ಕೊರೊನಾ ಎಫೆಕ್ಟ್: ರಾಜ್ಯದ ಎಲ್ಲಾ ದೇವಸ್ಥಾನಗಳು ಬಂದ್ ಮುಜರಾಯಿ ಇಲಾಖೆ ಆದೇಶ
ಮೈಸೂರು

ಕೊರೊನಾ ಎಫೆಕ್ಟ್: ರಾಜ್ಯದ ಎಲ್ಲಾ ದೇವಸ್ಥಾನಗಳು ಬಂದ್ ಮುಜರಾಯಿ ಇಲಾಖೆ ಆದೇಶ

March 21, 2020

ಬೆಂಗಳೂರು, ಮಾ. 20- ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ದೇಶಾದ್ಯಂತ ವಿವಿಧ ರೀತಿಯ ನಿರ್ಬಂಧ, ನಿಷೇಧಗಳು ಚಾಲನೆಯಲ್ಲಿವೆ. ಹಲವೆಡೆ ಕರ್ಫ್ಯೂ ಹೇರಲಾಗಿದೆ. ರಾಜ್ಯದ ಮುಜರಾಯಿ ಇಲಾಖೆಯು ತನ್ನ ಎಲ್ಲಾ ದೇವಸ್ಥಾನಗಳಿಗೆ ನಿರ್ಬಂಧ ಹೇರಿದೆ. ಅನಿರ್ದಿ ಷ್ಟಾವಧಿಯವರೆಗೆ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಮುಂದಿನ ಆದೇಶ ದವರೆಗೂ ಈ ನಿರ್ಬಂಧ ಮುಂದುವರಿಯಲಿದೆ.

ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯ ಕ್ರಮ, ಉತ್ಸವ, ಪ್ರಸಾದ ವಿತರಣೆ, ದಾಸೋಹ ಇತ್ಯಾದಿಗಳನ್ನ ರಾಜ್ಯ ಸರ್ಕಾರ ನಿಷೇಧಿಸಿತ್ತು. ಈಗ ದೇವಸ್ಥಾನಗಳನ್ನೂ ಬಂದ್ ಮಾಡಲು ಆದೇಶಿಸ ಲಾಗಿದೆ. ದೇವಸ್ಥಾನ ತೆರೆಯದೇ ಇದ್ದರೂ ಅರ್ಚಕರು, ಸಿಬ್ಬಂದಿಯವರು ದೇವರ ಪೂಜೆಗೆ ಅವಕಾಶ ಮಾಡಿ ಕೊಡಲಾಗುತ್ತದೆ. ದೇವಸ್ಥಾನದ ಆವರಣದ ಒಳಗೆ ಯಾವ ಸಾರ್ವಜನಿಕರನ್ನೂ ಸೇರಿಸಿಕೊಳ್ಳದೇ ಪೂಜೆ, ಹೋಮ ಹವನ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಸಾರ್ವಜನಿಕರ ಪ್ರವೇಶವನ್ನಷ್ಟೇ ನಿಷೇಧಿಸಲಾಗಿದೆ.

ದೆಹಲಿ, ಮುಂಬೈ, ಪುಣೆ ಮೊದಲಾದ ನಗರಗಳಲ್ಲಿ ಶಾಲಾ, ಕಾಲೇಜು, ಕಚೇರಿ, ಮಾಲ್‍ಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಭಾರತದಲ್ಲಿ ಸೋಂಕು ಸದ್ಯಕ್ಕೆ ನಿಧಾನಗತಿಯಲ್ಲಿ ಹರಡುತ್ತಿದೆಯಾದರೂ ಸಾಕಷ್ಟು ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳದಿದ್ದರೆ ಸೋಂಕು ಹರಡುವಿಕೆಯ ವೇಗವಾಗಿ ಹೆಚ್ಚಾಗಬಹುದು ಎಂದು ಅನೇಕ ತಜ್ಞರು ಎಚ್ಚರಿಸಿದ್ದಾರೆ. ಚೀನಾ, ಇಟಲಿ ಮೊದಲಾದ ದೇಶಗಳಲ್ಲೂ ಆರಂಭದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಪರಿಸ್ಥಿತಿ ಕೈಮೀರಿ ಹೋಗಿತ್ತು. ಭಾರತದಲ್ಲೂ ಅಂಥ ಸ್ಥಿತಿ ಬರುವ ಸಾಧ್ಯತೆ ಇದೆ. ಇದನ್ನು ಎದುರಿಸಲು ಪರೀಕ್ಷಾ ಕಿಟ್, ಕೇಂದ್ರಗಳ ಪ್ರಮಾಣ ಗಣನೀಯವಾಗಿ ಹೆಚ್ಚಿಸಬೇಕು. ನಿರ್ಬಂಧ, ನಿಷೇಧ ಇತ್ಯಾದಿ ಕ್ರಮಗಳನ್ನು ಹೆಚ್ಚು ಕಾಲ ಮತ್ತು ಹೆಚ್ಚು ವ್ಯಾಪಕವಾಗಿ ಮಾಡುವ ಅಗತ್ಯ ಇದೆ ಎನ್ನುತ್ತಾರೆ ತಜ್ಞರು.

Translate »