ಏಪ್ರಿಲ್‍ನಲ್ಲಿ ‘ತಿರುವು’ ಚಿತ್ರ ಬಿಡುಗಡೆ
ಸಿನಿಮಾ

ಏಪ್ರಿಲ್‍ನಲ್ಲಿ ‘ತಿರುವು’ ಚಿತ್ರ ಬಿಡುಗಡೆ

March 20, 2020

ಮೈಸೂರಿನ ಪ್ರತಿಭೆಗಳೇ ಸೇರಿ ಒಂದು ಕುತೂಹಲಕರವಾದ ಚಿತ್ರವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಶ್ರೀ ರಾಗಶ್ರೀ ಫಿಲಂಸ್ ಪ್ರೊಡಕ್ಷನ್ಸ್ ವತಿಯಿಂದ ‘ತಿರುವು’ ಚಿತ್ರ ನಿರ್ಮಾಣವಾಗಿದ್ದು, ಏಪ್ರಿಲ್‍ನಲ್ಲಿ ಬಿಡುಗಡೆಯಾಗಲಿದೆ.

ಒಂದು ಕೊಲೆಯ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ‘ತಿರುವು’ ಪ್ರತಿ ಹಂತದಲ್ಲೂ ಪ್ರೇಕ್ಷಕರನ್ನು ಕುತೂಹಲ ಗೊಳಿಸುತ್ತದೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿದ್ದು, ಇದೊಂದು ಸದಭಿರುಚಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಸುತ್ತಮುತ್ತಲ ಸ್ಥಳೀಯ ಪ್ರಾಕೃತಿಕ ಲೋಕೇಶನ್‍ನಲ್ಲಿ ಚಿತ್ರೀಕರಣಗೊಂಡಿರುವ ತಿರುವು ಚಿತ್ರದ ಕಥೆ, ಚಿತ್ರಕಥೆ- ಸಾಹಿತ್ಯ ನಿರ್ದೇಶನ, ನಿರ್ಮಾಣದ ಹೊಣೆ ಹೊತ್ತವರು, ಡಾ. ಹೆಚ್.ವಿ.ಪುಟ್ಟಸ್ವಾಮಿ, ಅವರು ಶ್ರೀ ರಾಗಶ್ರೀ ಫಿಲಂಸ್ ಬ್ಯಾನರ್‍ನಲ್ಲಿ ‘ ತಿರುವು’ ನಿರ್ಮಾಣ ಮಾಡಿದ್ದಾರೆ. ಮೈಸೂರಿನ ಪ್ರತಿಭೆಗಳೇ ಆದ ಕೃಷ್ಣನಾಗ ಹಾಗೂ ಚಂದನಾ ನಾಯಕ-ನಾಯಕಿಯಾಗಿ ಅಭಿನಯಿಸಿ ದ್ದಾರೆ. ಕೆ.ಎಸ್.ರಾಜು ಸಹ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

Translate »