ಎನ್.ಆರ್.ಕ್ಷೇತ್ರದಲ್ಲಿ ಟೀಮ್ ಮೈಸೂರು ತಂಡದ   ಉಚಿತ ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಸಂದೇಶ್ ಸ್ವಾಮಿ ಚಾಲನೆ
ಮೈಸೂರು

ಎನ್.ಆರ್.ಕ್ಷೇತ್ರದಲ್ಲಿ ಟೀಮ್ ಮೈಸೂರು ತಂಡದ  ಉಚಿತ ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಸಂದೇಶ್ ಸ್ವಾಮಿ ಚಾಲನೆ

June 1, 2020

ಮೈಸೂರು, ಮೇ 31(ಆರ್‍ಕೆಬಿ)- ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿರುವ 5 ಸಾವಿರ ರೂ. ನೆರವು ಕೊಡಿಸುವ ನಿಟ್ಟಿನಲ್ಲಿ ಟೀಮ್ ಮೈಸೂರು ತಂಡ ಎನ್.ಆರ್.ಮೊಹಲ್ಲಾದಲ್ಲಿ ಕಾರ್ಯ ಪ್ರವೃತ್ತವಾಗಿದೆ.

ತಂಡದ ಸದಸ್ಯರು ಎನ್.ಆರ್.ಮೊಹಲ್ಲಾದ ಹಲವೆಡೆ ಸಹಾಯ ಕೇಂದ್ರಗಳನ್ನು ತೆರೆದಿದ್ದು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರದ ಉಚಿತ ಅರ್ಜಿ ಸಲ್ಲಿಸುವ ತಾತ್ಕಾಲಿಕ ಕೇಂದ್ರಗಳನ್ನು ತೆರೆದಿದ್ದು, ಉಚಿತ ಅರ್ಜಿ ವಿತರಿಸುವ ಕಾರ್ಯಕ್ಕೆ ಮಾಜಿ ಮೇಯರ್, ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಇಂದು ಚಾಲನೆ ನೀಡಿದರು.

ಮೈಸೂರಿನ ರಾಜೇಂದ್ರನಗರದÀ ಬಸ್ ನಿಲ್ದಾಣದ ಬಳಿ (ಕೆಸರೆ ವೃತ್ತ)ಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನದ ಅರ್ಜಿಯನ್ನು ಉಚಿತವಾಗಿ ವಿತರಿಸಿ, ಬಳಿಕ ಮಾತನಾಡಿದ ಸಂದೇಶ್ ಸ್ವಾಮಿ, ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಆಟೋ ಮತ್ತು ಟ್ಯಾಕ್ಸಿ ಚಾಲಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಅವರಿಗೆ ನೆರವಾಗುವ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವ ಆರ್ಥಿಕ ಪರಿಹಾರವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಟೀಮ್ ಮೈಸೂರು ಮುಂದಾಗಿದೆ. ಚಾಲಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಕೆಸರೆ, ಬನ್ನಿಮಂಟಪ, ಎನ್.ಆರ್.ಮೊಹಲ್ಲಾ, ಕ್ಯಾತಮಾರನಹಳ್ಳಿ ಸೇರಿದಂತೆ ವಿವಿಧೆಡೆ ಟೀಮ್ ಮೈಸೂರು ತೆರೆದಿರುವ ತಾತ್ಕಾಲಿಕ ಕೇಂದ್ರಗಳಲ್ಲಿ ಚಾಲಕರು ಉಚಿತ ಅರ್ಜಿ ಪಡೆದು ವಿವರಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್, ಎನ್.ಆರ್.ಕ್ಷೇತ್ರ ಬಿಜೆಪಿ ಅಧ್ಯಕ್ಷ ಭಾನುಪ್ರಕಾಶ್, ಪ್ರಧಾನ ಕಾರ್ಯದರ್ಶಿ ವೇಲು, ಸ್ವಾಮಿಗೌಡ, ಬಿಜೆಪಿ ಯುವ ಮುಖಂಡ ಸು.ಮುರಳಿ, ಟೀಮ್ ಮೈಸೂರು ತಂಡದ ಸಂಚಾಲಕ ಗೋಕುಲ್ ಗೋವರ್ಧನ್, ಮುಖಂಡರಾದ ಯಶವಂತ್, ಅನಿಲ್ ಜೈನ್, ರಾಜಣ್ಣ, ಸಂಧ್ಯಾ, ಬಾಲಕೃಷ್ಣ ಇನ್ನಿತರರು ಇದ್ದರು.

 

 

Translate »