ರಾಜ್ಯದ ಇನ್ನಿತರೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ
ಮೈಸೂರು

ರಾಜ್ಯದ ಇನ್ನಿತರೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ

March 19, 2020

ಬೆಂಗಳೂರು, ಮಾ.18(ಕೆಎಂಶಿ)- ಸಂಪನ್ಮೂಲ ಕ್ರೋಢೀಕರಣ ಹಾಗೂ ಪ್ರವಾಸಿಗರನ್ನು ಆಕರ್ಷಿ ಸಲು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ನಿರಂಜನ್ ಕುಮಾರ್, ರವೀಂದ್ರ ಶ್ರೀಕಂಠಯ್ಯ, ಹೆಚ್.ಕೆ. ಕುಮಾರ ಸ್ವಾಮಿ ಮತ್ತಿತರರು ಮಾಡಿದ ಪ್ರಸ್ತಾವಕ್ಕೆ ಉತ್ತರಿ ಸಿದ ಮುಖ್ಯಮಂತ್ರಿಯವರು ಖಾಸಗಿ ಸಹ ಭಾಗಿತ್ವದಲ್ಲೂ, ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದೆ ಎಂದರು.

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾ ಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸ ಲಾಗಿದೆ. ಆ ಸಮಿತಿ ಮೂಲಕ ಪ್ರಮುಖ ಪ್ರವಾಸಿ ತಾಣ ಗಳನ್ನು ಗುರುತಿಸಲಾಗುತ್ತಿದೆ ಎಂದರು.

ಇದಕ್ಕೂ ಮುನ್ನ ಉತ್ತರ ನೀಡಿದ ಸಚಿವ ಸಿ.ಟಿ.ರವಿ, ಕರ್ನಾಟಕ ಪ್ರವಾಸೋದ್ಯಮ ನೀತಿ-2015-20ರಲ್ಲಿ 319 ಪ್ರವಾಸಿ ತಾಣ ಗಳನ್ನು ಗುರುತಿಸಲಾಗಿದೆ. ವಿಸ್ತೃತವಾಗಿ ಪ್ರವಾಸಿ ತಾಣಗಳನ್ನು ಗುರುತಿಸುವಾಗ ಬಿಟ್ಟು ಹೋಗಿರುವ ಬರಚುಕ್ಕಿಯಂತಹ ಪ್ರವಾಸಿ ತಾಣಗಳನ್ನು ಸೇರ್ಪಡೆ ಮಾಡ ಲಾಗುವುದು ಎಂದರು. ಪ್ರವಾಸಿ ತಾಣಗಳ ಪೈಕಿ ಚಾಮರಾಜನಗರದ ಕನಕಗಿರಿ, ಚಿಕ್ಕಹೊಳೆ ಜಲಾಶಯ, ಕರಿವರದರಾಜ ಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಬಂಡಿಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಕೊಳ್ಳೇಗಾಲ ತಾಲೂಕಿನ ಹೊಗೇನಕಲ್ ಜಲಪಾತ, ಬಿಳಿಗಿರಿ ರಂಗನಬೆಟ್ಟ, ಮಲೆಮಹ ದೇಶ್ವರಬೆಟ್ಟ ಈ ಪ್ರವಾಸಿ ತಾಣಗಳ ಅಭಿ ವೃದ್ಧಿಗೆ 17.33 ಕೋಟಿ ರೂ. ಮಂಜೂ ರಾಗಿದೆ ಎಂದು ತಿಳಿಸಿದರು.

ಐತಿಹಾಸಿಕ ಶ್ರೀರಂಗಪಟ್ಟಣ ಕೋಟೆ ಅಭಿವೃದ್ಧಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿ¸ Àಲು 189. 97 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಸದರಿ ಕಾಮ ಗಾರಿಗಳನ್ನು ಕೈಗೊಳ್ಳಲು 10.57 ಕೋಟಿ ರೂ.ಗಳನ್ನು ಬಿಡುಗಡೆ ಮಾಡ ಲಾಗಿದೆ. ಟೂರಿಸಂ ವಿಷನ್ ಗ್ರೂಪ್ ಶಿಫಾರಸ್ಸಿನಂತೆ ಕೋಟೆ ಗೋಡೆಯ ಸುತ್ತಲೂ ಪ್ರವಾಸಿಗರ ದೋಣಿ ವಿಹಾರಕ್ಕಾಗಿ ಕಂದ ಕದ ಸಂರಕ್ಷಣಾ ಮೊದಲ ಹಂತದ ಕಾಮಗಾರಿಯನ್ನು ಐದು ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಸರ್ಕಾರ ಆದೇಶಿಸಿದೆ ಎಂದರು.

ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ದಿಂದ ಹೂಡಿಕೆದಾರರ ಸಮಾವೇಶ ಕರೆಯ ಬೇಕೆಂಬ ಉದ್ದೇಶವಿದ್ದು, ಕೈಗಾರಿಕೆಗಳ ಸಿಎಸ್‍ಆರ್ ನಿಧಿ ಹಣ ಬಳಕೆ ಹಾಗೂ ಉದ್ಯಮಿಗಳು ಪ್ರವಾಸಿ ತಾಣಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಮಲೆನಾಡು ಪ್ರದೇಶ ಯಾವ ಸ್ವಿಡ್ಜರ್ ಲ್ಯಾಂಡಿಗೂ ಕಡಿಮೆ ಇಲ್ಲದ ಪ್ರವಾಸಿ ತಾಣವಾಗಿದೆ. ಕೊಡಗು, ಹಾಸನ ಚಿಕ್ಕಮಗ ಳೂರು, ಶಿವ ಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದಲ್ಲದೆ, ಅಗತ್ಯ ಸಂಪರ್ಕ ರಸ್ತೆಗಳನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

Translate »