ಇಂದಿನಿಂದ ಕೊಡಗಿನಿಂದ ಬರುವ ಎಲ್ಲಾ ವಾಹನಗಳೂ ಸ್ಕ್ರೀನಿಂಗ್ ಜಿಲ್ಲಾ ಗಡಿಯಲ್ಲಿ ಸಿದ್ಧತೆ
ಮೈಸೂರು

ಇಂದಿನಿಂದ ಕೊಡಗಿನಿಂದ ಬರುವ ಎಲ್ಲಾ ವಾಹನಗಳೂ ಸ್ಕ್ರೀನಿಂಗ್ ಜಿಲ್ಲಾ ಗಡಿಯಲ್ಲಿ ಸಿದ್ಧತೆ

March 21, 2020

ಮೈಸೂರು,ಮಾ.20-ಕೊಡಗಿನ ವ್ಯಕ್ತಿಗೆ ಕೊರೊನಾ ವೈರಸ್ ದೃಢಪಟ್ಟಿರುವ ಹಿನ್ನೆಲೆ ಯಲ್ಲಿ ಕೊಡಗಿನಿಂದ ಮೈಸೂರಿನತ್ತ ಬರುವ ಎಲ್ಲಾ ವಾಹನಗಳನ್ನೂ ಸ್ಕ್ರೀನಿಂಗ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಶನಿವಾರ ದಿಂದ ಈ ಕಾರ್ಯ ಆರಂಭವಾಗಲಿದೆ.

ಕೊಡಗು ಗಡಿಯಲ್ಲಿ ಇದಕ್ಕಾಗಿಯೇ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು, ಅಗತ್ಯ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿದೆ. ಕೊಡಗಿನಿಂದ ಯಾವುದೇ ವಾಹನ ಬಂದರೂ, ಅದರಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡಲಾಗುವುದು. ಅವರಲ್ಲಿ ಯಾರಿಗಾ ದರೂ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದರೆ ಅವರನ್ನು ತಪಾಸಣೆಗೊಳಪಡಿಸಿ ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

Translate »