿಸಲಾಗಿದೆ. ಭಾರತದಲ್ಲಿನ ಪ್ರತಿ ಕುಟುಂಬ ವರ್ಷಕ್ಕೆ ಗರಿಷ್ಠ 12 ಎಲ್‍ಪಿಜಿ ಸಿಲಿಂಡರ್ ಖರೀದಿಗೆ ಸಬ್ಸಿಡಿ ದರದಲ್ಲಿ ಅವಕಾಶವಿದೆ.

 

 

 

Translate »