‘ನಡುಗಲ್ಲು’ಗೆ ಹಿನ್ನೆಲೆ ಸಂಗೀತ
ಸಿನಿಮಾ

‘ನಡುಗಲ್ಲು’ಗೆ ಹಿನ್ನೆಲೆ ಸಂಗೀತ

July 24, 2020

ಪೂರ್ವಿಕಾಮೃತ ಕ್ರಿಯೇಷನ್ ಲಾಂಛನದಲ್ಲಿ ಹರಿಹರನ್ ಬಿ.ಪಿ. ಅವರ ನಿರ್ಮಾಣದ ಚಿತ್ರ `ನಡುಗಲ್ಲು’ ಗುರು ಶಿಷ್ಯರ ನಡುವಿನ ಸಂಬಂಧದ ಕಥಾಹಂದರ ಒಳಗೊಂಡಿದೆ. ಈ ಹಿಂದೆ ಬಂಗಾರಿ, ಬೆಟ್ಟದ ದಾರಿ, ತಮಿಳಿನ ಕಾದಲ್ ಪೈತ್ಯಂ, ಶಿವನಪಾದದಂಥ ವಿಭಿನ್ನ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಮಾಚಂದ್ರು ಅವರ ನಿರ್ದೇಶನದ ಮತ್ತೊಂದು ಚಿತ್ರವೇ “ನಡುಗಲ್ಲು”.

ನಡುಗಲ್ಲು ಎಂಬ ಊರಿನಲ್ಲಿ, ಸರ್ಕಾರಿ ಶಾಲೆಯಲ್ಲಿ ಗುರು ಶಿಷ್ಯರ ನಡುವೆ ನಡೆಯುವ ಸವಾಲುಗಳನ್ನು ಅವರು ಹೇಗೆ ಎದುರಿಸುತ್ತಾರೆ, ಗುರು ಶಿಷ್ಯರ ಸವಾಲ್‍ನಲ್ಲಿ ಯಾರು, ಯಾರಿಗೆ ಸೋಲೊಪ್ಪುತ್ತಾರೆ ಎಂಬುದು ಚಿತ್ರದ ಕಥೆ. ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಣ 80?ರಷ್ಟು ಚಿತ್ರೀಕರಣ ನಡೆದಿದ್ದು, ಒಟ್ಟು 24 ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲೂಕಿನ ನಡುಗಲ್ಲು ಗ್ರಾಮದಲ್ಲಿ ಉಳಿದ ಭಾಗದ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಡಬ್ಬಿಂಗ್ ಮುಗಿಸಿ, ಹಿನ್ನೆಲೆ ಸಂಗೀತದ ಹಂತದಲ್ಲಿದೆ. ಮೇಷ್ಟ್ರ ಪಾತ್ರದಲ್ಲಿ ಬಲ ರಾಜ್‍ವಾಡಿ, ಶಿಷ್ಯನ ಪಾತ್ರವನ್ನು ನಿಶಾಂತ್ ಟಿ. ರಾಠೋಡ್, ಮಂಜುಳಾರೆಡ್ಡಿ, ಹರಿಹರನ್, ಅಮೃತ, ಕಿಲ್ಲರ್ ವೆಂಕಟೇಶ್ ಹಾಗು ನೂರಕ್ಕೂ ಹೆಚ್ಚು ಮಕ್ಕಳು ಅಭಿನಯಿಸಿದ್ದಾರೆ. ಮಾಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣ ಜಾನ್ ಹಾಗೂ ಸೂರ್ಯೋದಯ, ಸಂಗೀತ ಎ.ಟಿ. ರವೀಶ್ ಅವರದ್ದು.?

Translate »