ಬೈಕ್ ಟ್ಯಾಕ್ಸಿ ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ
ಮೈಸೂರು

ಬೈಕ್ ಟ್ಯಾಕ್ಸಿ ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ

January 12, 2023

ಮೈಸೂರು,ಜ.11(ಪಿಎಂ)- `ಕರ್ನಾ ಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021’ ರದ್ದುಗೊಳಿಸುವಂತೆ ಹಾಗೂ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡ ದಂತೆ ಒತ್ತಾಯಿಸಿ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಆಟೋ ಚಾಲಕರು ಬುಧ ವಾರ ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಆಟೋಗಳೊಂದಿಗೆ ಜಮಾಯಿಸಿದ ಪ್ರತಿ ಭಟನಾಕಾರರು, ರಾಜ್ಯದ ಪ್ರಮುಖ ನಗರ ಗಳಲ್ಲಿ ಪ್ರತಿದಿನ 50 ಲಕ್ಷಕ್ಕೂ ಹೆಚ್ಚು ಪ್ರಯಾ ಣಿಕರಿಗೆ ಆಟೋರಿಕ್ಷಾ ವಲಯ ಸಾರಿಗೆ ಸೌಲಭ್ಯ ನೀಡುತ್ತಿದೆ. ಇದು ಬಹುದೊಡ್ಡ ಕ್ಷೇತ್ರವಾಗಿದ್ದು, 15 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿದೆ. ಆದರೆ ಈಗ ಸರ್ಕಾರ ಇಂತಹ ವ್ಯವಸ್ಥೆಯನ್ನು ದುಸ್ಥಿತಿಗೆ ತಳ್ಳಲು ಹೊರಟಿದೆ ಎಂದು ದೂರಿದರು.

ಚಾಲನಾ ಪತ್ರ ನವೀಕರಣ, ಜೀವಿತಾ ವಧಿ ತೆರಿಗೆ, ಫಿಟ್‍ನೆಸ್ ಸರ್ಟಿಫಿಕೇಟ್, ಇನ್ಶೂರೆನ್ಸ್, ರಹದಾರಿ ನವೀಕರಣ ಮಾತ್ರ ವಲ್ಲದೆ, ದಂಡದ ರೂಪದಲ್ಲಿ ನೇರ ತೆರಿಗೆ ಪಾವತಿ ಮೂಲಕ ಆಟೋ ಚಾಲಕರು, ಸರ್ಕಾರದ ಆರ್ಥಿಕತೆಗೆ ಕೊಡುಗೆ ನೀಡು ತ್ತಿದ್ದೇವೆ. ಸರ್ಕಾರದ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಯಿಂದ ಆಟೋರಿಕ್ಷಾ ಚಾಲಕರಿಗೆ ಅನ್ಯಾಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸ ಆಟೋಗಳ ಖರೀದಿ, ಬಳ ಸುವ ಇಂಧನ, ಬಿಡಿಭಾಗಗಳ ಖರೀದಿ ಸೇರಿದಂತೆ ಇತರೆ ತೆರಿಗೆ ಪಾವತಿ ಮೂಲ ಕವೂ ಸರ್ಕಾರದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದೇವೆ. ಆದರೆ ಈಗ ಆನ್‍ಲೈನ್ ಆ್ಯಫ್ ಆಧಾರಿತ ಅಗ್ರಿಗ್ರೇಟೆರ್ ಕಂಪನಿಗಳು ಆಟೋ ಚಾಲಕರ ದುಡಿಮೆಯನ್ನು ಕಿತ್ತು ಕೊಳ್ಳುತ್ತಿವೆ. ಅಲ್ಲದೆ, ಅನಧಿಕೃತ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳ ಹಾವಳಿ ರಾಜ್ಯದ ಪ್ರಮುಖ ನಗರಗಳಲ್ಲಿ ಸಾರಿಗೆ ಇಲಾಖೆ ಕಣ್ಗಾವಲಿನಲ್ಲಿಯೇ ಅಕ್ರಮವಾಗಿ ನಡೆ ಯುತ್ತಿದ್ದು, ಇದರಿಂದ ಆಟೋ ಚಾಲಕ ರಿಗೆ ಸಂಪಾದನೆ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಉದ್ಯೋಗ ಸೃಷ್ಟಿ, ಹೊಸ ಸಾರಿಗೆ ವ್ಯವಸ್ಥೆ ಹೆಸರಿನಲ್ಲಿ ಸರ್ಕಾರ ಬೃಹತ್ ಶ್ರಮಿಕ ವರ್ಗ ವನ್ನು ನಿರ್ನಾಮ ಮಾಡಲು ಹೊರಟಿದೆ. ಆ ಮೂಲಕ ಆಟೋ ಚಾಲಕರು ಮಾತ್ರ ವಲ್ಲದೆ, ಅವರ ಅವಂಬಿತ ಖಾಸಗಿ ಫೈನಾನ್ಸ್ ಕಂಪನಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಮೆಕ್ಯಾನಿಕ್‍ಗಳು ಸೇರಿದಂತೆ ಮೊದಲಾದ ವ್ಯವಸ್ಥೆಗಳನ್ನು ಅಸ್ಥಿರಗೊಳಿಸಲು ಮುಂದಾ ಗಿದೆ ಎಂದು ಆರೋಪಿಸಿದರು.

ಬೈಕ್ ಟ್ಯಾಕ್ಸಿಯಲ್ಲಿ ಮಹಿಳಾ ಪ್ರಯಾ ಣಿಕರಿಗೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಸರ್ಕಾರ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ಅನ್ನು ರದ್ದುಗೊಳಿಸ ಬೇಕು. ಜೊತೆಗೆ ವೈಟ್‍ಬೋರ್ಡ್ ಟ್ಯಾಕ್ಸಿ ಯೋಜನೆಗಳಿಗೆ ಅನುಮತಿ ನೀಡಬಾರದು. ಇದರ ಬದಲು ಆಟೋರಿಕ್ಷಾ ಚಾಲಕರಿಗೆ ಅನುಕೂಲವಾಗುವಂತೆ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಶೇ.50ರಷ್ಟು ಸಹಾಯಧನ (ಸಬ್ಸಿಡಿ) ನೀಡಬೇಕೆಂದು ಒತ್ತಾಯಿಸಿದರು.
ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇ ರಿಸದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿ ಷ್ಟಾವಧಿ ಮುಷ್ಕರ ನಡೆಸಬೇಕಾಗುತ್ತದೆ. ಅಲ್ಲದೆ, ಮುಂಬರುವ ಚುನಾವಣೆಗಳಲ್ಲಿ ಆಡಳಿತರೂಢ ಬಿಜೆಪಿಗೆ ತಕ್ಕ ಪಾಠ ಕಲಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಒಕ್ಕೂಟದ ಸಂಚಾಲಕರಾದ ಎಂ.ಮಂಜು ನಾಥ್, ರಘು ನಾರಾಯಣಗೌಡ, ಆಟೋ ಚಾಲಕಿ ಸೌಮ್ಯ, ಫೆಡರೇಷನ್ ಆಫ್ ಕರ್ನಾ ಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿ ಯನ್ (ಸಿಐಟಿಯು) ರಾಜ್ಯಾಧ್ಯಕ್ಷ ರಾಘ ವೇಂದ್ರ, ಸಂಯುಕ್ತ ಕರ್ನಾಟಕ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಕ್ಷೇಮಾ ಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀನಿವಾಸ ಮಿತ್ರ, ಮೈಸೂರು ಆಟೋರಿಕ್ಷಾ ಮಾಲೀಕರ ಮತ್ತು ಚಾಲಕರ ವಿವಿಧೋದ್ದೇಶ ಸೊಸೈಟಿ ಅಧ್ಯಕ್ಷ ರಾಮಸ್ವಾಮಿ ಸೇರಿದಂತೆ ಆಟೋ ಚಾಲ ಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »