ಕೊರೊನಾ: ಪ್ರವಾಸಿಗರಿಲ್ಲದೆ ಟಾಂಗಾವಾಲಾಗಳ ಸಂಕಷ್ಟ!
ಮೈಸೂರು

ಕೊರೊನಾ: ಪ್ರವಾಸಿಗರಿಲ್ಲದೆ ಟಾಂಗಾವಾಲಾಗಳ ಸಂಕಷ್ಟ!

March 21, 2020

ಮೈಸೂರು,ಮಾ.20(ವೈಡಿಎಸ್)-ಕೊರೊನಾ ಕರಿನೆರಳು ಮೈಸೂರಿನ ಟಾಂಗಾ ವಾಲಾಗಳ ಮೇಲೆ ಬಿದ್ದಿದ್ದು, ಜೀವನ ನಡೆಸಲಾಗದ ಪರಿಸ್ಥಿತಿ ಎದುರಾಗಿದೆ.

ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬರುವ ವಿದೇಶಿಗರು, ಸಾರೋಟು, ಟಾಂಗಾಗಾಡಿಗಳಲ್ಲಿ ಸಂಚರಿಸಿ ಚರ್ಚ್, ಅರಮನೆ, ಜಗನ್ಮೋಹನ ಅರಮನೆ, ಮೃಗಾಲಯ ಮತ್ತಿತರೆ ಸ್ಥಳಗಳನ್ನು ವೀಕ್ಷಿ ಸುತ್ತಿದ್ದರು. ಟಾಂಗಾ ಸವಾರಿ ಪ್ರವಾಸಿಗ ರಿಗೆ ಮುದ ನೀಡುತ್ತಿತ್ತು. ಇದರಿಂದ ಬಂದ ಹಣದಿಂದ ಟಾಂಗಾವಾಲಾಗಳು ಜೀವ ನದ ಬಂಡಿ ಸಾಗಿಸುತ್ತಿದ್ದರು. ಕೊರೊನಾ ಭೀತಿಯಿಂದಾಗಿ ಮೈಸೂರಿಗೆ ಪ್ರವಾಸಿ ಗರು ಬರುವುದೇ ನಿಂತು ಹೋಗಿದೆ. ಪ್ರವಾ ಸಿಗರನ್ನೇ ನಂಬಿಕೊಂಡಿದ್ದ ಸಾರೋಟು, ಟಾಂಗಾಗಾಡಿಗಳು ಖಾಲಿ ಹೊಡೆಯು ತ್ತಿವೆ. ನಿತ್ಯ ಕುದುರೆ ಮತ್ತು ಮನೆ ನಿರ್ವ ಹಣೆಗೂ ಪರಿತಪಿಸುವಂತಾಗಿದೆ.

`ಮೈಸೂರು ಮಿತ್ರ’ ಜತೆ ಶುಕ್ರವಾರ ಮಾತನಾಡಿದ ಗಾಂಧಿನಗರ ನಿವಾಸಿ, ಟಾಂಗಾವಾಲ ನಿಖಿಲ್, 15 ದಿನಗಳ ಹಿಂದೆ ಮೈಸೂರಿಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರನ್ನು ಟಾಂಗಾದಲ್ಲಿ ಚರ್ಚ್, ಅರಮನೆ, ಲಲಿತ ಮಹಲ್ ಪ್ಯಾಲೇಸ್, ಮೃಗಾಲಯ ಮತ್ತಿತರೆ ಸ್ಥಳಗಳಿಗೆ ಕರೆದು ಕೊಂಡು ಹೋಗುತ್ತಿದ್ದೆವು. ದಿನಕ್ಕೆ ಸಣ್ಣ ಟಾಂಗಾಗೆ 600-700 ರೂ., ಸಾರೋಟ್ ಗಳಿಗೆ 800-900 ರೂ. ಸಂಪಾದನೆ ಆಗು ತ್ತಿತ್ತು. ಕುದುರೆ ಆಹಾರಕ್ಕೆ 300ರೂ., ಗಾಡಿ ಮಾಲೀಕರಿಗೆ 200 ರೂ. ನೀಡುತ್ತಿದ್ದೆವು. ಉಳಿದ 200 ಅಥವಾ 300 ರೂ.ನಲ್ಲಿ ಬದುಕಿನ ಬಂಡಿ ಸಾಗುತ್ತಿತ್ತು. ಕೊರೊನಾ ನಮ್ಮನ್ನು ಬೀದಿಗೆ ತಳ್ಳಿದೆ ಎಂದು ಅಲ ವತ್ತುಕೊಂಡರು.

4 ಸಾವಿರ ರೂ. ಮನೆ ಬಾಡಿಗೆ ಕಟ್ಟಬೇಕು. ಜೀವನ ನಡೆಸಲು ದಿನಕ್ಕೆ 400 ರೂ. ಬೇಕು. ಆದರೆ, 1 ವಾರದಿಂದ ದುಡಿ ಮೆಯೇ ಇಲ್ಲದಂತಾಗಿದೆ. ಟಾಂಗಾವನ್ನೇ ನಂಬಿ ಜೀವನ ನಡೆಸುತ್ತಿದ್ದ ನಮ್ಮ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಬೇಸರ ವ್ಯಕ್ತ ಪಡಿಸಿದರು.

ಟ್ರಿಣ್‍ಟ್ರಿಣ್ ಬಂದ್: ಸಾರ್ವಜನಿಕರು, ಪ್ರವಾಸಿಗರ ಅನುಕೂಲಕ್ಕಾಗಿ ಇರುವ `ಟ್ರಿಣ್ ಟ್ರಿಣ್’ ಸೈಕಲ್ ಸೇವೆಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಬಂದ್ ಮಾಡಿದೆ. ಈ ಸೈಕಲ್‍ಗಳನ್ನು ಸ್ಥಳೀಯರಿಗಿಂತ ಹೆಚ್ಚಾಗಿ ಪ್ರವಾಸಿಗರು, ವಿದೇಶಿಗರು ಬಳಸುತ್ತಿದ್ದರು.

Translate »