ಕೊರೊನಾ ನಂತರ `ರುದ್ರಿ’ಯ ದರ್ಶನ !
ಸಿನಿಮಾ

ಕೊರೊನಾ ನಂತರ `ರುದ್ರಿ’ಯ ದರ್ಶನ !

July 24, 2020

ದೇವೇಂದ್ರ ಬಡಿಗೇರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ `ರುದ್ರಿ’ ಚಿತ್ರವು ಅಂದುಕೊಂಡ ಹಾಗೇ ಆಗಿದ್ದರೆ ಈಗಾಗಲೇ ಬಿಡುಗಡೆಯಾಗಿರಬೇಕಿತ್ತು, ಆದರೆ ಕೊರೊನಾ ಕಾರಣದಿಂದಾಗಿ ತಡವಾಗಿದೆ, ಚಿತ್ರಮಂದಿರ ಓಪನ್ ಆದಕೂಡಲೇ ಚಿತ್ರವನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಇದರ ಜೊತೆಗೆ ಚಿತ್ರಕ್ಕೆ ಮತ್ತೆರಡು ಪ್ರಶಸ್ತಿಗಳು ಲಭಿಸಿವೆ, ಇತ್ತೀಚೆಗಷ್ಟೇ ಇಟಲಿಯ ಓನಿರೋಸ್‍ನಲ್ಲಿ ನಡೆದ ಆನ್‍ಲೈನ್ ಚಲನಚಿತ್ರೋತ್ಸವದಲ್ಲಿ `ರುದ್ರಿ’ ಚಿತ್ರವೂ ಸಹ ಭಾಗವಹಿಸಿದ್ದು, ಉತ್ತಮ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಾಯಕಿ ಪಾವನಾಗೌಡ ಗಳಿಸಿದ್ದಾರೆ. ಅಲ್ಲದೆ ಟ್ಯಾಗೋರ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕೂಡ ಭಾಗವಹಿಸಿದ್ದ ರುದ್ರಿ ಮೂರು ವಿಭಾಗದಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡು ಬಂದಿದೆ.

ಇಟಲಿಯ ಓನಿರೋಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ಪೆÇೀಸ್ಟರ್ ವಿಭಾಗದಲ್ಲಿಯೂ ಸಹ ರುದ್ರಿಗೆ ಪ್ರಶಸ್ತಿ ಲಭಿಸಿದೆ. ಟ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಾಯಕಿ ಪಾವನಾಗೌಡ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ದೇವೇಂದ್ರ ಬಡಿಗೇರ್ ಚೊಚ್ಚಲ ನಿರ್ದೇಶಕ ಹಾಗೂ ಅತ್ಯುತ್ತಮ ನರೇಟಿವ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಕುರಿತಂತೆ ಮಾತನಾಡಿರುವ ನಿರ್ದೇಶಕ ದೇವೇಂದ್ರ ಬಡಿಗೇರ್ ರುದ್ರಿ ಚಿತ್ರವು ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ, ಆದರೆ ಚಿತ್ರವನ್ನು ನಮ್ಮ ಪ್ರೇಕ್ಷಕರಿಗೇ ಇನ್ನೂ ತೋರಿಸಲು ಸಾಧ್ಯವಾಗದುದಕ್ಕೆ ವಿಷಾದವಿದೆ. ಏಪ್ರಿಲ್‍ನಲ್ಲಿಯೇ ಸಿನಿಮಾವನ್ನು ಬಿಡುಗಡೆ ಮಾಡುವ ಉz್ದÉೀಶವಿತ್ತು. ಆದರೆ ಲಾಕ್‍ಡೌನ್ ಕಾರಣದಿಂದ ರಿಲೀಸ್ ಸಾಧ್ಯವಾಗಿಲ್ಲ, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಸತ್ಯಜಿತ್ ರೇ ಅವರಂಥ ಮಹಾನ್ ವ್ಯಕ್ತಿಗಳು ಹುಟ್ಟಿದ ಭಾರತದ ನೆಲದಲ್ಲಿ ನಿಂತು ನಾನು ಈ ಪ್ರಶಸ್ತಿ ಪಡೆದುಕೊಳ್ಳುತ್ತಿರುವುದಕ್ಕೆ ನನಗೆ ಪುಟ್ಟದೊಂದು ಸಾಧನೆ ಮಾಡಿದ ಖುಷಿಯಿದೆ ಎಂದು ಪಾವನಾಗೌಡ ಸಂತಸ ವ್ಯಕ್ತಪಡಿಸಿz್ದÁರೆ. ಪ್ರದರ್ಶನದಲ್ಲಿ ಪಾಲ್ಗೊಂಡ 400ಕ್ಕೂ ಅಧಿಕ ಜಾಗತಿಕ ಸಿನಿಮಾಗಳ ನಡುವೆ ಇದ್ದ ಪ್ರಬಲ ಸ್ಪರ್ಧೆಯಲ್ಲಿ ನಮಗೆ ಪ್ರಶಸ್ತಿಗಳು ದೊರಕಿರುವುದು ನಿಜಕ್ಕೂ ಒಂದು ವಿಶೇಷ ಅನುಭವ ನೀಡುತ್ತಿದೆ ಎಂದೂ ಅವರು ತಿಳಿಸಿz್ದÁರೆ.

Translate »