ಬ್ರಿಟನ್‍ನಿಂದ ಬಂದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ರೂಪಾಂತರ ಸೋಂಕು ಪತ್ತೆಗಾಗಿ ನಿಮ್ಹಾನ್ಸ್ ಲ್ಯಾಬ್‍ಗೆ ಸ್ಯಾಂಪಲ್
ಮೈಸೂರು

ಬ್ರಿಟನ್‍ನಿಂದ ಬಂದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ರೂಪಾಂತರ ಸೋಂಕು ಪತ್ತೆಗಾಗಿ ನಿಮ್ಹಾನ್ಸ್ ಲ್ಯಾಬ್‍ಗೆ ಸ್ಯಾಂಪಲ್

December 27, 2020

ಸೋಮವಾರದ ವೇಳೆಗೆ ಈ ವರದಿ ಬರುವ ಸಾಧ್ಯತೆ ಇದೆ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ

ಮೈಸೂರು, ಡಿ.26(ಪಿಎಂ)- ಬ್ರಿಟನ್‍ನಿಂದ ಮೈಸೂರಿಗೆ ಬಂದವರ ಪೈಕಿ ಒಬ್ಬರಲ್ಲಿ ಕೋವಿಡ್ ಪತ್ತೆಯಾಗಿದೆ. ಇವರಲ್ಲಿ ರೂಪಾಂತರ ವೈರಾಣು ಇದೆಯೇ? ಅಥವಾ ಇಲ್ಲವೋ ಎಂದು ಪತ್ತೆಹಚ್ಚಲು ಮಾದರಿ ಯನ್ನು ಜೀನೋಮಿಕ್ ಸೀಕ್ವೆನ್ಸಿಕ್ ಪರೀಕ್ಷೆಗಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿರುವ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ವೈರಾಲಜಿ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ಮೈಸೂರು ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಪರಿಶೀಲನೆ ಹಿನ್ನೆಲೆಯಲ್ಲಿ ಶನಿವಾರ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರದ ವೇಳೆಗೆ ಇದರ ಫಲಿತಾಂಶ ಲಭ್ಯವಾಗಲಿದೆ ಎಂದು ಹೇಳಿದರು. ಬ್ರಿಟನ್‍ನಿಂದ ಬಂದು ಕೋವಿಡ್ ಪತ್ತೆಯಾಗಿರುವ ಆ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ ಮೂವರು, ದ್ವಿತೀಯ ಸಂಪರ್ಕದಲ್ಲಿ ಮೂವರು ಇದ್ದರು. ಈ ಪೈಕಿ ಒಬ್ಬರಿಗೆ ಪಾಸಿಟಿವ್ ಬಂದಿದೆ. ಇವರು ಡಿ.14ರಂದು ಮೈಸೂರಿಗೆ ಬಂದಿ ದ್ದಾರೆ. ರೂಪಾಂತರಗೊಂಡ ಕೋವಿಡ್ ಎಂಬುದು ಇನ್ನೂ ಗೊತ್ತಾಗಿಲ್ಲ. ಸೋಮ ವಾರದ ವೇಳೆಗೆ ಯಾವುದೂ ತಿಳಿಯಲಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು. ಬ್ರಿಟನ್‍ನಿಂದ ಬಂದ ಒಟ್ಟು 137 ಮಂದಿ ಪೈಕಿ 23 ಮಂದಿ ಹೊರತಾಗಿ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈ 23 ಜನ ಈ ಮೊದಲೇ ಪರೀಕ್ಷೆ ಮಾಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಆದಾಗ್ಯೂ ಮುನ್ನೆಚ್ಚರಿಕೆ ಯಾಗಿ ಅವರಿಗೆ ಮತ್ತೊಮ್ಮೆ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.

 

 

Translate »