ಸೇವಾಸಿಂಧು ಇ-ಪಾಸ್: ಗ್ರಾಪಂಗೆ ಮಾಹಿತಿ ನೀಡಿ
ಕೊಡಗು

ಸೇವಾಸಿಂಧು ಇ-ಪಾಸ್: ಗ್ರಾಪಂಗೆ ಮಾಹಿತಿ ನೀಡಿ

May 12, 2020

ಮಡಿಕೇರಿ, ಮೇ 11- ಕೊಡಗು ಜಿಲ್ಲೆ ಯಲ್ಲಿ ಸಿಲುಕಿಕೊಂಡಿರುವ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ರಾಜ್ಯಕ್ಕೆ ಹಿಂತಿರುಗಲು ಬಯ ಸುವ ವಲಸೆ ಕಾರ್ಮಿಕರ ಬಳಿ ಸೇವಾ ಸಿಂಧು ಇ-ಪಾಸ್ ಇಲ್ಲದಿದ್ದರೆ, ಅದನ್ನು ಸೇವಾಸಿಂಧು ಪೆÇೀರ್ಟಲ್ ಮೂಲಕ ಪಡೆದು ಹತ್ತಿರದ ಪಂಚಾಯಿತಿಗಳಿಗೆ ವರದಿ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ.

ಕಾರ್ಮಿಕರು ತಮ್ಮ ಸೇವಾಸಿಂಧು ಪಾಸ್ ಪಡೆದ ನಂತರ, ನಿಮ್ಮ ಹೆಸರುಗಳನ್ನು ಪಂಚಾ ಯತ್‍ನಲ್ಲಿ ನೋಂದಾಯಿಸಿ ಅಥವಾ 1077 ಗೆ ಕರೆ ಮಾಡುವಂತೆ ತಿಳಿಸಿದ್ದಾರೆ.ಈ ರಾಜ್ಯಗಳಿಗೆ ಒಂದೇ ದಿನದಲ್ಲಿ ಒಂದೇ ಸ್ಥಳಕ್ಕೆ ಹೋಗುವ ಕನಿಷ್ಠ 25 ಜನರು ಇದ್ದಲ್ಲಿ ಮಾತ್ರ ಜಿಲ್ಲಾಡಳಿತದಿಂದ ಕೆಎಸ್‍ಆರ್‍ಟಿಸಿ ಬಸ್ ಗಳನ್ನು ವ್ಯವಸ್ಥೆಗೊಳಿ ಸಲಾಗುವುದು. ಒಂದು ಬಾರಿಗೆ ಒಂದು ಬಸ್ಸಿ ನಲ್ಲಿ ಕೇವಲ 25 ರಿಂದ 30 ಜನರಿಗೆ ಮಾತ್ರ ಅವಕಾಶವಿರುತ್ತದೆ. ಕೆಎಸ್ ಆರ್‍ಟಿಸಿ ಬಸ್ ದರ ಪ್ರತಿ ಪ್ರಯಾಣಿಕರಿಗೆ ಪ್ರತಿ ಕಿ.ಮೀ.ಗೆ ಅಂದಾಜು 1.60 ರೂ. ಆಗಿ ರುತ್ತದೆ. ಇದರೊಂದಿಗೆ ಕೆಎಸ್‍ಆರ್‍ಟಿಸಿ ಸಾರಿಗೆ ಸಂಸ್ಥೆಯ ಇತರೆ ನಿಯಮಗಳು ಅನ್ವಯಿಸುತ್ತದೆ. ಕಾರ್ಮಿಕರಿಗೆ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಒದಗಿ ಸಲು ಮತ್ತು ವೈದ್ಯಕೀಯ ತಪಾಸಣೆಗಾಗಿ ಆರೋಗ್ಯ ಇಲಾಖೆಗೆ ಅನುಕೂಲವಾಗು ವಂತೆ ಕಾರ್ಮಿಕ ಇಲಾಖೆಗೆ ನಿರ್ದೇಶಿಸ ಲಾಗಿದೆ. ತಾಪಂ ಇಓ ಮತ್ತು ಪಪಂ ಮುಖ್ಯಾ ಧಿಕಾರಿಗಳು ಉಪ ವಿಭಾಗಾಧಿಕಾರಿಗಳೊಂ ದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವ ಹಿಸುವುದು. ಮತ್ತು ಉಪ ವಿಭಾಗಾಧಿಕಾರಿ ಗಳು ಕೆಎಸ್‍ಆರ್‍ಟಿಸಿ ಡಿಪೆÇೀ ವ್ಯವಸ್ಥಾಪಕ ರೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಸ್ತುತ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ಮುಂತಾದ ರಾಜ್ಯಗಳಿಗೆ ಮರ ಳಲು ಬಯಸುವ ವಲಸೆ ಕಾರ್ಮಿಕರಿಗೆ ಮಾತ್ರ ಇದು ಅನ್ವಯವಾಗಲಿದ್ದು, ಇತರೆ ರಾಜ್ಯಗಳ ವಲಸೆ ಕಾರ್ಮಿಕರಿಗೆ ಸ್ವ-ಸ್ಥಳಕ್ಕೆ ಹಿಂತಿರುಗುವ ಸಂಬಂಧ ಈ ರಾಜ್ಯಗಳೊಂ ದಿಗೆ ಚರ್ಚಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳ ಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.

Translate »