ಅಂಡಮಾನ್‍ನಲ್ಲಿ ಸ್ಯಾಂಟ್ರೋ ರವಿ?
ಮೈಸೂರು

ಅಂಡಮಾನ್‍ನಲ್ಲಿ ಸ್ಯಾಂಟ್ರೋ ರವಿ?

January 11, 2023

ಈ ನಡುವೆ ಸ್ಯಾಂಟ್ರೋ ರವಿ ಅಂಡಮಾನ್ ನಲ್ಲಿ ಅಡಗಿದ್ದಾನೆ ಎಂಬ ಮಾಹಿತಿಯ ಜಾಡು ಹಿಡಿದಿರುವ ಪೊಲೀಸರ ಒಂದು ತನಿಖಾ ತಂಡ ಅಲ್ಲಿಗೂ ತೆರಳಿದೆ ಎಂದು ಬಲ್ಲ ಮೂಲ ಗಳು ತಿಳಿಸಿವೆ. ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಬೇರೆ ಮೊಬೈಲ್‍ನಿಂದ ಕಾರ್ಯಾ ಚರಣೆ ನಡೆಸುತ್ತಿರುವ ಆತ, ದಿನದಿಂದ ದಿನಕ್ಕೆ ಸ್ಥಳ ಬದಲಾವಣೆ ಮಾಡುತ್ತಿದ್ದು, ಗುರುತು ಸಿಗದಂತೆ ವೇಷ ಬದಲಾಯಿಸಿಕೊಂಡು ಅಡಗಿದ್ದಾನೆ ಎಂದು ಹೇಳಲಾಗುತ್ತಿದೆ.

ಮೈಸೂರು, ಜ.10(ಆರ್‍ಕೆ)-ರಾಜ್ಯವನ್ನೇ ತಲ್ಲಣಗೊಳಿಸಿರುವ ಸ್ಯಾಂಟ್ರೋ ರವಿ ವೇಶ್ಯಾವಾಟಿಕೆ ಹಾಗೂ ಅಕ್ರಮ ಚಟುವಟಿಕೆ ದಂಧೆ ಕುರಿತಂತೆ ಕಾನೂನು-ಸುವ್ಯವಸ್ಥೆ ವಿಭಾಗದ ಅಪರ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್‍ಕುಮಾರ್ ಅವರು ಇಂದು ಮೈಸೂರಲ್ಲಿ ತನಿಖಾ ಪ್ರಗತಿ ಪರಿ ಶೀಲನೆ ನಡೆಸಿದರು. ಬೆಂಗಳೂರಿನಿಂದ ಮಧ್ಯಾಹ್ನ 12.40 ಗಂಟೆಗೆ ಮೈಸೂರಿಗೆ ಆಗಮಿಸಿದ ಅವ ರನ್ನು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಎಸ್ಪಿ ಸೀಮಾ ಲಾಟ್ಕರ್, ಡಿಸಿಪಿಗಳಾದ ಎಂ.ಎಸ್. ಗೀತಾ ಪ್ರಸನ್ನ, ಶಿವರಾಜ್, ನಜರ್‍ಬಾದ್‍ನಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪುಷ್ಪಗುಚ್ಛ ನೀಡಿ, ಸ್ವಾಗತಿಸಿದರು.
ನಂತರ ಅಲೋಕ್‍ಕುಮಾರ್ ಅವರಿಗೆ ಪೊಲೀಸ್ ಗೌರವ ವಂದನೆ ನೀಡಲಾಯಿತು. ಅಲ್ಲಿಂದ ನೇರವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ಎಡಿಜಿಪಿ ಅವರು, ಆಯುಕ್ತ ಬಿ.ರಮೇಶ್, ಎನ್.ಆರ್. ಎಸಿಪಿ ಎಂ.ಶಿವಶಂಕರ್ ಹಾಗೂ ಸಿಸಿಬಿ ಎಸಿಪಿ ಕೆ.ಸಿ.ಅಶ್ವತ್ಥನಾರಾಯಣ ಅವರೊಂದಿಗೆ ಸುಮಾರು ಒಂದು ತಾಸು ಸಭೆ ನಡೆಸಿ ದರು. ಈ ವೇಳೆ ಎಸ್ಪಿ ಸೀಮಾ ಲಾಟ್ಕರ್ ಸಹ ಉಪ ಸ್ಥಿತರಿದ್ದರು. ಸ್ಯಾಂಟ್ರೋ ರವಿ ಪತ್ನಿ ನೀಡಿರುವ ದೂರಿನ ಸಂಬಂಧ ದಾಖಲಾಗಿರುವ ಅತ್ಯಾಚಾರ ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ, ಐಪಿಸಿ ಸೆಕ್ಷನ್ 506, 498ಎ, 504, 376, 270 ಮತ್ತು 323ರಡಿಯ ಪ್ರಕರಣ ಸಂಬಂಧ ತನಿಖೆ ಯಾವ ಹಂತದಲ್ಲಿದೆ, ಮೈಸೂರು ನಗರದಲ್ಲಿ ದಾಖ ಲಾಗಿರುವ ಪ್ರಕರಣಗಳ ಸಂಬಂಧ ಅಲೋಕ್ ಕುಮಾರ್ ಅವರು ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದರು. ಲೈಂಗಿಕ ದೌರ್ಜನ್ಯ ಸಂತ್ರಸ್ತೆ, ಸ್ಯಾಂಟ್ರೋ ರವಿ ಪತ್ನಿ ಹಾಗೂ ಹಲ್ಲೆಗೊಳಗಾದ ಆಕೆಯ ಸಹೋದರಿಯನ್ನು ಪೊಲೀಸ್ ಆಯುಕ್ತರ ಕಚೇರಿಗೆ ಕರೆಸಿಕೊಂಡು ಒಂದೂವರೆ ತಾಸು ವಿಚಾರಣೆ ನಡೆಸಿದರು. ಈ ವೇಳೆ ಸಂತ್ರಸ್ತೆ, ತಮಗೆ ಸ್ಯಾಂಟ್ರೋ ರವಿಯಿಂದ ಕಿರುಕುಳ, ದೌರ್ಜನ್ಯ ನಡೆದ ಬಗ್ಗೆ ವಿವರಿಸಿ, ಆತನನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಂಡು ತನಗೆ ನ್ಯಾಯ ಒದಗಿಸಬೇಕೆಂದು ಅಲೋಕ್ ಕುಮಾರ್ ಅವರಲ್ಲಿ ಮನವಿ ಮಾಡಿದರು. ನಂತರ ಸದರಿ ಪ್ರಕರಣ ಸಂಬಂಧ ಈಗಾಗಲೇ ತಲೆ ಮರೆಸಿಕೊಂಡಿರುವ ಕೆ.ಎಸ್.ಮಂಜು ನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಪತ್ತೆಗಾಗಿ 8 ತಂಡಗಳನ್ನು ರಚಿಸ ಲಾಗಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆ, ಅಂತರರಾಜ್ಯ ಗಳಲ್ಲೂ ಶೋಧ ಕಾರ್ಯ ನಡೆಸಲಾಗುತ್ತಿದೆ. ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಸುಳಿವು ಸಿಗುತ್ತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಎಡಿಜಿಪಿ ಅವರಿಗೆ ಮಾಹಿತಿ ನೀಡಿದರು.

Translate »