ಸ್ಯಾಂಟ್ರೊ ರವಿ ಬಂಧನ?
ಮೈಸೂರು

ಸ್ಯಾಂಟ್ರೊ ರವಿ ಬಂಧನ?

January 12, 2023

ಮೈಸೂರು, ಜ. 11- ಕಳೆದ ಒಂಭತ್ತು ದಿನದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ತಲೆಮರೆಸಿಕೊಂಡಿದ್ದ ವೇಶ್ಯಾ ವಾಟಿಕೆ ದಂಧೆಯ ಕಿಂಗ್‍ಪಿನ್ ಸ್ಯಾಂಟ್ರೊ ರವಿಯನ್ನು ಮೈಸೂರು ಪೊಲೀಸರ ವಿಶೇಷ ತಂಡ ಬೆಂಗಳೂರು ಬಳಿ ಬಂಧಿಸಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಪೊಲೀಸ್ ಅಧಿಕಾರಿಗಳ ವರ್ಗಾ ವಣೆ ದಂಧೆಯನ್ನೂ ಈತ ನಡೆಸುತ್ತಿದ್ದ ಎಂದು ಹೇಳಲಾಗಿದ್ದು, ವರ್ಗಾವಣೆ ಸಂಬಂಧ ಪೊಲೀಸ್ ಅಧಿಕಾರಿಗ ಳೊಂದಿಗೆ ಈತ ನಡೆಸಿದ್ದ ಸಂಭಾ ಷಣೆಯ ಆಡಿಯೋ ತುಣುಕುಗಳು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಹಾಗೂ ಈತ ಗೃಹ ಸಚಿವರು ಸೇರಿ ದಂತೆ ಹಲವಾರು ಸಚಿವರೊಂದಿಗೆ ನಿಕಟ ಸಂಬಂಧ ಹೊಂದಿದ್ದರಿಂದ ಆತನನ್ನು ಬಂಧಿಸದಿರುವಂತೆ ರಾಜ ಕೀಯ ಪ್ರಭಾವ ಬೀರಲಾಗುತ್ತಿದೆ ಎಂದು ಸಾರ್ವಜನಿಕವಾಗಿ ಮಾತನಾಡಿಕೊಳ್ಳಲಾಗುತ್ತಿತ್ತು. ವಿಪಕ್ಷಗಳೂ ಕೂಡ ಇಂತಹದ್ದೇ ಆರೋಪಗಳನ್ನು ಮಾಡುತ್ತಿದ್ದವು.

ಆದರೆ, ಕಾನೂನು-ಸುವ್ಯವಸ್ಥೆ ಎಡಿಜಿಪಿ ಅಲೋಕ್‍ಕುಮಾರ್ ಅವರ ನಿರ್ದೇಶನದಂತೆ ಸ್ಯಾಂಟ್ರೊ ರವಿ ಬಂಧನಕ್ಕೆ 4 ವಿಶೇಷ ತಂಡಗ ಳನ್ನು ರಚಿಸಲಾಗಿತ್ತು. ಆತ ವಿದೇಶಕ್ಕೆ ಪರಾರಿ ಯಾಗದಂತೆ ಏರ್‍ಪೋರ್ಟ್‍ಗಳಲ್ಲಿ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ಆತನ ಫ್ಲಾಟ್ ಮೇಲೂ ಪೊಲೀಸರು ದಾಳಿ ನಡೆಸಿ, ಮಹತ್ವದ ದಾಖಲೆಗಳೊಂದಿಗೆ ಆತನ ಚಲನವಲನದ ಬಗ್ಗೆ ಮಹತ್ವದ ಸುಳಿವನ್ನು ಪತ್ತೆ ಹಚ್ಚಿದ್ದರು. ತಮಗೆ ದೊರೆತ ಸುಳಿವು ಗಳನ್ನಾಧರಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ವಿಶೇಷ ತಂಡ ಬುಧವಾರ ರಾತ್ರಿ ಅಜ್ಞಾತ ಸ್ಥಳವೊಂದರಲ್ಲಿ ಅಡಗಿದ್ದ ಸ್ಯಾಂಟ್ರೊ ರವಿಯನ್ನು ಬಂಧಿಸಿತು ಎಂದು ಹೇಳಲಾಗಿದೆ. ಗುರುವಾರ ಮುಂಜಾನೆಯಷ್ಟರಲ್ಲಿ ಆತನನ್ನು ಮೈಸೂರಿಗೆ ಕರೆತರಲಾಗುತ್ತದೆ ಎಂದು ಮೂಲ ಗಳು ತಿಳಿಸಿವೆ. ಸ್ಯಾಂಟ್ರೋ ರವಿಯಿಂದ ಅತ್ಯಾ ಚಾರಕ್ಕೊಳಗಾಗಿ ನಂತರ ಆತನನ್ನೇ ವಿವಾಹ ವಾಗಿದ್ದ ಯುವತಿ ಜನವರಿ 2ರಂದು ಮೈಸೂರಿನ ವಿಜಯನಗರ ಠಾಣೆಗೆ ದೂರು ಸಲ್ಲಿಸಿದ್ದಳು. ಈಕೆಗೆ ಒಡನಾಡಿ ಸೇವಾ ಸಂಸ್ಥೆ ಕಾನೂನು ನೆರವು ಹಾಗೂ ಆಶ್ರಯ ನೀಡುತ್ತಿತ್ತು. ಈಕೆಯ ವಿರುದ್ಧ ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗುವಂತೆ ಸ್ಯಾಂಟ್ರೊ ರವಿ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಈತನ ಮಾತನ್ನು ಕೇಳಿ ಯುವತಿ ಹಾಗೂ ಆಕೆಯ ಸಹೋದರಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜೈಲಿಗೆ ಅಟ್ಟಿದ್ದ ಪೊಲೀಸ್ ಇನ್ಸ್‍ಪೆಕ್ಟರ್ ಪ್ರವೀಣ್‍ನನ್ನು ನಿನ್ನೆಯಷ್ಟೇ ಅಮಾನತುಪಡಿಸಲಾಗಿತ್ತು. ಅಲ್ಲದೇ, ಎಡಿಜಿಪಿ ಅಲೋಕ್‍ಕುಮಾರ್ ಅವರು ಸ್ವತಃ ಮಂಗಳವಾರ ಮೈಸೂರಿಗೆ ಆಗಮಿಸಿ, ಸ್ಯಾಂಟ್ರೊ ರವಿಯನ್ನು ಬಂಧಿಸುವ ಸಂಬಂಧ ಅಧಿಕಾರಿಗಳಿಗೆ ಸೂಕ್ತ ಮಾರ್ಗ ದರ್ಶನ ನೀಡಿದ್ದರಲ್ಲದೇ, ಸಂತ್ರಸ್ತ ಯುವತಿ ಯರಿಂದ ಮಾಹಿತಿ ಪಡೆದಿದ್ದರು.

Translate »