ಬ್ರಿಟಿಷರಿಗೆ ಸಹಕರಿಸಿದವರೇ ದೇಶದ ಇತಿಹಾಸದಲ್ಲಿ ಹೀರೋಗಳಾಗಿದ್ದಾರೆ
ಮೈಸೂರು

ಬ್ರಿಟಿಷರಿಗೆ ಸಹಕರಿಸಿದವರೇ ದೇಶದ ಇತಿಹಾಸದಲ್ಲಿ ಹೀರೋಗಳಾಗಿದ್ದಾರೆ

December 27, 2020

ಮೈಸೂರು, ಡಿ.26(ಎಸ್‍ಬಿಡಿ)- ತಮಿಳು ನಾಡು ಇತಿಹಾಸದಲ್ಲಿ ಬ್ರಿಟಿಷರಿಗೆ ಸಹಕರಿಸಿ ದವರನ್ನೇ ನಾಯಕರಂತೆ ಬಿಂಬಿಸಲಾಗಿದೆ. ಆದರೆ ಮೈಸೂರಿನ ವಕೀಲರಾದ ಓ.ಶಾಮ ಭಟ್ ಅವರು `ಬೆಂಕಿಯ ಚೆಂಡು ಕುಯಿಲಿ’ ಪುಸ್ತಕದ ಮೂಲಕ ನೈಜ ಇತಿಹಾಸವನ್ನು ದೇಶಕ್ಕೆ ಅರ್ಪಿಸುವ ಕೆಲಸ ಮಾಡಿ ದ್ದಾರೆಂದು ನಿವೃತ್ತ ಐಪಿಎಸ್ ಅಧಿಕಾರಿ, ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಬಣ್ಣಿಸಿದರು.

ಸಾಮಾಜಿಕ ನ್ಯಾಯ ವೇದಿಕೆ ಹಾಗೂ ಶ್ರೀ ಚಾಮುಂಡೇಶ್ವರಿ ಗೆಳೆಯರ ಪ್ರಗತಿಪರ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ನಗ ರದ ಶಾರದಾವಿಲಾಸ ಕಾಲೇಜು ಶತಮಾ ನೋತ್ಸವ ಭವನದಲ್ಲಿ ಶನಿವಾರ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯ ವಾದಿ ಓ.ಶಾಮಭಟ್ ಅವರ `ಬೆಂಕಿಯ ಚೆಂಡು ಕುಯಿಲಿ’ ಪುಸ್ತಕವನ್ನು ಲೋಕಾ ರ್ಪಣೆ ಮಾಡಿ ಅವರು ಮಾತನಾಡಿದರು.

ಬ್ರಿಟಿಷರು ಇತಿಹಾಸವನ್ನು ತಿರುಚಿದ್ದಾರೆ. ಪರಿಣಾಮ ರಾಣಿ ವೇಲು ನಾಚಿಯರ್ ಅವರ ಆಪ್ತರಕ್ಷಕಿಯಾಗಿದ್ದ ಮಹಾನ್ ಯೋಧೆ ಕುಯಿಲಿಯನ್ನು ಮರೆತಿದ್ದಾರೆ. ಶೈಕ್ಷಣಿಕ ಇತಿಹಾಸ ಪಠ್ಯ ಇನ್ನಿತರ ಯಾವುದೇ ಪುಸ್ತಕ ಗಳಲ್ಲೂ ಬ್ರಿಟಿಷರಿಗೆ ಸಹಕರಿಸಿದವರನ್ನೇ ನಾಯಕರನ್ನಾಗಿ ಬಿಂಬಿಸಲಾಗಿದೆ. ಇದು ನಾಚಿಕೆÉ ಗೇಡಿನ ಸಂಗತಿ. ನಿಜವಾದ ಇತಿಹಾಸವನ್ನು ಮರೆಮಾಚಿರುವ ತಮಿಳುನಾಡಿನ ದ್ರಾವಿಡಿಯನ್ ಪಾಲಿಟಿಕ್ಸ್‍ಗೆ ನಾಚಿಕೆಯಾಗಬೇಕು. ಇಂತಹ ಸ್ಥಿತಿಯಲ್ಲಿ ಓ.ಶಾಮಭಟ್ ಅವರು ತಮಿಳು ನಾಡಿನ 38 ಗ್ರಾಮಗಳಿಗೆ ಭೇಟಿ ನೀಡಿ, ಕುಯಿಲಿ ಬಗ್ಗೆ ಮಾಹಿತಿ ಸಂಗ್ರಹಿಸಿ 240 ವರ್ಷ ಗಳ ನಿಜವಾದ ಇತಿಹಾಸವನ್ನು ಪುಸ್ತಕ ರೂಪ ದಲ್ಲಿ ದೇಶಕ್ಕೆ ನೀಡಿದ್ದಾರೆ. ದೇವರ ಕೃಪೆ ಹಾಗೂ ದೃಢಸಂಕಲ್ಪ ಇದ್ದವರು ಮಾತ್ರ ಈ ರೀತಿಯ ಪುಸ್ತಕ ಬರೆಯಲು ಸಾಧ್ಯ. ಅದರಲ್ಲೂ ಸಾಂಸ್ಕøತಿಕ, ಐತಿಹಾಸಿಕ ಶ್ರೇಷ್ಠ ತಾಣವಾದ ಮೈಸೂರಿನಲ್ಲಿ ಈ ಮಹತ್ವದ ಪುಸ್ತಕ ಬಿಡು ಗಡೆಯಾಗಿದ್ದು ಅವಿಸ್ಮರಣೀಯ ಎಂದರು.

ಮೊದಲ ಸ್ವಾತಂತ್ರ್ಯ ಸಂಗ್ರಾಮ ಎನ್ನುವ ಸಿಪಾಯಿ ದಂಗೆಗೂ ಮೊದಲೇ 1750-1800ರ ಕಾಲದಲ್ಲಿ ತಮಿಳುನಾಡಿನ ಶಿವಗಂಗೆ ಕೋಟೆಯ ರಾಣಿ ವೇಲು ನಾಚಿಯರ್ ಬ್ರಿಟಿಷರ ವಿರುದ್ಧ ಸೆಣಸಾಡಿದ್ದರು. ತಮಿ ಳಿನ ಜೊತೆಗೆ ಫ್ರೆಂಚ್, ಉರ್ದು ಹಾಗೂ ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿ ಬಲ್ಲವ ರಾಗಿದ್ದರು. ಮೈಸೂರು ಸಂಸ್ಥಾನದಲ್ಲಿ ಹೈದ ರಾಲಿ ಆಳ್ವಿಕೆಯಿದ್ದಾಗ 5 ಸಾವಿರ ಸೈನಿಕರು 2 ಬಾರಿ ವೇಲು ನಾಚಿಯರ್ ಅವರೊಂ ದಿಗೆ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡಿದ್ದರು. ವೇಲು ನಾಚಿಯರ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಮಾಹಿತಿಯುಳ್ಳ ಚೀಟಿ, ಅರುಂಧತಿಯಾರ್ ಸಮುದಾಯದ ಕುಯಿಲಿಗೆ ಸಿಗುತ್ತದೆ. ಆಗಿನ್ನೂ ಆಕೆಗೆ 16 ವರ್ಷ. ಆಗಲೇ ರಾಣಿ ವೇಲು ನಾಚಿಯರ್ ಕೊಲ್ಲಲು ಬ್ರಿಟಿಷರಿಗೆ ಸಹಕರಿ ಸಿದ್ದ ತನ್ನ ಗುರುವನ್ನೇ ಕೊಲ್ಲುತ್ತಾಳೆ. ಅದು ಗೊತ್ತಾಗಿ ವೇಲು ನಾಚಿಯರ್, ಕುಯಿಲಿ ಯನ್ನು ತನ್ನ ಆಪ್ತರಕ್ಷಕಿಯಾಗಿ ನೇಮಿಸಿ ಕೊಳ್ಳುತ್ತಾರೆ. 17ನೇ ವರ್ಷಕ್ಕೆ ರಾಣಿಯ ಪ್ರಧಾನ ರಕ್ಷಕಿಯಾದ ಕುಯಿಲಿ ಮಾತ್ರ ವೀರ ಮಹಿಳೆ ಎನಿಸಿಕೊಂಡಿದ್ದಾರೆ ಎಂದರು.

ಶಿವಗಂಗೆಯಲ್ಲಿ ರಾಜರಾಜೇಶ್ವರಿ ದೇಗುಲ ಪಕ್ಕದಲ್ಲಿ ಬ್ರಿಟಿಷರ ಶಸ್ತ್ರಾಸ್ತ್ರ ಸಂಗ್ರಹಗಾರ ವಿತ್ತು. ಈ ಬಗ್ಗೆ ಆತಂಕವಿದ್ದ ಬ್ರಿಟಿಷರು, 1780ನೇ ಇಸವಿಯ ವಿಜಯದಶಮಿಯಲ್ಲಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಿದ್ದರು. ನವರಾತ್ರಿಯ ಕೊನೆ ದಿನ ಕುಯಿಲಿ, ವಯಸ್ಸಾದ ಮಹಿಳೆ ಯಂತೆ ವೇಷಭೂಷಣ ತೊಟ್ಟು, ಕೆಲ ಗೆಳತಿಯರೊಂದಿಗೆ ದೇಗುಲಕ್ಕೆ ತೆರಳು ತ್ತಾಳೆ. ಪೂಜೆಗೆಂದು ಇಡಲಾಗಿದ್ದ ತುಪ್ಪವನ್ನು ತನ್ನ ಮೈಗೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು, ಗೋದಾಮಿನ ಮೇಲೆ ಧುಮಿಕಿ ಸ್ಫೋಟಿಸಿಕೊಳ್ಳುತ್ತಾಳೆ. ಕುಯಿಲಿಯ ಆತ್ಮಾ ಹುತಿಯೊಂದಿಗೆ ಇಡೀ ಶಸ್ತ್ರಾಗಾರ ಸುಟ್ಟು ಬೂದಿಯಾಗುತ್ತದೆ. ಪರಿಣಾಮ ಶಸ್ತ್ರಾಸ್ತ್ರ ವಿಲ್ಲದೆ ಬ್ರಿಟಿಷರ ಸೈನ್ಯ ವೇಲುನಾಚಿಯಾರ್ ಸೈನಿಕರು ಸೋಲುತ್ತಾರೆ. ಇದು ನಿಜವಾಗಿ ಬ್ರಿಟಿಷರ ವಿರುದ್ಧದ ಮೊದಲ ಜಯ. ಆದರೆ ಬ್ರಿಟಿಷರಿಗೆ ಪೂರಕವಾದ ಇತಿಹಾಸದ ಪ್ರಕಾರ ಸಿಪಾಯಿ ದಂಗೆ ಮೊದಲ ಹೋರಾಟ ಎನಿಸಿದೆ ಎಂದರು. ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್, ಕೃತಿಕರ್ತ ಓ.ಶಾಮಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಮಿಳುನಾಡಿನಲ್ಲಿ ಬಿಜೆಪಿ ಬಲಿಷ್ಠವಾಗಲಿದೆ
ಮೈಸೂರು,ಡಿ.26- ಮುಂದಿನ ದಿನಗಳಲ್ಲಿ ತಮಿಳುನಾಡಿ ನಲ್ಲಿ ಬಿಜೆಪಿ ಬಲಿಷ್ಠವಾಗಲಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ, ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅಣ್ಣಾ ಮಲೈ ಹೇಳಿದರು. ಬಿಜೆಪಿಗೆ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಶನಿವಾರ ಮೈಸೂರಿಗೆ ಭೇಟಿ ನೀಡಿದ್ದ ಅವರು, ಜೆಎಲ್‍ಬಿ ರಸ್ತೆಯಲ್ಲಿ ಆರ್‍ಎಸ್‍ಎಸ್ ಮಾಧವ ಕೃಪಾದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತಮಿಳುನಾಡಿ ನಲ್ಲಿ ಇನ್ನು ಮುಂದೆ ವ್ಯಕ್ತಿ ಆಧಾರಿತ ರಾಜಕೀಯ ನಡೆಯು ವುದಿಲ್ಲ. ಎಂಜಿಆರ್, ಕರುಣಾನಿಧಿ, ಜಯಲಲಿತಾ ಹೀಗೆ ಹಲವು ದಶಕಗಳ ಕಾಲ ವ್ಯಕ್ತಿ ಆಧಾರಿತ ರಾಜಕಾರಣ ನಡೆದಿದೆ. ಈಗ ಅಂತಹ ನಾಯಕರು ಇಲ್ಲ. ತಮಿಳುನಾಡಿನ ಜನರು ಬದಲಾವಣೆ ಬಯಸಿದ್ದಾರೆ. ತಮಿಳುನಾಡಿನಲ್ಲಿ ಪ್ರಾದೇ ಶಿಕ ಪಕ್ಷಗಳಿಗಿಂತ ಮೊದಲು ಕಾಂಗ್ರೆಸ್ ಇತ್ತು. ನಂತರ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾದವು. ಈಗ ಪ್ರಾದೇಶಿಕ ಪಕ್ಷಗಳು ಮುಂಚೂಣಿಯಲ್ಲಿವೆ. ಪ್ರಧಾನಿ ನರೇಂದ್ರಮೋದಿ ಅವರು ತಮಿಳುನಾಡಿಗೆ ಹಲವು ಯೋಜನೆಗಳನ್ನು ನೀಡಿದ್ದು, ಇಂದು ಯುವಕರು ಬಿಜೆಪಿ ಕಡೆಗೆ ಮುಖಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಲಿ ಬಿಜೆಪಿ ಬಲಿಷ್ಠವಾಗಲಿದೆ ಎಂದರು.

ರಾಜಕೀಯದ ಪ್ರಯಾಣದ ಬಗ್ಗೆ ಪ್ರತಿಕ್ರಿಯಿಸಿ, ರಾಜಕೀಯ ತುಂಬಾ ಕಷ್ಟ. ಸಿಕ್ಕಾಪಟ್ಟೆ ಪ್ರವಾಸ ಮಾಡುತ್ತಿದ್ದೇನೆ. ತಮಿಳು ನಾಡಿನಲ್ಲಿ ಮೊದಲಿನಿಂದಲೂ ದ್ರಾವಿಡ ರಾಜಕಾರಣ ಇದೆ. ಅದನ್ನು ಅರ್ಥಮಾಡಿಕೊಂಡು ಮುನ್ನಡೆಯುತ್ತಿದ್ದೇನೆ ಎಂದು ಅಣ್ಣಾಮಲೈ ತಿಳಿಸಿದರು.

 

Translate »