`ಕಂಸ’ನ ಬೆಡಗಿಯಾಗಿ ಸಾಯಿಪಲ್ಲವಿ
ಸಿನಿಮಾ

`ಕಂಸ’ನ ಬೆಡಗಿಯಾಗಿ ಸಾಯಿಪಲ್ಲವಿ

July 24, 2020

ಟಾಲಿವುಡ್‍ನ ಪ್ರೇಮಂ, ಕಲಿ, ಮಾರಿ 2 ಸೇರಿದಂತೆ ಹಲವಾರು ಸೂಪರ್‍ಹಿಟ್ ಚಿತ್ರಗಳಲ್ಲಿ ನಟಿಸಿದ ಮಲಯಾಳಿ ಕುಟ್ಟಿ ಸಾಯಿಪಲ್ಲವಿ ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆಕೆ ಈಗ ಲೂಸ್‍ಮಾದ ಯೋಗಿ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ರಂಜಿತ್ ಕುಮಾರ್‍ಗೌಡ ಅವರ ನಿರ್ದೇಶನದ `ಕಂಸ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲು ಸಾಯಿಪಲ್ಲವಿ ಅವರನ್ನು ಈಗಾಗಲೇ ಸಂಪರ್ಕಿಸಿ ಕಥೆ ಒಪ್ಪಿಸಲಾಗಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ. ಈ ಚಿತ್ರದಲ್ಲಿ ನಾಯಕಿಯದ್ದು ತುಂಬಾನೇ ಸಿಂಪಲ್ ಕ್ಯಾರೆಕ್ಟರ್, ಆಕೆಯ ಪಾತ್ರ ಇಡೀ ಚಿತ್ರದ ಕಥೆಗೆ ಹೊಸ ಟ್ವಿಸ್ಟ್ ನೀಡುತ್ತದೆ. ಈ ಪಾತ್ರಕ್ಕೆ ಸಾಯಿ ಪಲ್ಲವಿ ಅವರೇ ಸೂಕ್ತರಾಗುತ್ತಾರೆ ಎಂದು ನಿರ್ದೇಶಕ ರಂಜಿತ್‍ಕುಮಾರ್‍ಗೌಡ ಅವರು ನಿರ್ಧರಿಸಿ ಈಗಾಗಲೇ ಅವರಿಗೆ ಕಥೆಯನ್ನು ಕೂಡ ಹೇಳಿದ್ದಾ ರಂತೆ. ಇದು ಪ್ಯಾನ್‍ಇಂಡಿಯಾ ಸಿನಿಮಾ ಆಗಿರುವುದ ರಿಂದ ಆಕೆ ಖಂಡಿತ ಒಪ್ಪುತ್ತಾರೆ ಎನ್ನಲಾಗಿದೆ. ನಾಯಕ ಯೋಗಿ ಹಾಗೂ ಅವರ ಸಹೋದರ ಮಹೇಶ್ ಕುಮಾರ್ ಸೇರಿ ಆರಂಭಿಸಿರುವ ಎಂವೈ ಫಿಲಂ ಫ್ಯಾಕ್ಟರಿ ಮೂಲಕ ತಯಾರಾಗಲಿರುವ ಮೊದಲ ಚಿತ್ರವಾಗಿ `ಕಂಸ’ ಹೊರ ಬರಲಿದೆ. ಈ ಹಿಂದೆ ಆ್ಯಪಲ್‍ಕೇಕ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ರಂಜಿತ್‍ಕುಮಾರ್ ಈ ಚಿತ್ರವನ್ನು ನಿರ್ದೇಶಿ ಸುತ್ತಿದ್ದಾರೆ. ಚಿತ್ರದಲ್ಲಿ ನಾಯಕ ಯೋಗಿ ಅವರ ಪಾತ್ರಕ್ಕೆ ಎರಡು, ಮೂರು ಶೇಡ್ಸ್ ಬರುತ್ತದೆ. ಪ್ರಸ್ತುತ ನಡೆಯುವ ಘಟನೆಗಳನ್ನೇ ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಯೋಗಿ ಅವರ ಸಿನಿ ಕೆರಿಯರ್‍ನಲ್ಲೇ ಇದೊಂದು ವಿಭಿನ್ನ ಚಿತ್ರವಾಗಿ ಮೂಡಿಬರಲಿದೆ. ನಿರ್ದೇಶಕ ರಂಜಿತ್ ಬೇರೆಥರದ ಕಥೆ, ಡೈಲಾಗ್‍ನ್ನು ರೆಡಿ ಮಾಡಿಕೊಂಡಿದ್ದಾರೆ. ಈವರೆಗೆ ಬರೀ ಮಾಸ್, ರೌಡಿಸಂ ಪಾತ್ರ ಗಳನ್ನೇ ಮಾಡಿದ್ದ ಯೋಗಿ ಅವರಿಗೆ ಚೇಂ ಜೋವರ್ ನೀಡುವ ಪಾತ್ರ ಇದಾಗಲಿದೆ. ಈ ಕಥೆಯಲ್ಲಿ ಬರುವ ನಾಯಕ, ಕಂಸನ ಹಲವಾರು ಗುಣಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡಿರುತ್ತಾನೆ. ಕಂಸನ ವ್ಯಕ್ತಿತ್ವ ಹೊಂದಿದ ನಾಯಕನಲ್ಲಿ ಬದಲಾವಣೆ ಹೇಗೆ ಸಾಧ್ಯವಾಯಿತು ಎಂದು ಚಿತ್ರದ ಮೂಲಕ ಹೇಳಲು ಪ್ರಯತ್ನಿಸ ಲಾಗಿದೆ. ನಾಯಕ ಕಂಸನ ಗುಣಗಳನ್ನೇ ಹೊಂದಿದ್ದರೂ ಆತನಲ್ಲಿ ಒಂದಷ್ಟು ಉತ್ತಮ ಗುಣಗಳಿರುತ್ತವೆ. ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಕಂಸನ ಹಾಗಿದ್ದ ನಾಯಕ ಹೇಗೆ ಬದಲಾದ ಎನ್ನುವ ಕಥೆ ಚಿತ್ರದಲ್ಲಿದೆ. ಇನ್ನು ಈ ಚಿತ್ರದಲ್ಲಿ ಒಂದಷ್ಟು ಐತಿಹಾಸಿಕ ಕಥೆಯೂ ಮೂಡಿಬರುತ್ತದೆ. ಯೋಗಿ ಇದುವರೆಗೆ ಇಂಥ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಿಲ್ಲ, ಅವರಿಗೆ ಇದು ತುಂಬಾ ವಿಶೇಷ ಪಾತ್ರ ಎನ್ನಬಹುದು. ಫ್ಯಾಮಿಲಿ ಸೆಂಟಿಮೆಂಟ್, ಲವ್, ಮಾಸ್ ಹೀಗೆ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಉತ್ತರ ಭಾರತದ ರಾಜಸ್ಥಾನದಲ್ಲಿ ಚಿತ್ರದ ಹಾಡುಗಳನ್ನು ಚಿತ್ರೀಕರಣ ಮಾಡುವ ಯೋಜನೆಯಿದೆ. ಒಟ್ಟು 100 ದಿನಗಳ ಕಾಲ ಮೂರು ಹಂತಗಳಲ್ಲಿ ಚಿತ್ರೀಕರಣದ ಷೆಡ್ಯೂಲ್ ಹಾಕಿಕೊಳ್ಳಲಾಗಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗೂ ಅರವಿಂದ್ ಕಶ್ಯಪ್ ಅವರ ಕ್ಯಾಮೆರಾವರ್ಕ್ ಇರುತ್ತದೆ. ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಸದ್ಯದಲ್ಲೇ ಪ್ರಕಟಿಸಲಾಗುವುದು.

Translate »