ಮೈಮುಲ್ ಚುನಾವಣೆಯಲ್ಲಿ ಕೆ.ಜಿ.ಮಹೇಶ್  ಬಣ ಬೆಂಬಲಿಸಲು ಕೆ.ಮರೀಗೌಡ ಮನವಿ
ಮೈಸೂರು

ಮೈಮುಲ್ ಚುನಾವಣೆಯಲ್ಲಿ ಕೆ.ಜಿ.ಮಹೇಶ್ ಬಣ ಬೆಂಬಲಿಸಲು ಕೆ.ಮರೀಗೌಡ ಮನವಿ

March 16, 2021

ಮೈಸೂರು, ಮಾ.15- ಮಂಗಳವಾರ ನಡೆಯಲಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಯಲ್ಲಿ ಕೆ.ಜಿ.ಮಹೇಶ್ ಬಣವನ್ನು ಬೆಂಬಲಿಸಿ ಅವರಿಗೆ ಮತ ನೀಡುವಂತೆ ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರು ಮನವಿ ಮಾಡಿದರು.

ನಂಜನಗೂಡು ತಾಲೂಕಿನ ತಾಂಡವ ಪುರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕೆ.ಜಿ.ಮಹೇಶ್ ಬಣ ದಲ್ಲಿ ಸ್ಪರ್ಧಿಸಿರುವ 7 ಮಂದಿ ಅಭ್ಯರ್ಥಿ ಗಳು ಗೆಲ್ಲುವ ವಿಶ್ವಾಸವಿದೆ. ಮೈಸೂರು ಕ್ಷೇತ್ರಕ್ಕೆ ಒಳಪಡುವ ನಂಜನಗೂಡು, ಮೈಸೂರು, ತಿ.ನರಸೀಪುರ ತಾಲೂಕಿನ 7 ಮಂದಿ ಅಭ್ಯರ್ಥಿಗಳಾದ ಕೆ.ಜಿ. ಮಹೇಶ್, ಕೆ.ಉಮಾಶಂಕರ್, ಬೆಳ ವಾಡಿ ಶಿವಮೂರ್ತಿ, ಆರ್.ಚೆಲುವ ರಾಜು, ಗೋಪಾಲಪುರ ಬಿ.ಗುರು ಸ್ವಾಮಿ, ಮಹಿಳಾ ಮೀಸಲು ಕ್ಷೇತ್ರದ ಯಶೋದಮ್ಮ ಮುದ್ದೆಗೌಡ, ಮಂಗ ಳಮ್ಮ ಚಿನ್ನಸ್ವಾಮಿ ಪರವಾಗಿ ಮೂರು ತಾಲೂಕಿನಲ್ಲೂ ನಾನು ಮತಯಾಚನೆ ಮಾಡಿದ್ದೇನೆ. ಎಲ್ಲೆಡೆ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗಿದ್ದು, ನಮ್ಮ ಅಭ್ಯರ್ಥಿ ಗಳು ಗೆಲ್ಲುವ ವಿಶ್ವಾಸವಿದೆ ಎಂದರು.

Translate »