ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್‍ನಿಂದ ಉಳಿತಾಯ ಖಾತೆ ಅಭಿಯಾನ
ಮೈಸೂರು

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್‍ನಿಂದ ಉಳಿತಾಯ ಖಾತೆ ಅಭಿಯಾನ

January 11, 2022

ಮೈಸೂರು,ಜ.10-ನಗರದ ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಉಳಿತಾಯ ಖಾತೆ ತೆರೆಯುವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಪಡುವಾರಹಳ್ಳಿಯ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಬ್ಯಾಂಕಿನ ಅಧ್ಯಕ್ಷ ಕೆ.ಉಮಾಶಂಕರ್ ಷೇರುದಾರರ ಅರ್ಜಿಯನ್ನು ನೋಂದಣಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, 30 ಸಾವಿರಕ್ಕೂ ಹೆಚ್ಚು ಷೇರುದಾರರು ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಬ್ಯಾಂಕಿನ ಸದಸ್ಯರು ಉಳಿತಾಯ ಖಾತೆಗಳನ್ನು ತೆರೆಯಲೇಬೇಕಾಗಿದೆ. ಈ ನಿಟ್ಟಿನಲ್ಲಿ ಸದಸ್ಯರು ಜಾಗೃತಿ ಹೊಂದುವ ಮೂಲಕ ಬ್ಯಾಂಕಿನ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.

ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ಮಾತನಾಡಿ, 116 ವರ್ಷಗಳ ಇತಿಹಾಸದ ನಮ್ಮ ಬ್ಯಾಂಕಿನಲ್ಲಿ ಅರ್ಧದಷ್ಟು ಹಿರಿಯ ಸದಸ್ಯರು ಉಳಿತಾಯ ಖಾತೆಗಳನ್ನು ಹೊಂದಿಲ್ಲ. ಇದರಿಂದಾಗಿ ಕಳೆದ ಸಾಲಿನಲ್ಲಿ ನಡೆದ ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದು ಅಂದಿನ ಆಡಳಿತ ಮಂಡಳಿಯವರು ನ್ಯಾಯಾ ಲಯದ ಮೊರೆಹೋಗಿದ್ದು ಪ್ರತಿಯೊಬ್ಬ ಸದಸ್ಯರಿಗೆ ತಿಳಿದಿದೆ.

ಪ್ರತಿಯೊಬ್ಬ ಸದಸ್ಯರು ಆಯಾ ಬ್ಯಾಂಕಿನಲ್ಲಿ ಆರ್‍ಬಿಐ ನಿಯ ಮಾವಳಿ ಪ್ರಕಾರ ಕಡ್ಡಾಯವಾಗಿ ಉಳಿತಾಯ ಖಾತೆಯನ್ನು ತೆರೆಯಲೇಬೇಕು. ಆ ಮೂಲಕ ತಮ್ಮ ಮತದಾನದ ಹಾಗೂ ಕನಿಷ್ಠ ಸೌಲಭ್ಯಗಳನ್ನು ಬ್ಯಾಂಕಿನ ವತಿಯಿಂದ ಒದಗಿಸುತ್ತದೆ. ತಪ್ಪಿದಲ್ಲಿ ಈ ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕಿನ ವತಿಯಿಂದ ಆಯಾ ಬಡಾವಣೆಯಲ್ಲಿ ಇಂತಹ ಜಾಗೃತಿ ಮೂಡಿಸುವ ಸಲುವಾಗಿ ಉಳಿತಾಯ ಖಾತೆ ತೆರೆಯುವ ಅಭಿಯಾನ ಹಮ್ಮಿಕೊಂಡಿದೆ ಎಂದರು.

ಮಾಜಿ ಅಧ್ಯಕ್ಷ ಎಸ್‍ಬಿಎಂ ಮಂಜು ಮಾತನಾಡಿ, ಎಲ್ಲಾ ಪ್ರಮುಖ ಬಡಾವಣೆಯಲ್ಲಿ ಈ ಅಭಿಯಾನ ಮಾಡಲಾಗುತ್ತದೆ. ಸದಸ್ಯರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ನಿರ್ದೇಶಕರಾದ ಆರ್.ರವಿಕುಮಾರ್ ರಾಜಕೀಯ, ಜೆ.ಯೋಗೇಶ್, ಹೆಚ್.ಹರೀಶ್ ಕುಮಾರ್, ಎಸ್.ಅರವಿಂದ, ಸಿ.ರೇವಣ್ಣ, ಎಸ್.ಆರ್.ರವಿಕುಮಾರ್, ಪಿ.ರಾಜೇಶ್ವರಿ, ಪಿ.ಸವಿತಾ, ಕಾರ್ಯದರ್ಶಿ ಕೆ.ಹರ್ಷಿತ್‍ಗೌಡ, ಜನ ಹಿತ ವಿವಿಧೋದ್ದೇಶ ಸಹಕಾರ ಸಂಘದ ಎಂ.ಭೈರಪ್ಪ, ಎಂ. ಸೋಮಣ್ಣ, ಸಿ.ಡಿ.ಕುಮಾರ್, ಬಿ.ಕುಮಾರ್, ಲೋಕೇಶ್ವರ, ಸಂತೋಷ್, ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎಸ್.ಬಿ.ಶಿವು, ತಿಮ್ಮಯ್ಯ, ಜಯರಾಮ್, ಯೋಗಾನಂದ, ಸುರೇಂದ್ರ, ರಾಮಣ್ಣ, ಎಸ್.ಸುರೇಶ್, ಸ್ವಾಮಣ್ಣ,ಮಹೇಂದ್ರ ಎ.ರವಿ ಇದ್ದರು.

Translate »