ಎನ್.ಆರ್.ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಕಲ್ಪಿಸಲು ಸಂದೇಶ್‍ಸ್ವಾಮಿ ಮನವಿ
ಮೈಸೂರು

ಎನ್.ಆರ್.ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಕಲ್ಪಿಸಲು ಸಂದೇಶ್‍ಸ್ವಾಮಿ ಮನವಿ

February 19, 2021

ಮೈಸೂರು,ಫೆ.18(ವೈಡಿಎಸ್)- ಬಜೆಟ್‍ನಲ್ಲಿ ಎನ್.ಆರ್.ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರಲ್ಲಿ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಮನವಿ ಮಾಡಿದ್ದಾರೆ. ಎನ್.ಆರ್.ಕ್ಷೇತ್ರದಲ್ಲಿ ಕಳೆದ 25-30 ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಯುಜಿಡಿ ವ್ಯವಸ್ಥೆ ಇಲ್ಲ. ಉತ್ತಮ ರಸ್ತೆಗಳಿಲ್ಲ. ಉತ್ತಮ ಶೈಕ್ಷಣಿಕ ಸಂಸ್ಥೆಗಳಿಲ್ಲ. ರೆವಿನ್ಯೂ ಬಡಾವಣೆಗಳೇ ಹೆಚ್ಚಿವೆ. ಕೆ.ಆರ್, ಚಾಮರಾಜ ಕ್ಷೇತ್ರಗಳಂತೆ ಎನ್.ಆರ್.ಕ್ಷೇತ್ರ ಅಭಿವೃದ್ಧಿಯಾಗಬೇಕಿದೆ. ಹಾಗಾಗಿ ಈ ಬಾರಿಯ ಬಜೆಟ್‍ನಲ್ಲಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು 50 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮಾಡಿದರು.

 

Translate »