ಮೈಸೂರು ವಿಜಯನಗರ 3ನೇ ಹಂತದ ಉದ್ಯಾನವನದಲ್ಲಿ ನೆರಳು ನೀಡುವ 30ಕ್ಕೂ ಹೆಚ್ಚು ಗಿಡ ಮರಗಳಿಗೆ ಕತ್ತರಿ
ಮೈಸೂರು

ಮೈಸೂರು ವಿಜಯನಗರ 3ನೇ ಹಂತದ ಉದ್ಯಾನವನದಲ್ಲಿ ನೆರಳು ನೀಡುವ 30ಕ್ಕೂ ಹೆಚ್ಚು ಗಿಡ ಮರಗಳಿಗೆ ಕತ್ತರಿ

February 18, 2021

ಮೈಸೂರು, ಫೆ.17(ಆರ್‍ಕೆಬಿ)- ಉದ್ಯಾನವನವನ್ನು ನಿರ್ವಹಣೆ ಮಾಡ ಬೇಕಾದವರೇ ಇಲ್ಲಿರುವ ಮರ, ಗಿಡಗಳ ಕಡಿದು ನಿರ್ನಾಮ ಮಾಡಿದರೆ ಉದ್ಯಾ ನವನ ನಿರ್ವಹಣೆ ಸಾಧ್ಯವೇ? ಇಂತಹ ಪ್ರಶ್ನೆ ಮೈಸೂರಿನ ವಿಜಯನಗರ 3ನೇ ಹಂತದ ಇ ಬ್ಲಾಕ್‍ನಲ್ಲಿ ವಾಟರ್ ಟ್ಯಾಂಕ್ ಬಳಿ ನಡೆದಿದೆ.

ಉದ್ಯಾನವನದಲ್ಲಿ ಹೊಂಗೆ, ಮಾವು, ಬೆಟ್ಟದ ನೆಲ್ಲಿಕಾಯಿ ಸೇರಿದಂತೆ ನಾನಾ ಮರ ಗಳನ್ನು ಬೆಳೆಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸುತ್ತಲಿನ ಪ್ರದೇಶದ ನೂರಾರು ವಾಯುವಿಹಾರಿಗಳು, ಹಿರಿಯ ನಾಗ ರಿಕರು ಈ ಉದ್ಯಾನವನದಲ್ಲಿ ವಿಹರಿ ಸುತ್ತಾರೆ. ಈ ಉದ್ಯಾನವನವನ್ನು ನಿರ್ವ ಹಣೆ ಮಾಡಲೆಂದು ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿದೆ.

ಆದರೆ ಉದ್ಯಾನವನ ನಿರ್ವಹಣೆ ಮಾಡ ಬೇಕಾದ ವ್ಯಕ್ತಿ ನಿರ್ವಹಣೆಗೆ ಬದಲಾಗಿ ಇನ್ನು ಬೆಳೆಯುವ ಹಂತದಲ್ಲಿದ್ದ ಹೊಂಗೆ ಇನ್ನಿತರೆ ಗಿಡಗಳ ರೆಂಬೆ, ಕೊಂಬೆಗಳನ್ನು ಕಡಿದು ಹಾಕಿ ಬೋಳು ಮಾಡಿದ್ದಾರೆ ಎಂದು ವಾಯುವಿಹಾರಿಗಳು `ಮೈಸೂರು ಮಿತ್ರ’ನಲ್ಲಿ ದೂರಿದ್ದಾರೆ.

ಉದ್ಯಾನವನದಲ್ಲಿ ಕುಳಿತುಕೊಳ್ಳಲು ಹಾಕಲಾಗಿರುವ ಸಿಮೆಂಟ್ ಬೆಂಚುಗಳ ಸುತ್ತಲೂ ನೆರಳಿಗಾಗಿ ಬೆಳೆಸಲಾಗುತ್ತಿದ್ದ ಗಿಡಗಳನ್ನು ಕಡಿದು ತುಂಡು ಮಾಡಲಾ ಗಿದೆ. ಇಂತಹ ಸುಮಾರು 20ಕ್ಕೂ ಹೆಚ್ಚು ಗಿಡಗಳನ್ನು ಕತ್ತರಿಸಿದ್ದು ಕಂಡು ಬಂದಿದೆ. ಜೊತೆಗೆ ಕತ್ತರಿಸಿದ ಗಿಡಗಳ ಕಟ್ಟಿಗೆಯ ತುಂಡುಗಳನ್ನು ಒಂದೆಡೆ ರಾಶಿ ಹಾಕಿದ್ದು, ರೆಂಬೆ, ಕೊಂಬೆಗಳನ್ನು ಅಲ್ಲಲ್ಲಿ ಬಿಸಾಡ ಲಾಗಿದೆ ಎಂದು ಹಿರಿಯ ನಾಗರಿಕರು ದೂರಿದ್ದಾರೆ. ಸುಂದರ ಉದ್ಯಾನವನದಲ್ಲಿ ಮರ ಗಿಡಗಳ ಕತ್ತರಿಸಿರುವುದನ್ನು ಪರಿಸರ ಪ್ರೇಮಿಗಳು, ಹಿರಿಯ ನಾಗರಿಕರು ತೀವ್ರ ವಾಗಿ ಆಕ್ಷೇಪಿಸಿದ್ದಾರೆ. ಉದ್ಯಾನವನವನ್ನು ಇನ್ನಷ್ಟು ಸುಂದರಗೊಳಿಸಿ, ಪರಿಸರವನ್ನು ಹಸಿರು ಮಾಡಬೇಕಾದವರೇ ಮರಗಳನ್ನು ಕಡಿದು ಹಾಕುವುದಾದರೆ ಪರಿಸರ ಉಳಿ ದೀತೇ ಎಂಬುದು ಹಿರಿಯ ನಾಗರಿಕ ರೊಬ್ಬರ ಯಕ್ಷ ಪ್ರಶ್ನೆ.

Translate »