ಮೈಸೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮುಡಾ ಅಧ್ಯಕ್ಷರು, ಆಯುಕ್ತರಿಂದ ಸ್ಥಳ ಪರಿಶೀಲನೆ
ಮೈಸೂರು

ಮೈಸೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮುಡಾ ಅಧ್ಯಕ್ಷರು, ಆಯುಕ್ತರಿಂದ ಸ್ಥಳ ಪರಿಶೀಲನೆ

January 12, 2023

ಮೈಸೂರು, ಜ.11(ಆರ್‍ಕೆ)- ಮೈಸೂ ರಿನ ಹಂಚ್ಯಾ-ಸಾತಗಳ್ಳಿ ಬಳಿ ನಿರ್ಮಿಸ ಲುದ್ದೇಶಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆಂದು ಗುರ್ತಿಸಿರುವ 20.08 ಎಕರೆ ಜಾಗವನ್ನು ಮುಡಾ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್, ಆಯುಕ್ತ ಜಿ.ಟಿ. ದಿನೇಶ್‍ಕುಮಾರ್ ಇಂದು ಸ್ಥಳ ಪರಿಶೀಲನೆ ನಡೆಸಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್‍ಸಿಎ)ವು ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿ ಸಲು ಮುಂದಾಗಿದ್ದು, ಸದರಿ ಉದ್ದೇಶಕ್ಕೆ ಹಂಚ್ಯಾ-ಸಾತಗಳ್ಳಿ ಸಮೀಪ ರಿಂಗ್ ರಸ್ತೆಗೆ ಹೊಂದಿಕೊಂಡಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ವಿಟಿಯು) ಪ್ರಾದೇ ಶಿಕ ಕೇಂದ್ರದ ಪಕ್ಕದಲ್ಲಿರುವ 20 ಎಕರೆ 8 ಗುಂಟೆ ಜಾಗವನ್ನು ಮಂಜೂರು ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿರ್ಧರಿಸಿದೆ.

ಕ್ರಿಕೆಟ್ ಸಂಘಕ್ಕೆ ಸಿಎ ನಿವೇಶನಗಳ ಮಾದರಿ ಯಲ್ಲಿ ದರ ನಿಗದಿಗೊಳಿಸಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸುಮಾರು 18 ಕೋಟಿ ರೂ. ಪಾವತಿಸಿಕೊಂಡು ಸದರಿ ಜಾಗವನ್ನು ಮಂಜೂರು ಮಾಡಲು ಪ್ರಾಧಿ ಕಾರದ ಸಭೆಯಲ್ಲಿ ನಿರ್ಣಯಗೊಂಡಿರು ವಂತೆ ಆಸ್ತಿ ಹಸ್ತಾಂತರಿಸಲು ಅನುಮತಿ ಕೋರಿ 2022ರ ನವೆಂಬರ್ 3ರಂದು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾಪ ಸಲ್ಲಿಸ ಲಾಗಿದೆ ಎಂದು ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ತಿಳಿಸಿದ್ದಾರೆ. ಅಂತಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿ ಸಲು ಮೈಸೂರಿನ ಸೂಕ್ತ ಸ್ಥಳದಲ್ಲಿ ನಿವೇ ಶನ ಮಂಜೂರು ಮಾಡಿಕೊಡುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಮೈಸೂರು ವಲಯದ ಪದಾಧಿಕಾರಿಗಳು ಕಳೆದ 8 ವರ್ಷಗಳ ಹಿಂದೆ ಮುಡಾಗೆ ಮನವಿ ಮಾಡಿಕೊಂಡಿದ್ದರು. ಬೆಂಗಳೂರು, ಕೊಡಗು, ಕೇರಳ, ಚಾಮರಾಜನಗರ, ತಮಿಳುನಾಡು ರಾಜ್ಯಕ್ಕೆ ಉತ್ತಮ ಸಾರಿಗೆ ಸಂಪರ್ಕ ಕಲ್ಪಿ ಸುವ ಸಾತಗಳ್ಳಿ ಬಳಿ ರಿಂಗ್ ರಸ್ತೆಗೆ ಹೊಂದಿ ಕೊಂಡಂತಿರುವ ಖಾಲಿ ಜಾಗವನ್ನೇ ಮಂಜೂರು ಮಾಡಿಕೊಡುವಂತೆಯೂ ಅವರು ಪ್ರಸ್ತಾ ವನೆಯಲ್ಲಿ ಕೋರಿಕೊಂಡಿದ್ದರು ಎಂದು ಅವರು ತಿಳಿಸಿದರು. ಸಾತಗಳ್ಳಿ ‘ಬಿ’ ವಲ ಯಕ್ಕೆ ಬರುವ ವಿವಿಧ ಸರ್ವೆ ನಂಬರ್‍ಗಳ ಒಟ್ಟು 20.08 ಎಕರೆ ವಿಸ್ತಾರದ ಜಾಗವು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಸೂಕ್ತ ಎಂದು ನಿರ್ಧರಿಸಿ ಮುಡಾ ಸಭೆಯಲ್ಲಿ ಜಾಗವನ್ನು ಕೆಎಸ್‍ಸಿಎಗೆ ಮಂಜೂರು ಮಾಡಬಹುದೆಂದು ತೀರ್ಮಾನ ಕೈಗೊಂಡಿತ್ತು.

ಪ್ರತಾಪ್ ಸಿಂಹ ಆಸಕ್ತಿ: ಈ ವಿಷಯ ಕುರಿತಂತೆ 2022ರ ಅ.28ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಮ್ಮುಖದಲ್ಲಿ ಸಂಸದ ಪ್ರತಾಪ ಸಿಂಹ, ಮುಡಾದ ಅಂದಿನ ಅಧ್ಯಕ್ಷ ಹೆಚ್.ವಿ. ರಾಜೀವ್, ಕೆಎಸ್‍ಸಿಎ ಪದಾಧಿಕಾರಿಗಳು ಹಾಗೂ ಮುಡಾ ಆಯುಕ್ತರು ಚರ್ಚೆ ನಡೆಸಿ ಹಂಚ್ಯಾ-ಸಾತಗಳ್ಳಿ ‘ಬಿ’ ವಲಯ ಬಡಾವಣೆಯ ಉದ್ಯಾನವನ ಮತ್ತು ಬಯಲು ಪ್ರದೇಶ ಒಳಗೊಂಡ 20.08 ಎಕರೆ ಜಾಗವು ಮಹಾ ಯೋಜನೆ-2031ರನ್ವಯ ಕ್ರೀಡಾಂಗ ಣಕ್ಕೆ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಕಟ್ಟೆ ಜಾಗವಿದೆ: ಉದ್ಯಾನವನ ಮತ್ತು ಬಯಲು ಪ್ರದೇಶಕ್ಕಾಗಿ ಮೀಸಲಿರಿಸಿದ್ದ ಜಾಗದಲ್ಲಿ ಸಾತಗಳ್ಳಿ ಗ್ರಾಮದ ಸರ್ವೆ ನಂಬರ್ 106ಕ್ಕೆ ಸೇರಿದ 2.20 ಎಕರೆ ಸರ್ಕಾರಿ ಕಟ್ಟೆಯೂ ಸೇರಿರುವುದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಕಟ್ಟೆ ಜಾಗವನ್ನು ಸ್ಥಳಾಂತರಿಸಿ ಕೊಡಬೇಕೆಂದು ಮುಡಾ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸರ್ಕಾರದ ಹಂತದಲ್ಲಿದೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘಕ್ಕೆ ಸದರಿ ಜಾಗವನ್ನು ಮಂಜೂರು ಮಾಡುವ ಕುರಿತಂತೆ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದ್ದು, ಈಗಾಗಲೇ ಟಿಪ್ಪಣಿ ಸಹ ಸಿದ್ಧವಾ ಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಬೇಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಿಶೇಷ ಆಸಕ್ತಿ ವಹಿಸಿರುವುದರಿಂದ ಅನುಮೋದನೆ ಸಿಗಲಿದ್ದು, ಶೀಘ್ರ ಜಾಗ ಹಸ್ತಾಂತರಿಸಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಗ ಳಿಂದಲೇ ಗುದ್ದಲಿ ಪೂಜೆಯನ್ನೂ ನೆರ ವೇರಿಸಲಾಗುವುದು ಎಂದು ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್ ತಿಳಿಸಿದ್ದಾರೆ.

14 ಲಕ್ಷ ರೂ. ಕಾಮಗಾರಿಗೆ ಟೆಂಡರ್: ಉದ್ದೇಶಿತ ಜಾಗದಲ್ಲಿ ಬೆಳೆದಿರುವ ಗಿಡಗಂಟಿ ಗಳನ್ನು ತೆರವುಗೊಳಿಸಿ ಸಮತಟ್ಟು ಮಾಡುವ ಕಾಮಗಾರಿಗೆ (14 ಲಕ್ಷ ರೂ.) ನಿನ್ನೆಯಷ್ಟೇ ಟೆಂಡರ್ ಕರೆಯಲಾಗಿದ್ದು, ಸ್ವಚ್ಛವಾದ ನಂತರ ಸದರಿ ಜಾಗಕ್ಕೆ ಹದ್ದುಬಸ್ತು ಮಾಡಿ ಕ್ರಿಕೆಟ್ ಸಂಘಕ್ಕೆ ಹಸ್ತಾಂತರಿಸಲಾಗುವುದು ಎಂದು ಮುಡಾ ಆಯುಕ್ತ ಜಿ.ಟಿ. ದಿನೇಶ್‍ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ವಿಶ್ವದರ್ಜೆ ಸೌಲಭ್ಯ: ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತಲೂ ಹೆಚ್ಚು ದೊಡ್ಡದಾದ ಕ್ರಿಕೆಟ್ ಕ್ರೀಡಾಂಗಣ ಮೈಸೂರಲ್ಲಿ ನಿರ್ಮಾಣವಾಗಲಿದ್ದು, ವಿಶ್ವದರ್ಜೆಯ ಸೌಲಭ್ಯ ಒದಗಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಮುಂದಾಗಿದೆ. ಆ ಮೂಲಕ ಮೈಸೂರು ಪ್ರಾಂತ್ಯದ ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಕ್ರೀಡಾ ಪ್ರತಿಭೆಗಳಿಗೆ ವಿಫುಲ ಅವಕಾಶ ಲಭ್ಯವಾಗಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ: ವಿಟಿಯು ಬಳಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾದಲ್ಲಿ ಹಂಚ್ಯಾ-ಸಾತಗಳ್ಳಿ ಸುತ್ತಮುತ್ತಲಿನ ಭೂಮಿ ಬೆಲೆ ಗಗನಕ್ಕೇರಲಿದ್ದು, ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ಳಲಿದೆಯಲ್ಲದೆ, ವ್ಯಾಪಾರ, ವಹಿವಾಟು, ವಾಣಿಜ್ಯ ಚಟುವಟಿಕೆಗಳೂ ಸಹ ಗರಿಗೆದರಲಿವೆ. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಹೇಮಂತಕುಮಾರ್ ಗೌಡ, ಮುಡಾ ಸೂಪರಿಂಟೆಂಡಿಂಗ್ ಇಂಜಿ ನಿಯರ್ ಚೆನ್ನಕೇಶವ, ಎಕ್ಸಿಕ್ಯೂಟಿವ್ ಇಂಜಿ ನಿಯರ್ ಧರ್ಮೇಂದ್ರಕುಮಾರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮೋಹನ, ಅಸಿಸ್ಟೆಂಟ್ ಇಂಜಿನಿಯರ್ ಪ್ರಸಾದ್ ಸ್ಥಳ ಪರಿಶೀಲನೆ ವೇಳೆ ಹಾಜರಿದ್ದರು.

Translate »