ಇಂದು ದ್ವಿತೀಯ  ಪಿಯು ಫಲಿತಾಂಶ
News

ಇಂದು ದ್ವಿತೀಯ ಪಿಯು ಫಲಿತಾಂಶ

July 20, 2021

ಬೆಂಗಳೂರು: 2020-21ನೇ ಸಾಲಿನ ಪಿಯುಸಿ ಫಲಿತಾಂಶ (ಏಚಿಡಿಟಿಚಿಣಚಿಞಚಿ 2ಟಿಜ PU ಖesuಟಣ) ನಾಳೆ ಸಂಜೆ ಪ್ರಕಟವಾಗಲಿದೆ ಎಂದು ಪಿಯು ಮಂಡಳಿ ನಿರ್ದೇ ಶಕಿ ಸ್ನೇಹಲ್ ತಿಳಿಸಿದ್ದಾರೆ. ನಾಳೆ ಸಂಜೆ 4. 30ಕ್ಕೆ ಪಿಯು ಮಂಡಳಿ ಜಾಲತಾಣದಲ್ಲಿ ಫಲಿತಾಂಶ ಪ್ರಕಟ ವಾಗಲಿದೆ. hಣಣಠಿ://ಠಿue.ಞಚಿಡಿ.ಟಿiಛಿ.iಟಿ/ ವೈಬ್ ಸೈಟ್ ಮೂಲಕ ಫಲಿತಾಂಶ ಪ್ರಕಟವಾಗಲಿದ್ದು, ಫಲಿ ತಾಂಶಕ್ಕೂ ಮುನ್ನ ಏಟಿoತಿ mಥಿ ಡಿegisಣeಡಿ ಟಿumbeಡಿ ಮೂಲಕ ರಿಜಿಸ್ಟರ್ ನಂಬರ್ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೊರೊನಾ ಹಿನ್ನಲೆಯಲ್ಲಿ ಈ ಬಾರಿ ಪರೀಕ್ಷೆ ನಡೆಸದೇ ಎಸ್‍ಎಸ್‍ಎಲ್‍ಸಿ, ಪ್ರಥಮ ಪಿಯುಸಿ ಫಲಿತಾಂಶ ಹಾಗೂ ಆಂತರಿಕ ಅಂಕಗಳ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟ ಮಾಡಲಾಗುತ್ತಿದೆ. ನಾಳೆ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳಿಗೆ ಒಪ್ಪಿಗೆ ಇಲ್ಲವಾದರೆ ಅವರು ಆಗಸ್ಟ್‍ನಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷಾ ಫಲಿತಾಂಶ ತಿರಸ್ಕರಿಸುವ ವಿದ್ಯಾರ್ಥಿಗಳು ಮತ್ತೆ ಹಳೆ ಅಂಕ ಪಡೆಯಲು ಅವಕಾಶ ಇಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಈ ವರ್ಷ 5 ಲಕ್ಷ 90 ಸಾವಿರದ 153 ಹೊಸ ವಿದ್ಯಾರ್ಥಿಗಳು ಮತ್ತು 76 ಸಾವಿರ 344 ರಿಪೀಟರ್ಸ್ ಸೇರಿದಂತೆ ಒಟ್ಟು 6 ಲಕ್ಷ 66 ಸಾವಿರದ 497 ವಿದ್ಯಾರ್ಥಿಗಳ ಫಲಿತಾಂಶ ನಾಳೆ ಪ್ರಕಟವಾಗಲಿದೆ.

ಈ ವರ್ಷ ದ್ವಿತೀಯ ಪಿಯುಸಿಗೆ ಪರೀಕ್ಷೆ ನಡೆಸದೆ ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶ ನೀಡುವುದಾಗಿ ಈ ಹಿಂದೆ ಸರ್ಕಾರ ಘೋಷಿಸಿತ್ತು. ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಎಸ್‍ಎಸ್‍ಎಲ್‍ಸಿ, ಪ್ರಥಮ ಪಿಯುಸಿ ಅಂಕಗಳನ್ನು ಮಾನ ದಂಡವನ್ನಾಗಿ ಪರಿಗಣಿಸಿ, ವೃತ್ತಿಪರ ಕೋರ್ಸ್‍ಗೆ ಸಿಇಟಿ ಪರೀಕ್ಷೆಯ ಫಲಿತಾಂಶ ವನ್ನು ಮಾತ್ರ ಪರಿಗಣಿಸುವುದಾಗಿ ಘೋಷಿಸಲಾಗಿದೆ.

ಫಲಿತಾಂಶ ನೋಡುವುದು ಹೇಗೆ?: ಪ್ರತಿ ವರ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದ ರಿಜಿಸ್ಟರ್ ನಂ ಮೂಲಕ ಫಲಿತಾಂಶವನ್ನು ನೋಡುತ್ತಿದ್ದರು. ಆದರೆ, ಈ ಬಾರಿ ಪರೀಕ್ಷೆ ಬರೆಯದೇ ಯಾವ ರಿಜಿಸ್ಟರ್ ನಂಬರ್ ಮೂಲಕ ಫಲಿತಾಂಶ ನೋಡುವುದು ಎಂಬ ಅನುಮಾನ ಇದೆ. ಇದೇ ಕಾರಣಕ್ಕೆ ಪಿಯು ಮಂಡಳಿ ಈ ಬಾರಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕ ರಿಜಿಸ್ಟರ್ ನಂಬರ್ ಸೃಷ್ಟಿಸಿದೆ. ಇದನ್ನು ಕೂಡ ಮಂಡಳಿಯ ವೆಬ್‍ಸೈಟ್ ಮೂಲಕವೇ ಪಡೆಯಬೇಕಾಗಿದೆ. ಈಗಾಗಲೇ ಈ ರಿಜಿಸ್ಟರ್ ನಂಬರ್ ಪಡೆಯಲು ಅವಕಾಶ ನೀಡಲಾಗಿದೆ.

ಮಂಡಳಿಯ ವೆಬ್‍ಸೈಟ್ hಣಣಠಿ://ಠಿue.ಞಚಿಡಿ.ಟಿiಛಿ.iಟಿ/ ತೆರೆದಾಕ್ಷಣ ನಿಮಗೆ ಏಟಿoತಿ mಥಿ ಡಿegisಣeಡಿ ಟಿumbಚಿಡಿ ಎಂಬ ಲಿಂಕ್ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಅದರ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ರಿಜಿಸ್ಟರ್ ನಂಬರ್ ಸಿಗಲಿದೆ. ಈ ಲಿಂಕ್ ಮೂಲಕ ವಿದ್ಯಾರ್ಥಿಗಳು ಫಲಿತಾಂಶ ಪಡೆಯಬಹುದು.ಪಿಯು ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Translate »