ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮೈಸೂರಲ್ಲೂ ಸಾಥ್
ಮೈಸೂರು

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮೈಸೂರಲ್ಲೂ ಸಾಥ್

March 16, 2021

ಮೈಸೂರು, ಮಾ. 15(ಆರ್‍ಕೆ)- ಖಾಸ ಗೀಕರಣ ಹಾಗೂ ವಿಲೀನ ಖಂಡಿಸಿ ರಾಷ್ಟ್ರ ವ್ಯಾಪಿ ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರ ಇಂದಿನಿಂದ ಆರಂಭವಾಯಿತು.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(UಈಃU) ಕರೆ ನೀಡಿರುವ ಮುಷ್ಕರದಲ್ಲಿ ಐಸಿಐಸಿಐ, ಕೋಟಕ್, ಯಶ್ ಬ್ಯಾಂಕ್‍ನಂತಹ ಹೊಸ ಖಾಸಗಿ ಬ್ಯಾಂಕ್‍ಗಳನ್ನು ಹೊರತುಪಡಿಸಿ ಉಳಿ ದಂತೆ ಎಲ್ಲಾ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ನೌಕರರು ಪಾಲ್ಗೊಂಡಿದ್ದಾರೆ.
ಮೊದಲ ದಿನವಾದ ಸೋಮವಾರ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ಎಸ್‍ಬಿಐ ವಲಯ ಕಚೇರಿ ಬಳಿ ಜಮಾ ವಣೆಗೊಂಡಿದ್ದ ಸುಮಾರು 300 ಮಂದಿ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರು, ಪ್ರತಿಭಟನೆ ನಡೆಸಿದರು. ಸಾರ್ವಜನಿಕರು ತೊಡಗಿಸಿದ ಹಣದ ರಕ್ಷಣೆ ಹಾಗೂ ಸರ್ಕಾ ರದ ವಿವಿಧ ಯೋಜನಾ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವ ಸಲುವಾಗಿ ಉದ್ಯಮಿಗಳು, ಪ್ರಮುಖ ವ್ಯಾಪಾರಸ್ಥರ ಹಿಡಿತದಲ್ಲಿದ್ದ ಬ್ಯಾಂಕುಗಳನ್ನು ರಾಷ್ಟ್ರೀಕರಣ ಗೊಳಿಸಲಾಗಿತ್ತು ಎಂದು ಪ್ರತಿಭಟನಾಕಾರರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಇದೀಗ ಮತ್ತೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸು ವುದಾಗಿ ಬಜೆಟ್‍ನಲ್ಲಿ ಘೋಷಿಸಿರುವ ಕೇಂದ್ರ ಸರ್ಕಾರ, ಸಾರ್ವಜನಿಕರ ಹಣ ವನ್ನು ಉದ್ದಿಮೆದಾರರ ಸುಪರ್ದಿಗೆ ಒಪ್ಪಿ ಸುವ ಹುನ್ನಾರ ನಡೆಸಿದೆ ಎಂದು ಬ್ಯಾಂಕ್ ನೌಕರರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿದ ಪ್ರತಿಭಟನಾಕಾರರು, ಬ್ಯಾಂಕು ಗಳ ಖಾಸಗೀಕರಣ ನಿರ್ಧಾರವನ್ನು ವಾಪಸ್ ಪಡೆಯಬೇಕು, ದೇಶಾದ್ಯಂತ ಎಲ್ಲಾ ರಾಷ್ಟ್ರೀ ಕೃತ ಬ್ಯಾಂಕುಗಳನ್ನು ಸಬಲೀಕರಣಗೊಳಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.

ಯುನೈಟೆಡ್ ಘೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸಂಚಾಲಕ ಹೆಚ್.ಬಾಲ ಕೃಷ್ಣ, ಮುಖಂಡರಾದ ಗುರುರಾಜ್, ಕಲ್ಯಾಣ್, ಮಹೇಶ್, ಶ್ರೀರಾಂ, ಪದ್ಮನಾಭ, ಸ್ನೇಹ ಸೇರಿದಂತೆ ಹಲವರು ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಾಳೆ(ಮಾ.16) ಬೆಳಿಗ್ಗೆ 10.30 ಗಂಟೆಗೆ ನಜರ್‍ಬಾದ್‍ನ ಕೆನರಾ ಬ್ಯಾಂಕ್ ಪ್ರಾದೇ ಶಿಕ ಕಚೇರಿ ಬಳಿ ಬ್ಯಾಂಕ್ ನೌಕರರು ಮತ್ತೆ ಪ್ರತಿಭಟನೆ ನಡೆಸಲಿದ್ದು, ಕಳೆದ ಹಲವು ವರ್ಷಗಳಿಂದ ತಾತ್ಕಾಲಿಕ ನೌಕರ ರಾಗಿ ಕೆಲಸ ಮಾಡುತ್ತಿರುವವರನ್ನು ಖಾಯಂಗೊಳಿಸಿ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸುವರು.

Translate »