ಕೆಜಿಎಫ್-2 ಯಶ್ ಮತ್ತೊಂದು ಲುಕ್ !
ಸಿನಿಮಾ

ಕೆಜಿಎಫ್-2 ಯಶ್ ಮತ್ತೊಂದು ಲುಕ್ !

July 24, 2020

ರಾಕಿಂಗ್‍ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಯಶ್ ಅಭಿನಯದ ಕೆಜಿಎಫ್ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದ ಚಿತ್ರ. ಈಗ ಆ ಚಿತ್ರದ ಸೀಕ್ವೇಲ್ ಕೂಡ ಅದಕ್ಕಿಂತ ಅದ್ಧೂರಿಯಾಗಿಯೇ ನಿರ್ಮಾಣವಾಗುತ್ತಿದೆ. ಇಲ್ಲಿ ಸಂಜಯ್‍ದತ್, ರವೀನಾ ಟಂಡನ್ ರಂಥ ಬಾಲಿವುಡ್ ಸ್ಟಾರ್ಸ್ ಕೂಡ ಅಭಿನಯಿಸಿ ದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಅವರೇ ಬಣ್ಣ ಹಚ್ಚಿದ್ದಾರೆ. ಇನ್ನು ನಟ ಯಶ್ ಆರಂಭದ ದಿನಗಳಲ್ಲಿ ಕಿರುತೆರೆ ಸೀರಿಯಲ್‍ಗಳಲ್ಲಿ ಅಭಿನಯಿಸುತ್ತಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಪ್ರಿಯಾ ಹಾಸನ್ ನಾಯಕಿಯಾಗಿ ಅಭಿನಯಿಸಿದ ಜಂಭದ ಹುಡುಗಿ ಚಿತ್ರದಲ್ಲಿ ಸೆಕೆಂಡ್ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಆನಂತರ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿದರು. ಆ ಚಿತ್ರದ ಮೂಲಕ ನಟಿ ರಾಧಿಕಾ ಪಂಡಿತ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಆ ಚಿತ್ರ ಬಿಡುಗಡೆಯಾಗಿ ಹನ್ನೆರಡು ವರ್ಷಗಳಾಗಿದೆ. ಅದರ ಸವಿ ನೆನಪಿಗಾಗಿ ತಮ್ಮ ನೆಚ್ಚಿನ ನಾಯಕ ಯಶ್ ಅವರಿಗೆ ಕೆಜಿಎಫ್ ಚಿತ್ರತಂಡ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ನಟ ಯಶ್‍ಗೆ ಶುಭ ಕೋರುವ ಸಲುವಾಗಿ ಚಿತ್ರದ ಹೊಸ ಫೋಟೋವೊಂದನ್ನು ಬಿಡುಗಡೆ ಮಾಡಿದೆ. ಯಶ್ ಅವರ ಈ ಹೊಸಲುಕ್ ಈಗ ಎ¯್ಲÉಡೆ ವೈರಲ್ ಆಗುತ್ತಿದೆ. ಈವರೆಗೆ ಕೇವಲ ಮಾಸ್ ಅವತಾರದಲ್ಲಿ ಎದುರಾಗುತ್ತಿದ್ದ ಯಶ್, ಇಲ್ಲಿ ಸೂಟು ಬೂಟು ಹಾಕಿಕೊಂಡು ಹೊಸ ಗೆಟಪ್‍ನಲ್ಲಿ ಮಿಂಚಿz್ದÁರೆ.

ಅಂದುಕೊಂಡಂತೆಯೇ ಆಗಿದ್ದರೆ, ಈ ಹೊತ್ತಿಗಾಗಲೇ ಕೆಜಿಎಫ್ ಸಿನಿಮಾದ ಚಿತ್ರೀಕರಣ ಎಲ್ಲಾ ಮುಗಿದಿರ ಬೇಕಿತ್ತು. ಕೊರೊನಾದಿಂದಾಗಿ ಚಿತ್ರೀಕರಣ ಸ್ಥಗಿತಗೊಂ ಡಿದೆ. ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ ಬಾಕಿ ಉಳಿದ ಚಿತ್ರದ ಚಿತ್ರೀಕರಣವನ್ನು ಆರಂಭಿಸ ಲಾಗುತ್ತದೆ. ಆನಂತರವಷ್ಟೇ ಚಿತ್ರದ ಟ್ರೈಲರ್ ಹಾಗೂ ಸಿನಿಮಾ ಬಿಡುಗಡೆಯ ನಿಖರವಾದ ದಿನಾಂಕಗಳÀನ್ನು ಚಿತ್ರತಂಡ ಪ್ರಕಟಿಸ ಬಹುದು. ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಭಾರತದ ಏಳು ಭಾಷೆಗಳಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾರ್ತೀಕ್ ಗೌಡ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ರವಿ ಬಸ್ರೂರು ಅವರ ಸಂಗೀತ ನಿರ್ದೇಶನ, ಭುವನ್ ಗೌಡ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ.

Translate »