ಇಂದಿನಿಂದ ಆ.30ರವರೆಗೆ ಸಾವರ್ಕರ್ ರಥಯಾತ್ರೆ
ಮೈಸೂರು

ಇಂದಿನಿಂದ ಆ.30ರವರೆಗೆ ಸಾವರ್ಕರ್ ರಥಯಾತ್ರೆ

August 23, 2022

ಮೈಸೂರು, ಆ.22 (ಪಿಎಂ)- ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಅವರ ತ್ಯಾಗ, ಸಂದೇಶದ ಕುರಿತು ಜನಸಾಮಾನ್ಯರಿಗೆ ತಿಳಿಸುವ ಸಲು ವಾಗಿ ಆ.23ರಿಂದ 30ರವರೆಗೆ ಮೈಸೂರು, ಮಂಡ್ಯ ಮತ್ತು ಚಾಮ ರಾಜನಗರ ಜಿಲ್ಲೆಗಳ ನಗರ, ಗ್ರಾಮಾಂತರ ಪ್ರದೇಶದಲ್ಲಿ `ಸಾವರ್ಕರ್ ರಥಯಾತ್ರೆ’ ಆಯೋಜಿಸಲಾಗಿದೆ ಎಂದು ಪ್ರತಿ ಷ್ಠಾನದ ಅಧ್ಯಕ್ಷೆ ಯಶಸ್ವಿನಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವರ ಜೀವನ, ಹೋರಾಟದ ಯಶೋಗಾಥೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಈ ರಥಯಾತ್ರೆ ಆಯೋಜಿಸಲಾಗಿದೆ. ಆ.23ರಂದು ಬೆಳಗ್ಗೆ 11ಕ್ಕೆ ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮ ದಲ್ಲಿ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ರಥವಾಗಿ ವಿನ್ಯಾಸಗೊಳಿಸಿರುವ ವಾಹನ ದಲ್ಲಿ ಎಲ್‍ಇಡಿ ಪರದೆಗಳ ಮೂಲಕ ಸಾವರ್ಕರ್ ಅವರ ಕಿರುಚಿತ್ರ ಪ್ರದರ್ಶನ ಬಿತ್ತರಗೊಳ್ಳಲಿದೆ. ನಾಳೆ ಮೈಸೂರು ನಗರದ ಆಯ್ದ ಪ್ರದೇಶಗಳಲ್ಲಿ ರಾತ್ರಿ 8ರವರೆಗೆ ಸಂಚರಿಸಿ ಸಾವರ್ಕರ್ ಅವರ ಯಶೋಗಾಥೆ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.

ಸಾವರ್ಕರ್ ವಿಚಾರವಾಗಿ ವಿವಾದಗಳು ಎದ್ದಿರುವ ಈ ಸಂದರ್ಭದಲ್ಲಿ ರಥಯಾತ್ರೆ ಹಮ್ಮಿಕೊಂಡಿರುವ ಉದ್ದೇಶದ ಬಗ್ಗೆ ಪ್ರತಿಕ್ರಿಯಿಸಿ, ಸಾವರ್ಕರ್ ಅವರ ಮೇರು ವ್ಯಕ್ತಿತ್ವದ ಬಗ್ಗೆ ಜನತೆಗೆ ಸರಿಯಾದ ಮಾಹಿತಿ ನೀಡಲು ಇದು ಸರಿಯಾದ ಸಂದರ್ಭವಾಗಿದೆ. ಹೀಗಾಗಿ ರಥಯಾತ್ರೆ ನಡೆಸಲಾಗುತ್ತಿದೆ ಎಂದು ಹೇಳಿದರು. ರಥಯಾತ್ರೆಗೆ ಅನುಮತಿ ನೀಡಿ ಸೂಕ್ತ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಲಾ ಗಿದೆ. ಪೊಲೀಸ್ ಅನುಮತಿ ದೊರೆಯುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಚಾಲನೆ ಬಳಿಕ ರಥಯಾತ್ರೆಯು ಮೈಸೂರು ನಗರದ ಟೆರಿಷಿಯನ್ ಕಾಲೇಜು ಮಾರ್ಗವಾಗಿ ಕ್ಯಾತಮಾರನಹಳ್ಳಿ, ತಿಲಕನಗರ, ಮಾತೃ ಮಂಡಳಿ ವೃತ್ತ, ಟೆಂಟ್ ವೃತ್ತ, ವಿವೇಕಾನಂದನಗರ, ಚಾಮುಂಡಿಪುರಂ ವೃತ್ತ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಸಂಚರಿಸಲಿದೆ. ಆ.24ರಂದು ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ ರಥಯಾತ್ರೆ ನಡೆಯಲಿದ್ದು, ಜಯಪುರ, ಹಂಪಾಪುರ, ಹೆಚ್‍ಡಿ ಕೋಟೆ, ಸರ ಗೂರು ಭಾಗಗಳಲ್ಲಿಯೂ ಸಂಚರಿಸಲಿದೆ ಎಂದು ತಿಳಿಸಿದರು.

ಆ.25ರಂದು ನಂಜನಗೂಡು, ಚಾಮರಾಜನಗರ ಜಿಲ್ಲೆಯ ಬೇಗೂರು, ಗುಂಡ್ಲುಪೇಟೆ, ತೆರಕಾಣಾಂಬಿ, ಆ.26 ರಂದು ಚಾಮರಾಜನಗರ ಜಿಲ್ಲೆಯ ಸಂತೆ ಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ಹನೂರು, ಕೌದಳ್ಳಿ, ಆ.27ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರ, ಬನ್ನೂರು, ಮಂಡ್ಯ ಜಿಲ್ಲೆಯ ಕಿರಗಾ ವಲು, ಮಳವಳ್ಳಿ, ಹಲಗೂರು, ಕೆಎಂ ದೊಡ್ಡಿ, ಮದ್ದೂರು, ಬೇಸಗರಹಳ್ಳಿ, ಆ.28ರಂದು ಕೊಪ್ಪ, ಮಂಡ್ಯ ನಗರ, ಶ್ರೀರಂಗಪಟ್ಟಣ, ಪಾಂಡವಪುರ, ಆ.29ರಂದು ಕಿಕ್ಕೇರಿ, ಕೆಆರ್ ಪೇಟೆ, ಮೈಸೂರು ಜಿಲ್ಲೆಯ ಸಾಲಿಗ್ರಾಮ, ಪಿರಿಯಾ ಪಟ್ಟಣದಲ್ಲಿ ರಥಯಾತ್ರೆ ಸಾಗಲಿದೆ. ಆ.30ರಂದು ಹುಣಸೂರು ಮಾರ್ಗವಾಗಿ ಮೈಸೂರಿಗೆ ಹಿಂತಿರುಗಲಿದ್ದು, ಬಳಿಕ ಮೈಸೂರು ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಎದುರು ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು. ರಥಯಾತ್ರೆ ಸಂಯೋ ಜಕ ರಜತ್, ಪ್ರತಿಷ್ಠಾನದ ಕಾರ್ಯಕರ್ತ ರಾದ ರಾಕೇಶ್‍ಭಟ್, ಶಿವಕುಮಾರ್, ನಿಶಾಂತ್ ಗೋಷ್ಠಿಯಲ್ಲಿದ್ದರು.

Translate »