ಸತೀಶ್ ನೀನಾಸಂ ಸಿಕ್ಸ್‍ಪ್ಯಾಕ್ ಅಸಲಿ ಕಾರಣ ಇದು !
ಸಿನಿಮಾ

ಸತೀಶ್ ನೀನಾಸಂ ಸಿಕ್ಸ್‍ಪ್ಯಾಕ್ ಅಸಲಿ ಕಾರಣ ಇದು !

March 20, 2020

ಕೆಲವು ದಿನಗಳ ಹಿಂದೆಯಷ್ಟೇ ನಟ ಸತೀಶ್ ನೀನಾಸಂ ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ ದೇಹ ಹುರಿಗೊಳಿಸಿಕೊಂಡ ಫೋಟೋವೊಂದನ್ನು ಹಂಚಿಕೊಂಡಿ ದ್ದರು. ಜಿಮ್‍ನಲ್ಲಿ ನಿಂತು ತೆಗೆಸಿಕೊಂಡಿದ್ದ ಆ ಫೋಟೋ ಸಖತ್ ವೈರಲ್ ಕೂಡ ಆಗಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಸತೀಶ್ ಯಾಕಾಗಿ ಈ ಕಸರತ್ತು ನೆಡೆಸಿ ದ್ದಾರೆ ಎಂಬ ಕುತೂಹಲ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇನ್ನೇನು ರಿಲೀಸ್‍ಗೆ ಸಿದ್ಧವಾಗಿರುವ ಗೋಧ್ರಾ ಸಿನಿಮಾದ ಹಾಡೊಂದರ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದ್ದು, ಈ ಸಾಂಗ್ ಗಾಗಿ ಸತೀಶ್ ಬೆವರಿಳಿಸಿದ್ದಾರೆ. ಅದೊಂದು ವಿಶೇಷ ಗೀತೆಯಾಗಿದ್ದರಿಂದ ಈ ತಯಾರಿ ನಡೆಸಿದ್ದಾರೆ. ದೇಹ ಹುರಿ ಗೊಳಿಸುವುದು ಸಾಮಾನ್ಯ ಸಂಗತಿ ಏನಲ್ಲ. ಅದಕ್ಕಾಗಿ ಏನೆಲ್ಲ ತ್ಯಾಗ ಮಾಡಬೇಕು. ನಾನಾ ರೀತಿಯ ಕಸರತ್ತುಗಳನ್ನೂ ನಡೆಸಬೇಕು. ಈ ಕುರಿತು ಸ್ವತಃ ಸತೀಶ್ ಅವರೇ ಮಾತನಾಡಿದ್ದಾರೆ.

“ಗೋಧ್ರಾದ ಹಾಡೊಂದರ ಚಿತ್ರೀಕರಣ ಕ್ಕಾಗಿ ಈ ತಯಾರಿ ಮಾಡಿಕೊಳ್ಳಲೇ ಬೇಕಿತ್ತು. ಅಲ್ಲದೇ, ಇದು ಸಿಕ್ಸ್‍ಪ್ಯಾಕ್ ಮಾಡಿಕೊಳ್ಳಲು ಮಾಡಿದ್ದಲ್ಲ. ದೇಹದ ಆರೋಗ್ಯದ ಬಗ್ಗೆ ನಾನು ಸದಾ ಕಾಳಜಿ ಹೊಂದಿರುv್ತÉೀನೆ. ಪಾತ್ರಕ್ಕಾಗಿ ನಾನು ಯಾವ ರೀತಿಯ ತಯಾರಿಗೂ ಸಿz್ಧÀ. ದೇಹ ಹುರಿಗೊಳಿಸಿ ಕೊಳ್ಳುವುದು ಅಂದರೆ, ಅದೊಂದು ವಿಶೇಷÀ ಅನುಭವ. ಈ ಹಾದಿಯಲ್ಲಿ ನಾನು ಫಿಟ್ ಆಗಿದ್ದೇನೆ. ಮತ್ತಷ್ಟು ಯಂಗ್ ಆಗಿ ಕಾಣುತ್ತಿದ್ದೇನೆ. ದಿನಕ್ಕೆ ಕನಿಷ್ಟ ಐದು ಕಿಲೋ ಮೀಟರ್ ಓಡುತ್ತೇನೆ. ಎರಡು ಬಾರಿ ಜಿಮ್ ಮಾಡುತ್ತೇನೆ. ಈ ಹಿಂದೆ ಅಯೋಗ್ಯ ಸಿನಿಮಾದ ಸಾಹಸ ಸನ್ನಿವೇಶಕ್ಕೆ ಶ್ಯಾಮ್ ರಾಬರ್ಟ್ ನನ್ನನ್ನು ಸಖತ್ತಾಗಿ ತಯಾರಿ ಮಾಡಿದ್ದರು. ಅದರ ನೆಕ್ಸ್‍ಟ್ ಲೆವಲ್ ತಯಾರಿ ಇದಾಗಿದೆ” ಎಂದರು ಸತೀಶ್.

“ನಿತ್ಯವೂ ವ್ಯಾಯಾಮ ಮಾಡುವುದರ ಜತೆಗೆ ಆಹಾರ ಸೇವಿಸುವುದರಲ್ಲೂ ಕಟ್ಟು ನಿಟ್ಟಾಗಿದ್ದೇನೆ. ಎರಡೂವರೆ ತಿಂಗಳಿಂದ ನನ್ನ ನೆಚ್ಚಿನ ಅನೇಕ ತಿಂಡಿ ತಿನಿಸುಗಳನ್ನು ಬಿಟ್ಟಿದ್ದೇನೆ. ಅನ್ನ ತಿನ್ನಲ್ಲ. ಸಕ್ಕರೆಯಿಂದ ದೂರ. ಓಟ್ಸ್, ಹಣ್ಣುಗಳು, ತರಕಾರಿ, ಮೊಟ್ಟೆ ಮತ್ತು ಪೋಷಕಾಂಶಯುಕ್ತ ಮಾಂಸ ತಿನ್ನಲು ಹೇಳಿದ್ದಾರೆ. ದಿನಕ್ಕೆ ಐದು ಬಾರಿ ಅಳೆದು ತೂಗಿ ತಿನ್ನುವುದನ್ನು ರೂಢಿ ಮಾಡಿ ಕೊಂಡಿದ್ದೇನೆ. ಈ ಎಲ್ಲ ಶಿಸ್ತು ನನಗೆ ಸಹಕಾರಿ ಯಾಗಿವೆ’ ಎನ್ನುವುದು ಸತೀಶ್ ಮಾತು.

ಈ ತಯಾರಿಗಾಗಿಯೇ ಅವರು ಮೂರು ತಿಂಗಳ ಕಸರತ್ತು ಮಾಡಿದ್ದಾರೆ. “ನಾನು ಅಂದುಕೊಂಡಂತಹ ಲುಕ್ ಬರಬೇಕು ಎಂದರೆ ಇನ್ನೂ ಒಂದು ತಿಂಗಳವರೆಗೆ ಸತತ ಕಸರತ್ತು ನಡೆಸಬೇಕು. ಮೊದ ಮೊದಲು ಕಷ್ಟ್ಟ ಆಗೋದು. ಈಗ ಅದಕ್ಕೆ ಹೊಂದಿಕೊಂಡಿದ್ದೇನೆ ಎಂದಿದ್ದಾರೆ. ಅಂದ ಹಾಗೆ ಗೋಧ್ರಾ ಸಿನಿಮಾದಲ್ಲಿ ಸತೀಶ್ ಹೊಸಬಗೆಯ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಸತೀಶ್ ಜೊತೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ. ನಂದೀಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

 

Translate »