ಕಿಡಿಗೇಡಿಗಳು ಇಟ್ಟ ಕಿಚ್ಚಿಗೆ ಚಾಮುಂಡಿಬೆಟ್ಟದ 10 ಎಕರೆ ಅರಣ್ಯ ನಾಶ
ಮೈಸೂರು

ಕಿಡಿಗೇಡಿಗಳು ಇಟ್ಟ ಕಿಚ್ಚಿಗೆ ಚಾಮುಂಡಿಬೆಟ್ಟದ 10 ಎಕರೆ ಅರಣ್ಯ ನಾಶ

March 19, 2020

ಮೈಸೂರು, ಮಾ.18 (ಎಂಟಿವೈ)- ಚಾಮುಂಡಿಬೆಟ್ಟ ಅರಣ್ಯಕ್ಕೆ ಬುಧವಾರ ಮಧ್ಯಾಹ್ನ 1.30ರಲ್ಲಿ ಕಿಡಿಗೇಡಿಗಳು ಇಟ್ಟ ಕಿಚ್ಚಿಗೆ ಕ್ಷಣ ಮಾತ್ರದಲ್ಲೇ ಬೆಂಕಿ ವ್ಯಾಪಿಸಿ ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ನಾಶವಾಯಿತು. ಆರು ಅಗ್ನಿಶಾಮಕ ವಾಹನಗಳು, 80ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಸತತ ನಾಲ್ಕು ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಬೆಟ್ಟದ ತಪ್ಪಲಿನ ಲಲಿತಾದ್ರಿಪುರದಿಂದ ಉತ್ತನಹಳ್ಳಿಗೆ ಹೋಗುವ ರಸ್ತೆಯಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂ ಡಿದ್ದು, ಜ್ವಾಲಾಮುಖಿ ಗುಡ್ಡದಲ್ಲಿ ಕಾವಲು ಕಾಯುತ್ತಿದ್ದ ವಾಚರ್‍ಗಳು ತಕ್ಷಣ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭ ಗೊಂಡ ಬಳಿಕ ಗಾಳಿ ಬೀಸುವ ವೇಗ ಹೆಚ್ಚಿತು. ಇದರಿಂದ ಬೆಂಕಿಯ ಕೆನ್ನಾಲಿಗೆ ಬೆಟ್ಟಕ್ಕೆ ವ್ಯಾಪಿಸಿ ಸಾಕಷ್ಟು ಹಾನಿಯುಂಟು ಮಾಡಿತು. 6 ಅಗ್ನಿಶಾಮಕ ವಾಹನಗಳು, ಅರಣ್ಯ ಇಲಾಖೆಯ ವಾಟರ್ ಜೆಟ್ ಇರುವ 2 ಮಿನಿ ವಾಹನ, ನೀರಿನ ಟ್ಯಾಂಕರ್, 10ಕ್ಕೂ ಹೆಚ್ಚು ಮೋಟಾರ್‍ವುಳ್ಳ ಸ್ಪ್ರೇಯರ್ ಜೊತೆಗೆ 80ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಸತತ 4 ಗಂಟೆ ಶ್ರಮಿಸಿದರು. ಸಂಜೆ 6 ಗಂಟೆ ಸುಮಾರಿನಲ್ಲಿ ಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಕಾಡ್ಗಿಚ್ಚು ತಡೆಗೆ ಚಾಮುಂಡಿಬೆಟ್ಟದ ತಪ್ಪಲಿನ ಅನೇಕ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡ ಲಾಗಿತ್ತು. ಆದರೂ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿ ಭಾರೀ ಹಾನಿ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆಗೆ ಹಿನ್ನಡೆ: ಬೆಂಕಿ ನಂದಿಸುವ ಕಾರ್ಯಕ್ಕೆ ಕೈಜೋಡಿಸಲು ಚಾಮುಂಡಿಬೆಟ್ಟದ ಹಲವು ಯುವಕರು, ಮೈಸೂರಿನ ವಿವಿಧ ಬಡಾವಣೆಗಳ ಸ್ವಯಂ ಸೇವಕರು ಬಂದಿದ್ದರು. ಲಲಿತಾದ್ರಿಪುರ-ಉತ್ತನಹಳ್ಳಿ ರಸ್ತೆ ಕಡೆಯಿಂದ ಹರಡಿದ ಬೆಂಕಿ ತಾವರಕಟ್ಟೆ ಹಾಗೂ ನಂಜನಗೂಡು ರಸ್ತೆ ಯತ್ತಲೂ ಕೆನ್ನಾಲಿಗೆ ಚಾಚಿತು. ಚಾಮುಂಡಿ ಬೆಟ್ಟದ ರಸ್ತೆಯನ್ನು ದಾಟಿ ಮೇಲ್ಭಾಗದ ಗುಡ್ಡಕ್ಕೂ ವ್ಯಾಪಿಸಿತು.

ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಹಲ ವರು ಶ್ರಮಿಸಿದರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಒಂದು ಭಾಗದಲ್ಲಿ ಬೆಂಕಿ ನಂದಿ ಸಿದರೆ, ಮತ್ತೊಂದು ಭಾಗದಲ್ಲಿ ಹೆಚ್ಚು ತ್ತಿತ್ತು. ವೇಗದ ಗಾಳಿಯೂ ಬೆಂಕಿ ವ್ಯಾಪಿ ಸುವಂತೆ ಮಾಡಿತು.

ರೇಸ್‍ಕೋರ್ಸ್ ಭಾಗದತ್ತ ಬೆಂಕಿ ಬರು ವುದನ್ನು ತಡೆಯಲು ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗುಡ್ಡದ ಮೇಲ್ಭಾಗದಿಂದ ಪ್ರಾಣದ ಹಂಗು ತೊರೆದು ಕಾರ್ಯಾಚರಣೆ ನಡೆಸಿದರು. ಈ ವೇಳೆ ಉತ್ತನಹಳ್ಳಿ ರಸ್ತೆಯ ಜ್ವಾಲಾಮುಖಿ ಟವರ್ ಭಾಗಕ್ಕೆ ಕಿಡಿ ಹಾರಿ ಬೆಂಕಿ ಹೊತ್ತಿಕೊಂ ಡಿತು. ಅದು ಕಡಿದಾದ ಗುಡ್ಡವಾದ್ದ ರಿಂದ ತಕ್ಷಣವೇ ಅಲ್ಲಿಗೆ ತಲುಪಲಾಗಲಿಲ್ಲ. ಸಿಬ್ಬಂದಿ ಸ್ಪ್ರೇಯರ್ ಹಿಡಿದು ಗುಡ್ಡ ಇಳಿದು ಬೆಂಕಿ ನಂದಿಸಲು ಯತ್ನಿಸಿದರು. ಮೈಸೂರಿನ ವಿವಿ ಧೆಡೆಯಿಂದ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೊನೆಗೂ ಬೆಂಕಿ ನಂದಿ ಸುವಲ್ಲಿ ಯಶಸ್ಸು ಕಂಡರು.

ಸಂಚಾರ ಬಂದ್: ಬೆಂಕಿ ವ್ಯಾಪಿಸಿದ್ದ ರಿಂದ ಚಾಮುಂಡಿಬೆಟ್ಟಕ್ಕೆ ಮಧ್ಯಾಹ್ನ 1.50 ರಿಂದ ಸಂಜೆ 4.30ರವರೆಗೆ ಸಾರಿಗೆ ಬಸ್ ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. 1.45ರಲ್ಲಿ ಸಾರಿಗೆ ಸಂಸ್ಥೆ ಬಸ್ ಬೆಟ್ಟ ಏರುತ್ತ್ತಿದ್ದಾಗಲೇ ಬೆಂಕಿ ರಸ್ತೆ ದಾಟಿ ಮೇಲ್ಭಾಗದ ಗುಡ್ಡ ತಲುಪಿತು. ಕೂಡಲೇ ಎಚ್ಚೆತ್ತ ಅರಣ್ಯ ಸಿಬ್ಬಂದಿ, ಬಸ್ ಚಾಲಕನಿಗೆ ಹಿಮ್ಮುಖವಾಗಿ ಚಲಿಸುವಂತೆ ಸಲಹೆ ನೀಡಿ ಹಾನಿ ತಪ್ಪಿಸಿದರು.

ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾ ಲಾಲ್, ಡಿಸಿಎಫ್ ಕೆ.ಸಿ.ಪ್ರಶಾಂತ್‍ಕುಮಾರ್ ಸ್ಥಳ ಧಾವಿಸಿ ಕಾರ್ಯಾಚರಣೆಗೆ ಮಾರ್ಗ ದರ್ಶನ ಮಾಡಿದರು. ಡಿಸಿಪಿ ಪ್ರಕಾಶ್ ಗೌಡ, ವೈಲ್ಡ್‍ಲೈಫ್ ವಾರ್ಡನ್ ಕೃತಿಕಾ ಆಲನಹಳ್ಳಿ ಭೇಟಿ ನೀಡಿದ್ದರು. ಕಾರ್ಯಾ ಚರಣೆಯಲ್ಲಿ ಎಸಿಎಫ್ ಕೃಪಾನಿಧಿ, ಆರ್ ಎಫ್‍ಓಗಳಾದ ಪ್ರಶಾಂತ್ ಕುಮಾರ್, ಎಂ.ಕೆ. ದೇವರಾಜು, ಡಿಆರ್‍ಎಫ್ ಎಂ.ವಿ.ವೆಂಕಟಾ ಚಲ, ಎ.ಎಸ್.ಮಂಜು, ಟಿ.ಇ.ವಿಜಯ ಕುಮಾರ್, ಪ್ರಕಾಶ್ ಮತ್ತಿತರರಿದ್ದರು.

Translate »